ಪೇಜಾವರ ಮಠಾಧೀಶರ ಕುರಿತು ತಪ್ಪು ಹೇಳಿಕೆಗಳ ಅಪಪ್ರಚಾರಕ್ಕೆ ವಿ ಎಚ್ ಪಿ ಯ ಖಂಡನೆ!

  • 05 Dec 2024 04:34:37 PM

ಮಂಗಳೂರು: ಪೇಜಾವರ ಮಠಾಧೀಶರಾದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿಯರ ಬಗ್ಗೆ ಕೆಲವು ಸಂಘಟನೆಗಳು ತಪ್ಪು ಹೇಳಿಕೆಗಳನ್ನು ಪ್ರಚಲಿಸುತ್ತಿದೆ ಎಂದೂ ಸ್ವಾಮೀಜಿಯವರು ಸಂವಿಧಾನ ಬದ್ಧತೆಯನ್ನು ಸಮರ್ಪಕವಾಗಿ ಪಾಲಿಸುತ್ತಿದ್ದರೂ, ಅವರ ಹೇಳಿಕೆಯ ಕುರಿತು ಸುಳ್ಳು ಪ್ರಚಾರ ನಡೆಸಲಾಗುತ್ತಿದೆ ಎಂದು ಇದನ್ನು ವಿಶ್ವ ಹಿಂದೂ ಪರಿಷತ್ (VHP) ತೀವ್ರವಾಗಿ ಖಂಡಿಸುತ್ತಿದೆ.

 

 

 ಪೇಜಾವರ ಸ್ವಾಮೀಜಿಯವರು ಹಿಂದೂ ಸಮಾಜದ ಎಲ್ಲಾ ವರ್ಗಗಳಿಗೆ ಸಮಾನ ಗೌರವ ನೀಡುತ್ತಾರೆ. ವಿಶೇಷವಾಗಿ ದಲಿತರನ್ನು ಹಿಂದೂ ಸಮಾಜದ ಅವಿಭಾಜ್ಯ ಅಂಗವಾಗಿ ಪರಿಗಣಿಸುತ್ತಿದ್ದಾರೆ. ಹೀಗಿರುವಾಗ ಸ್ವಾಮೀಜಿಯವರ ಮೇಲೆ ಉದ್ದೇಶಪೂರ್ವಕವಾಗಿ ಆರೋಪ ಮಾಡುವುದು ಅತೀ ಖಂಡನೀಯ ಎಂದು ವಿಶ್ವ ಹಿಂದೂ ಪರಿಷದ್ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ಅವರು ಹೇಳಿದ್ದಾರೆ.

 

ಸ್ವಾಮೀಜಿಯವರು ಸಂವಿಧಾನ ಬದಲಾವಣೆ ಕುರಿತ ಯಾವುದೇ ಹೇಳಿಕೆ ನೀಡಿರಲಿಲ್ಲ. ಆದರೂ, ಕೆಲ ಸಂಘಟನೆಗಳು ಸುಳ್ಳು ಪ್ರಚಾರ ಮಾಡುತ್ತಿರುವುದು ಆಘಾತಕಾರವಿಷಯವೆಂದು ಈ ಸುಳ್ಳು ಹೇಳಿಕೆಗಳನ್ನು ಹಿಂಪಡೆಯ ಬೇಕೆಂದು ವಿಶ್ವ ಹಿಂದೂ ಪರಿಷತ್ ಆಗ್ರಹಿಸಿದೆ. ಇಂತಹ ಕೆಲಸಗಳಲ್ಲಿ ತೊಡಗಿರುವವರ ವಿರುದ್ಧ ಸರ್ಕಾರ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕೂಡ ತಿಳಿಸಿದ್ದಾರೆ.