ಮಂಗಳೂರು| ಲಕ್ಕಿ ಸ್ಕೀಮ್ ರೂವಾರಿಗಳ ಭೇಟೆಗಿಳಿದ ಲೋಕಾಯುಕ್ತ!;ಬಂಪರ್ ಬಹುಮಾನದ ಆಸೆಗೆ ಬಿದ್ದು ಹಣ ಸುರಿಯುವವರಿಗೆ ಎಚ್ಚರಿಕೆ!

  • 05 Dec 2024 10:06:26 PM

ಮಂಗಳೂರು:ಮಂಗಳೂರಿನಾದ್ಯಂತ ವ್ಯಾಪಕವಾಗಿ ನಡೆಯುತ್ತಿರುವ ಬಂಪರ್ ಬಹುಮಾನಗಳ ಲಕ್ಕಿ ಸ್ಕೀಮ್ ರೂವಾರಿಗಳಿಗೆ ನಡುಕ ಆರಂಭವಾಗಿದೆ. ಮಂಗಳೂರು ಲೋಕಾಯುಕ್ತ ಬಿ.ವೀರಪ್ಪನವರು ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳುವಂತೆ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದು, ಈ ಬಗೆಗಿನ ಮಾಹಿತಿ ಇಲ್ಲಿದೆ‌.

 

ಬಹುಮಾನಗಳ ವಂಚನಾ ಜಾಲ!

 

ಮಂಗಳೂರಿನಾದ್ಯಂತ ಲಕ್ಕಿ ಸ್ಕೀಮ್ ಗಳ ದೊಡ್ಡ ವಂಚನಾ ಜಾಲವೇ ಕಾರ್ಯಾಚರಿಸುತ್ತಿದೆ. ಪ್ರತೀ ತಿಂಗಳು 1 ಸಾವಿರ ಕೊಟ್ಟವರಿಗೆ ಪ್ಲಾಟ್, ಐಶಾರಾಮಿ ವಾಹನಗಳು, ಬಂಗಾರ, ನಗದು ಕೊಡುತ್ತೇವೆ ಎಂದು ಮರಳು ಮಾಡಲಾಗುತ್ತಿದ್ದು, ಈ‌ ಮೂಲಕ ಲಕ್ಕಿ ಸ್ಕೀಮ್ ರೂವಾರಿಗಳು ಜನರನ್ನು ಮೋಸ ಮಾಡುತ್ತಿದೆ' ಎಂದು ಮಂಗಳೂರು ಲೋಕಾಯುಕ್ತ ಬಿ.ವೀರಪ್ಪನವರು‌ ದೂರು ದಾಖಲಿಸಿದ್ದಾರೆ‌.

 

ಪೊಲೀಸ್ ಆಯುಕ್ತ ಅಗರ್ವಾಲ್ ಹೇಳಿದ್ದೇನು!

 

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಗರ ಪೊಲೀಸ್ ಆಯುಕ್ತ ಅಗರ್ವಾಲ್, 'ಈ ವರೆಗೆ ಯಾವುದೇ ಲಕ್ಕಿ ಸ್ಕೀಮ್ ಗ್ರಾಹಕರು‌ ದೂರು ದಾಖಲಿಸಿಲ್ಲ. ಒಂದು ವೇಳೆ ಜನರಿಗೆ ಆಮಿಷ ತೋರಿಸಿ ಮೋಸ ಮಾಡುವುದು ಸಾಬೀತಾದರೆ ಖಂಡಿತಾ ಈ ಬಗ್ಗೆ ಕ್ರಮ‌ ಕೈಗೊಳ್ಳುತ್ತೇವೆ' ಎಂದಿದ್ದಾರೆ.