ಕಡಬ: ಜೆಸಿಐ ವಲಯ ತರಬೇತುದಾರ ಮತ್ತು ಶಾಂತಿನಗರ ಹಿರಿಯ ಪ್ರಾಥಮಿಕ ಶಾಲೆಯ ಪ್ರಮುಖ ಮುಖ್ಯೋಪಾಧ್ಯಾಯರಾದ ಪ್ರದೀಪ್ ಬಾಕಿಲ (43) ಅವರು ಡಿಸೆಂಬರ್ 5ರಂದು ಹೃದಯಾಘಾತದಿಂದ ವಿಧಿವಶರಾದರು.
ಪ್ರದೀಪ್ ಬಾಕಿಲ ಅವರು ಜೆಸಿಐ ಪೂರ್ವ ವಲಯ ಉಪಾಧ್ಯಕ್ಷರಾಗಿದ್ದು, ಸತತ 25 ಗಂಟೆಗಳ ಕಾಲ ತರಬೇತಿ ನೀಡುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಪ್ರಶಸ್ತಿ ವಿಜೇತರಾಗಿದ್ದರು. ಡಿಸೆಂಬರ್ 4ರಂದು ಸಂಜೆ ಅಂಗಳದಲ್ಲಿ ಕುಸಿದು ಬಿದ್ದು ಹೃದಯಾಘಾತದಿಂದ ನಿಧನರಾಗಿದ್ದಾರೆ ಎನ್ನಲಾಗಿದೆ. ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.