ಕಾಪು:ಪರಿಸರ ಮಾಲಿನ್ಯ ದ ಆರೋಪದ ಮೇರೆಗೆ ಫಿಶ್ ಫ್ಯಾಕ್ಟರಿ ಸೀಸ್!

  • 05 Dec 2024 03:35:45 PM

ಕಾಪು : ತವಕ್ಕಲ್ ಫಿಶ್ ಫ್ಯಾಕ್ಟರಿಯ ಮೇಲೆ ಹಲವು ವರ್ಷಗಳಿಂದ ಪರಿಸರ ಮಾಲಿನ್ಯದ ಆರೋಪವು ಕೇಳಿ ಬರುತ್ತಿತ್ತು. ಇದೀಗ ಈ ಕಾರ್ಖಾನೆ ವಿರುದ್ಧ ಸಾರ್ವನಿಕರ ದೂರಿನ ಹಿನ್ನೆಲೆಯಲ್ಲಿ ತಹಶೀಲ್ದಾರ್ ಪ್ರತಿಭಾ ಅವರು ಈ ಫ್ಯಾಕ್ಟರಿಯನ್ನು ಮುಟ್ಟುಗೋಲು ಹಾಕಿದ್ದಾರೆ.

 

ಪರಿಸರ ಮಾಲಿನ್ಯವನ್ನು ತಡೆಗಟ್ಟವ ಯಾವುದೇ ನಿಯಮಗಳನ್ನು ಕಾರ್ಖಾನೆಯು ಕೈಗೊಂಡಿಲ್ಲವೆಂದು ಕಾರ್ಖಾನೆಯಿಂದ ಹೊರಬರುವ ಕೆಟ್ಟ ವಾಸನೆ ಗ್ರಾಮಸ್ಥರಿಗೆ ನರಕಯಾತನೆಯಾಗಿತ್ತು. ಕಾರ್ಖಾನೆಯ ಪರಿಶೀಲನೆಯ ನಂತರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಈ ಫಿಶ್ ಫ್ಯಾಕ್ಟರಿಯನ್ನು ಮುಟ್ಟುಗೋಲು ಹಾಕಲು ಆದೇಶ ನೀಡಿದ್ದಾರೆ.

 

ತನಿಖೆ ನಡೆಸಿದ ಅಧಿಕಾರಿಗಳ ಆದೇಶದಂತೆ ಪರಿಸರ ಮಾಲಿನ್ಯಕ್ಕೆ ಕಾರಣವಾಗಿದ್ದ ಕಾಪು ತಾಲ್ಲೂಕಿನ ಪಡು ಗ್ರಾಮದ ತವಕ್ಕಲ್ ಫಿಶ್ ಫ್ಯಾಕ್ಟರಿಗೆ ಬೀಗ ಜಡಿಯಲಾಗಿದೆ. ಪರಿಸರ ವಿರೋಧಿಯಾಗಿ ಕಾರ್ಯಾಚರಿಸುತ್ತಿರುವ ಎಲ್ಲಾ ಕಾರ್ಖಾನೆಗಳಿಗೆ ಎಚ್ಚರಿಕೆಯನ್ನು ನೀಡಿ ತಹಶೀಲ್ದಾರ್ ಪ್ರತಿಭಾ ಅವರು ಫ್ಯಾಕ್ಟರಿಗೆ ಬೀಗ ಜಡಿದಿದ್ದಾರೆ.