ಮುಂಬೈ:ಬಿಷ್ಣೋಯ್ ಸಮುದಾಯ ಆರಾಧಿಸುವ ಕೃಷ್ಣಮೃಗವನ್ನು ಭೇಟೆಯಾಡಿದ ಸಲ್ಮಾನ್ ಖಾನ್ ಮತ್ತೆ ಗಡಗಡ ನಡುಗುತ್ತಿದ್ದಾನೆ. ಕೃಷ್ಣಮೃಗ ಭೇಟೆಯಾಡಿದ ದಿನದಿಂದ ಇಂದಿನ ವರೆಗೂ ಕೂಡ ಸಲ್ಮಾನ್ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯ್ ಜೀವ ಬೆದರಿಕೆಯಲ್ಲೇ ಜೀವನ ಕಳೆಯಬೇಕಾಗಿದೆ.ಜೀವ ಭಯದಿಂದ ಸಲ್ಮಾನ್ ಖಾನ್ ದುಬಾರಿ ಸೆಕ್ಯುರಿಟಿ, ಬುಲೆಟ್ ಪ್ರೂಪ್ ಕಾರು ಖರೀದಿಸಿದರೂ ಕೂಡ ಇದೀಗ ಮತ್ತೆ ಬಿಷ್ಣೋಯ್ ಗ್ಯಾಂಗ್ ಸಲ್ಮಾನ್ ಖಾನ್ ನನ್ನು ಬಿಟ್ಟು ಬಿಡದೆ ಕಾಡುತ್ತಿದೆ.
ಶೂಟಿಂಗ್ ಸ್ಥಳಕ್ಕೆ ಬಂದ ಅನಾಮಿಕ!
ಸಾಲು ಸಾಲು ಜೀವ ಬೆದರಿಕೆಗಳಿಂದ ಕಂಗಾಲಾಗಿರುವ ಸಲ್ಮಾನ್ ಖಾನ್ ಇತ್ತೀಚೆಗಷ್ಟೇ ಬಿಷ್ಣೋಯ್ ಗ್ಯಾಂಗ್ ನಡೆಸಿದ ಶೂಟ್ಔಟ್ ನಲ್ಲಿ ಕೂದಲೆಳೆಯ ಅಂತರದಿಂದ ಜೀವ ಉಳಿಸಿಕೊಂಡಿದ್ದಾನೆ. ಇದೀಗ ನಿನ್ನೆಯಷ್ಟೇ ಮುಂಬೈನಲ್ಲಿ ಸಲ್ಮಾನ್ ಖಾನ್ ಹೊಸ ಚಿತ್ರದ ಶೂಟಿಂಗ್ ಸ್ಥಳಕ್ಕೆ ಬಿಗಿ ಭದ್ರತೆಯನ್ನು ದಾಟಿ ಅನಾಮಿಕನೊಬ್ಬ ಒಳ ಪ್ರವೇಶಿಸಿದ್ದು, ವಿಚಾರಣೆ ನಡೆಸಿದಾಗ 'ಬಿಷ್ಣೋಯ್ ಗೆ ಹೇಳುತ್ತೇನೆ' ಎಂದಿದ್ದಾನೆ. ಇದು ಸಲಾನ್ ಖಾನ್ ಗೆ ನುಂಗಲಾರದ ತುತ್ತಾಗಿದೆ.
ಯಾಕಾಗಿ ಈ ಸೇಡು!
ಕೆಲವಾರು ವರ್ಷಗಳ ಹಿಂದೆ ನಟ ಸಲ್ಮಾನ್ ಖಾನ್ ಕುಡಿದ ಅಮಲಿನಲ್ಲಿ ಕೃಷ್ಣಮೃಗವನ್ನು ಭೇಟೆಯಾಡಿ ಕೊಂಡಿದ್ದ. ಕೃಷ್ಣಮೃಗ ಬಿಷ್ಣೋಯ್ ಸಮುದಾಯ ಆರಾಧಿಸುವ ಪ್ರಾಣಿಯಾಗಿರುವ ಕಾರಣ ಮಾಡಿದ ತಪ್ಪಿಗಾಗಿ ಸಲ್ಮಾನ್ ಕ್ಷಮೆ ಕೇಳಬೇಕು ಎಂಬುದು ಲಾರೆನ್ಸ್ ಬಿಷ್ಣೋಯ್ ಹಠ. ಆದರೆ ಸಲ್ಮಾನ್ ಇದಕ್ಕೆ ಒಪ್ಪಿಲ್ಲ. ಇದೇ ಕಾರಣದಿಂದ ಲಾರೆನ್ಸ್ ಬಿಷ್ಣೋಯ್ ಸಲ್ಮಾನ್ ಖಾನ್ ಹತ್ಯೆಗಾಗಿ ಸಾಲು ಸಾಲು ಬೆದರಿಕೆ ಹಾಗೂ ಸಂಚು ರೂಪಿಸುತ್ತಿದ್ದಾನೆ.