ದ. ಕ: ಇತ್ತೀಚೆಗಷ್ಟೇ ಅಡಕೆಯಲ್ಲಿ ಕ್ಯಾನ್ಸರ್ ಕಾರಕ ಅಂಶವಿದೆ ಎಂದು ವರದಿಯಾಗಿದ್ದು ಬೆಳೆಗಾರರಲ್ಲಿ ಆತಂಕ ಮೂಡಿಸಿತ್ತು. ಅಷ್ಟೇ ಅಲ್ಲದೆ ಎಲೆಚುಕ್ಕಿ ಹಳದಿರೋಗದಿಂದ ಅಡಿಕೆ ಬೆಳೆ ನಾಶವಾಗುತ್ತಿರುವುದರ ಬಗ್ಗೆ ಅಡಕೆ ಬೆಳೆಗಾರರಲ್ಲಿ ಆತಂಕ ವ್ಯಕ್ತವಾಗಿತ್ತು. ಈ ಬೆನ್ನಲ್ಲೇ ದ.ಕ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಕೇಂದ್ರ ಕೃಷಿ ಸಚಿವರನ್ನು ಭೇಟಿಯಾಗಿ ಇಂತಹ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವಂತೆ ಮನವಿ ಮಾಡಿದ್ದರು. ಇದೀಗ ಬೆಳೆಗಾರರಿಗೆ ಮತ್ತೊಂದು ಗುಡ್ ನ್ಯೂಸ್ ಕೇಳಿಬಂದಿದೆ.
ಏರುಮುಖದತ್ತ ದಾಪುಗಾಲಿಟ್ಟ ಅಡಕೆಧಾರಣೆ...!!
ಹೊಸ ವರ್ಷ ಆರಂಭವಾಗಲು ಇನ್ನು ಸ್ವಲ್ಪ ದಿನ ಬಾಕಿ ಇರುವಾಗಲೇ ಟೆಂಕ್ಷನ್ ನಲ್ಲಿದ್ದ ಅಡಕೆಬೆಳೆಗಾರರಿಗೆ ಶುಭಸುದ್ದಿಯೊಂದು ಕೇಳಿಬಂದಿದೆ. ಹೌದು. ರಬ್ಬರ್, ಕಾಳುಮೆಣಸು, ಅಡಕೆ ಬೆಲೆ ಇದೀಗ ಮಾರುಕಟ್ಟೆಯಲ್ಲಿ ಹೆಚ್ಚಾಗಿದೆ. ಹೊರ ಮಾರುಕಟ್ಟೆಯಲ್ಲಿ ಚಾಲಿ ಅಡಿಕೆ ಸಿಂಗಲ್ ಚೋಲ್ ಧಾರಣೆ ನಿರೀಕ್ಷೆಯಂತೆ 450ರೂ. ಗಡಿ ದಾಟಿದೆ. ಹೊಸ ಅಡಿಕೆ ಡಬ್ಬಲ್ ಚೋಲ್ ಧಾರಣೆ ಸ್ಥಿರವಾಗಿದೆ. ಮಾರುಕಟ್ಟೆಯಲ್ಲಿ ಅಡಕೆಗೆ ಹೆಚ್ಚು ಬೇಡಿಕೆಯಿದ್ದು ಬೆಲೆ ಕೂಡಾ ಹೆಚ್ಚಾಗಿದೆ. ಇದರಿಂದ ಅಡಕೆ ಬೆಳೆಗಾರರು ಫುಲ್ ಖುಷ್ ಆಗಿದ್ದಾರೆ.
ರಬ್ಬರ್ ಗೂ ಹೆಚ್ಚಿದ ಡಿಮ್ಯಾಂಡ್....!!
ಅಡಕೆ, ಕಾಳುಮೆಣಸಿನ ಜೊತೆಗೆ ರಬ್ಬರ್ ಗೆ ಕೂಡಾ ಇದೀಗ ಆದ್ಯತೆ ಹೆಚ್ಚಾಗಿದೆ. ಡಿ.3ರಂದು ರಬ್ಬರ್ ಗ್ರೇಡ್ ಗೆ 194ರೂ., ಸ್ಟಾಪ್ ಗೆ 127 ರೂ. ಏರಿದೆ. ಹಲವು ತಿಂಗಳಿನಿಂದ ಸ್ಥಿರವಾಗಿದ್ದ ಕಾಳು ಮೆಣಸು ಬೆಲೆ ಇದೀಗ ಜಿಗಿತ ಕಂಡಿದೆ.