ಕೇರಳ ದೇವರನಾಡಿನ ಕಣ್ಣೂರಿನ ಮಡಾಯಿ ಕಾವಿನ ಭಗವತಿ ಅಮ್ಮನವರ ಚರಿತ್ರೆ ಹೇಳೋದಾದ್ರೆ ಮೊದಲು ಕಡಲಿದ್ದ ಜಾಗವಾಗಿತ್ತು. ಪರಶುರಾಮರು ಶಂಖದಲ್ಲಿ ದೇವಿಯನ್ನು ಆವಾಹಿಸಿ ಎಸೆದುದರಿಂದ ಕಡಲು ಸರಿದು ಭೂ ಪ್ರದೇಶವಾಯಿತು,ಎನ್ನುವುದು ಉಲ್ಲೇಖ.ಮೊದಲು ಈ ದೇವತೆ ತಳಿಪರಂಬು ರಾಜಾರಾಜೇಶ್ವರಿ ಮಾತೆಯಾಗಿದ್ದರು. ಅಲ್ಲಿ ಶಾಂತ ಪೂಜೆಯಲ್ಲಿ ದೇವಿಯನ್ನು ಆರಾಧಿಸಿಕೊಂಡು ಬರ್ತಾರೆ. ಆದ್ರೆ ಅದರಲ್ಲಿ ಸಂತೃಪ್ತಿ ಕಾಣದ ದೇವಿ ಅಲ್ಲಿ ನಾನಾ ರೀತಿ ತನ್ನ ಅತೃಪ್ತಿಯನ್ನು ತೋರ್ಪಡಿಸಿದ್ದು ಜ್ಯೋತಿಷ್ಯ ಪ್ರಶ್ನೆ ಚಿಂತನೆಯಲ್ಲಿ ನೋಡಿದಾಗ ಅಲ್ಲಿ ಇನ್ನು ಮುಂದೆ ಈ ದೇವಿ ಚೈತನ್ಯ ಆರಾಧಿಸಿಕೊಂಡು ಬರುವುದು ಆಪತ್ತಿಗೆ ದಾರಿ ಎಂದುಕೊಂಡ ಪರಶುರಾಮರು ಶಂಖದಲ್ಲಿ ದೇವಿ ಚೈತನ್ಯವನ್ನು ಆವಾಹಿಸಿ ಎಸೆದ ಜಾಗವೇ ಮಡಾಯಿಕಾವು ಎಂದು ಕರೆಯಲಾಗಿದೆ.ಕೋಲತಿರಿ ಮಹಾರಾಜ ದೇವಿಯನ್ನು ಪ್ರತಿಷ್ಠಾಪನೆಗೆ ನೇತೃತ್ವ ನೀಡಿದರು.ಕಾಟುಮಡಂ ಈಶನ್ ನಂಬೂದಿರಿಪ್ಪಾಡ್ ಕ್ಷೇತ್ರ ಪ್ರತಿಷ್ಠಾ ಕಾರ್ಯ ನೆರವೇರಿಸಿದರು.ಉತ್ತರ ಕೇರಳದಲ್ಲಿ ಪ್ರಥಮ ಸ್ಥಾನವನ್ನು ಅಲಂಕರಿಸಿದ ಕ್ಷೇತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಈ ಮಾಡಯಿ ಕಾವ್ ಕ್ಷೇತ್ರ.ಚಿರಕಲ್ ರಾಜ ವಂಶದ ಸ್ವಾಧೀನದಲ್ಲಿ ಇರುವ ಕ್ಷೇತ್ರವಿದು.ಕೋಲತಿರಿ ರಾಜ ಮನೆತನದ ಕುಲ ದೇವತೆಯಾಗಿದ್ದಾರೆ ಈ ಕ್ಷೇತ್ರದ ಭಗವತಿ ಅಮ್ಮ.ಈಗಲೂ ರಾಜವಂಶದ ಸಾನಿಧ್ಯದಲ್ಲೇ ದೇವಿ ಉತ್ಸವಾದಿ ಕರ್ಮಗಳು ನಡೆಯುತ್ತಿದೆ.ಮಲಬಾರ್ ದೇವಸ್ವಂ ಬೋರ್ಡ್ ಆಡಳಿತದಡಿಯಲ್ಲಿ ಕ್ಷೇತ್ರ ಕಾರ್ಯನಿರ್ವಹಿಸುತ್ತಿದೆ.ಸುಮಾರು 700ಎಕರೆಯಲ್ಲಿ ಕ್ಷೇತ್ರ ಭೂಮಿ ಪುರಾತನ ಕಾಲದಿಂದಲೂ ಸ್ಥಿತಿಗೊಂಡಿತ್ತು. ಆದ್ರೆ ಕಾಲ ಕ್ರಮೇಣ ಅನ್ಯ ಸ್ವಾಧೀನವಾಗಿ ಈಗ ಕ್ಷೇತ್ರವು 300ಎಕೆರೆ ಜಾಗವನ್ನಷ್ಟೇ ಉಳಿಸಿಕೊಂಡಿದೆ.ಕ್ಷೇತ್ರ ಆಡಳಿತ ಮತ್ತೆ ಉಳಿದ ಜಾಗವನ್ನು ಮರಳಿ ಪಡೆಯಲು ಪ್ರಯತ್ನಿಸುತ್ತಿದೆ. ಕೇರಳ ಕರ್ನಾಟಕ ಅಲ್ಲದೆ ಇತರ ರಾಜ್ಯಗಳಿಂದಲೂ ಇಲ್ಲಿಗೆ ಸಾವಿರಕ್ಕೂ ಅಧಿಕ ಭಕ್ತಾಭಿಮಾನಿಗಳು ಬರುತ್ತಿದ್ದಾರೆ.ಶತ್ರು ದೋಷ ಪರಿಹಾರ ಅಥವಾ ಶತ್ರು ಸಂಹಾರ, ಸರ್ವಭಿಷ್ಠ ಪೂಜೆ, ರಕ್ತ ಪುಷ್ಪಅಂಜಲಿ ಪೂಜೆ ಇಲ್ಲಿನ ಪ್ರಧಾನ ಪೂಜೆಯಾಗಿದೆ.ಮಂಗಳವಾರ, ಶುಕ್ರವಾರ ಮತ್ತು ಆದಿತ್ಯವಾರ ಕ್ಷೇತ್ರದಲ್ಲಿ ಭಕ್ತರ ಸಂಖ್ಯೆ ಹೆಚ್ಚು.ರಾಜಕೀಯ ಮುಖಂಡರು ಹೆಚ್ಚಾಗಿ ಈ ಕ್ಷೇತ್ರವನ್ನು ಆಶ್ರಯಿಸುತ್ತಾರೆ. ಅವರಿಗೆಲ್ಲ ಫಲ ಸಿದ್ಧಿ ಪ್ರಾಪ್ತವಾಗಿದೆ ಎಂದು ತಿಳಿದುಬರುತ್ತದೆ.ಕರ್ನಾಟಕ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಈ ಕ್ಷೇತ್ರಕ್ಕೆ ಹೆಚ್ಚಾಗಿ ಭೇಟಿ ನೀಡುತ್ತಾರೆ. ರಾಜಕೀಯ ನೇತಾರರಲ್ಲದೆ, ಕೇರಳ ಕರ್ನಾಟಕದ ಸಿನೆಮಾ ನಟ ನಟಿಯರು ಕೂಡಾ ಈ ಕ್ಷೇತ್ರದ ಸ್ಥಿರ ಭಕ್ತರಾಗಿದ್ದಾರೆ.ಧನು ಮಾಸ ಬಿಟ್ಟು ಮಿಕ್ಕಿ ಉಳಿದ ಎಲ್ಲ ಮಾಸದಲ್ಲೂ ಇಲ್ಲಿ ಪ್ರತೀ ಮಾಸವು ಉತ್ಸವ ಕಳೆಯನ್ನು ಕಾಣಬಹುದಾಗಿದೆ. ಧಾರಿಕಾಸುರನನ್ನ ವಧಿಸಿದ ಸ್ಥಳವಿದೆ ಇಲ್ಲಿ ಧರಿಕಾ ಕೋಟೆ ಎಂದು ಕರೆಯಲ್ಪಡುವ ಸ್ಥಳದಲ್ಲಿ ಉತ್ಸವ ಪರ್ವದಲ್ಲಿ ಆ ಸ್ಥಳದಲ್ಲಿ ಪೂಜಾ ವಿಧಿ ವಿಧಾನಗಳು ಜರಗುತ್ತವೆ.ಕಾರ್ತಿಕ ಮಾಸದ ಒಂಬತ್ತು ದಿನ ಈ ಉತ್ಸವ ಜರಗುತ್ತೆ. ದೇವಿ ಮತ್ತು ಧಾರಿಕನ ನಡುವಿನ ಯುದ್ಧವನ್ನು ಸೂಚಿಸುವ ಉತ್ಸವವಾಗಿದೆ.ಧಾರಿಕನಾ ವಧೆಯನ್ನು ಸುಚಿಸೋ ದೇವಿ ಆನಂದ ನೃತ್ಯಾದಿ ಕಾರ್ಯಗಳು ನಡೆಯುವುದು ಬ್ರಾಹ್ಮೀ ಮುಹೂರ್ತದಲ್ಲಿ ಎನ್ನುವುದು ವಿಶೇಷ.ಏಪ್ರಿಲ್ ನಲ್ಲಿ ನಡೆಯುವ ವಿಷು ಹಬ್ಬದ 11 ದಿನದ ಪೂಜಾ ವಿಧಾನ ಕೂಡಾ ವಿಶೇಷ.ಮಿಥುನ ಮಾಸದಲ್ಲಿ ಪ್ರತಿಷ್ಠಾಪನೆ ದಿನವಾಗಿ ಆಚರಿಸಲಾಗುತ್ತದೆ.ಕೇರಳದಲ್ಲೇ ಅತೀ ಅಪರೂಪದ ಕಡು ಶರ್ಕರದಿಂದ ನಿರ್ಮಿಸಿದಾಗಿದೆ ಇಲ್ಲಿನ ವಿಗ್ರಹ.ಅತೀ ಮಹಿಮೆ ಶಕ್ತಿ ಇರುವ ವಿಗ್ರಹ ಎಂದು ಪ್ರಸಿದ್ಧಿ ಪಡೆದಿದೆ.ಕೇರಳದ ದೈವಾರಾಧನೆಯಲ್ಲಿ ಕ್ಷೇತ್ರದ ಉಲೇಖಿಸುವ ತೋತಂ ಪಾಟುಗಳು ಒಂದು ಗೆರೆಯಾದರೂ ಇದ್ದೆ ಇರುತ್ತೆ. ದೈವಾರಾಧನೆಗೂ ಕ್ಷೇತ್ರಕೂ ಸಂಬಂಧವಿದೆ ಅನ್ನೋದು ಐತಿಹ್ಯ.ಇಲ್ಲಿ ನಡೆಯುವ ಪೂರಂ ಉತ್ಸವ ಬಹಳ ಪ್ರಸಿದ್ಧ. ಧಾರಿಕ ಸುರ ವಧೆ ನಂತರ ದೇವಿಯನ್ನು ಸಮಾಧಾನಪಡಿಸಲು ದೇವಾನು ದೇವತೆಗಳ ಪ್ರಯತ್ನಿಸುತ್ತಾರೆ. ಆದ್ರೆ ಸಾಧ್ಯ ಆಗದೇ ಇರುವಾಗ ದೇವಿ ಕೋಪವನ್ನು ನಿಯಂತ್ರಣ ಮಾಡದೇ ಹೋದರೆ ಲೋಕಕ್ಕೆ ಆಪತ್ತು ಎಂದು ತಿಳಿದ ದೇವಾನು ದೇವತೆಗಳು ಪರಶಿವರನ್ನು ಮೊರೆ ಹೋಗುತ್ತಾರೆ. ಭಯಾನಕ ರೂಪದಲ್ಲಿ ಕುಣಿಯುತ ನಡೆಯುವ ಭದ್ರಕಾಳಿ ಪಾದದ ಅಡಿಯಲ್ಲಿ ಓರ್ವ ಬ್ರಾಹ್ಮಣ ವಟು ರೂಪದಲ್ಲಿ ಶಿವ ದೇವರು ಮಲಗುತ್ತಾರೆ. ಇದನ್ನು ನೋಡಿ ದೇವಿಯು ಕರುಣೆಯಿಂದ ಕೋಪಶಮನವಾಗುತ್ತೆ ಅನ್ನೋದು ಕ್ಷೇತ್ರ ಪುರಾಣ.ಅದಕ್ಕೆ ಸಾಕ್ಷಿ ಎಂಬತೆ ಮಾಡಯಿಕಾವ್ ಕ್ಷೇತ್ರದ ಬಳಿಯಲ್ಲೇ ವಡಗುಂದ ಶಿವ ಕ್ಷೇತ್ರವನ್ನು ಕಾಣಬಹುದು.ದೇವಿ ಕೋಪದಾ ತಾಪವನ್ನು ತಣಿಸಲು ಪರಶಿವ ತ್ರಿಶೂಲದಿಂದ ಕೊಳ ನಿರ್ಮಿಸಿದರು ಎಂದು ನಂಬಿಕೆ. ಆ ಕೊಳದ ವಿಶೇಷ ಏನೆಂದರೆ ಎಂತಹ ಬೇಸಿಗೆಯಲ್ಲೂ ಜಲ ಸ್ವಲ್ಪವೂ ಕುಗ್ಗುವುದಿಲ್ಲ.ಆ ಕೊಳ ಭಗವತಿ ಅಮ್ಮ ಅವಬೃತ, ಆರಾಟು ಉತ್ಸವದಾ ಸ್ನಾನಕ್ಕೆ ಮಹಾದೇವ ಶಿವ ದೇವರೇ ನಿರ್ಮಿಸಿ ನೀಡಿದ ಪವಿತ್ರ ಕೊಳವಾಗಿದೆ. ನಿತ್ಯ ದೇವಾಲಯದಾ ಬಾಗಿಲು ಮುಂಜಾನೆ ಐದು ಗಂಟೆಗೆ ತೆರೆಯುತ್ತದೆ.ಬೆಳಗಿನ ಉಷಾ ಪೂಜೆ ಮುಗಿಸಿ 5.40ಕ್ಕೆ ಕ್ಷೇತ್ರ ನಡೆ ಬಾಗಿಲು ಮುಚ್ಚುತ್ತಾರೆ.ನಂತರ ಬೆಳಗ್ಗೆ 7ಗಂಟೆಗೆ ಕ್ಷೇತ್ರದ ನಡೆ ಬಾಗಿಲು ತೆರೆದರೆ 11.30ರ ಪೂಜೆಗಾಗಿ ನಡೆ ಮುಚ್ಚಿ 12ಗಂಟೆ ಪೂಜೆಗೆ ನಡೆ ಬಾಗಿಲು ತೆರೆದರೆ ಜನ ಸಂದಣಿ ನೋಡಿ 1.ಅಥವಾ 1.30ಕ್ಕೆ ನಡೆ ಬಾಗಿಲು ಮುಚ್ಚುತ್ತಾರೆ.ಸಂಜೆ 5ಗಂಟೆಗೆ ನಡೆ ತೆರೆಯುತ್ತೆ ದೀಪರಾಧನೆ ಕೂಡಾ ನಡೆಯುತ್ತದೆ.7.30ಕ್ಕೆ ಕ್ಷೇತ್ರ ನಡೆ ಬಾಗಿಲು ಮುಚ್ಚುತ್ತಾರೆ. ಉತ್ಸವ ಮತ್ತು ವಿಶೇಷ ದಿನಗಳಲ್ಲಿ ಸಮಯದಲ್ಲಿ ವ್ಯತ್ಯಾಸಗಳು ಇರುತ್ತವೆ.ಈ ಕ್ಷೇತ್ರ ಕೇರಳದ ಕಣ್ಣೂರು ಜಿಲ್ಲೆಯಲ್ಲಿದೆ. #ಮಣಿರಾಜ್_ಕಾಸರಗೋಡು
ಕೇರಳ ದೇವರನಾಡಿನ ಕಣ್ಣೂರಿನ ಮಡಾಯಿ ಕಾವಿನ ಭಗವತಿ ಅಮ್ಮನವರ ಚರಿತ್ರೆ
- 21 Oct 2024 04:18:54 PM

