ಬಲ್ಗೇರಿಯ: ಹಿಂದೂ ಧರ್ಮದ ಪ್ರಕಾರ ಜ್ಯೋತಿಷ್ಯಶಾಸ್ತ್ರಕ್ಕೆ ಹೆಚ್ಚಿನ ಪ್ರಾಧಾನ್ಯತೆಯಿದೆ. ಇದನ್ನು ಜನರು ಕೂಡಾ ಹೆಚ್ಚಾಗಿ ನಂಬುತ್ತಾರೆ. ಸೆಲೆಬ್ರಿಟಿಗಳ ವೈಯಕ್ತಿಕ ಬದುಕಿನ ಬಗ್ಗೆ, ಸಮಾಜದ ಆಸಕ್ತಿಕರ ವಿಚಾರದ ಬಗ್ಗೆ ಆಗಾಗ ಭವಿಷ್ಯ ನುಡಿಯುತ್ತಾ ಕೆಲವು ಸ್ವಾಮೀಜಿಗಳು ಸುದ್ದಿಯಲ್ಲಿರುತ್ತಾರೆ. ಅದು ಬಿಡಿ...ಇದೀಗ ಕೇಳಿಬಂದಿರುವ ಭವಜಷ್ಯವಾಣಿ ಮಾತ್ರ ನಿಜಕ್ಕೂ ದಿಗಿಲು ಹುಟ್ಟಿಸಿದೆ. ಯಾಕಂದ್ರೆ ಈ ಭವಿಷ್ಯ ನುಡಿದದ್ದು ಅಂತಿಂತ ಸ್ವಾಮೀಜಿಯಲ್ಲ...ಮತ್ತೆ ಯಾರು ಅಂತೀರಾ...ಈ ಮಾಹಿತಿ ಓದಿ...
2025ರಲ್ಲಿ ಜಗತ್ತು ಅಂತ್ಯದತ್ತ ಸಾಗಲಿದೆಯೇ...??
ಭವಿಷ್ಯ ನುಡಿದು ಜಗತ್ಪ್ರಸಿದ್ಧಿಯಾಗಿರುವ ಬಲ್ಗೇರಿಯಾದ ಬಾಬಾ ವಂಗಾ ಅವರು ನುಡಿದಿರುವ ವಾಣಿಗಳು ನಿಜವಾಗಿವೆ. ಕೋವಿಡ್ ನಿಂದ ಹಿಡಿದು ಪ್ರಮುಖ ಘಟನಾವಳಿಗಳು ಸಂಭವಿಸಿದ್ದು ಜನ ಕೂಡಾ ಇವರ ಭವಿಷ್ಯವಾಣಿಯನ್ನು ನಂಬುವಂತೆ ಮಾಡಿಬಿಟ್ಟಿದೆ. ಇದೀಗ ಅವರು ಜಗತ್ತಿನ ವಿನಾಶದ ಬಗ್ಗೆ ಅಚ್ಚರಿಕರ ಭವಿಷ್ಯವೊಂದನ್ನು ನೀಡಿದ್ದು ಸಖತ್ ವೈರಲ್ ಆಗುತ್ತಿದೆ. ಇವರ ಪ್ರಕಾರ 2025ರಲ್ಲಿ ದೊಡ್ಡದೊಂದು ಅನಾಹುತ ಸಂಭವಿಸಲಿದೆ. ಅದು ಇಡೀ ಭೂಮಿಯನ್ನೇ ಸರ್ವನಾಶ ಮಾಡುವ ವಿನಾಶಕ್ಕೆ ಅಡಿಪಾಯ ಹಾಕಲಿದೆ. ಅಂತೂ ಇಂತೂ ಜಗತ್ತು ವಿನಾಶದಂಚಿಗೆ ತೆರಳುವುದು ಖಚಿತ ಎಂದು ಅವರು ಹೇಳಿದ್ದಾರೆ.
ಭವಿಷ್ಯದಲ್ಲಿ ಮನುಷ್ಯ ಏಲಿಯನ್ಸ್ ಗಳೊಂದಿಗೆ ಸಂವಹಿಸುತ್ತಾನೆ...!!
ಜಗತ್ತಿನ ವಿನಾಶದ ಬಗ್ಗೆ ಸುಳಿವು ನೀಡಿರುವುದಲ್ಲದೆ ಇವರು ಮತ್ತೊಂದು ಘಟನಾವಳಿಗಳ ಬಗ್ಗೆ ಸೂಚನೆ ನೀಡಿದ್ದಾರೆ. 2025ರಲ್ಲಿ ಭೂಮಿಯಿಂದ ಹೊರಗಿರುವ ಅನ್ಯಗ್ರಹ ಜೀವಿಗಳು ಅಂದರೆ ಏಲಿಯನ್ಸ್ ಗಳೊಂದಿಗೆ ಸಂವಹನ ನಡೆಸುವ ಪ್ರಯತ್ನದಲ್ಲಿ ಮನುಷ್ಯ ಸಂಪೂರ್ಣವಾಗಿ ಯಶಸ್ವಿಯಾಗುತ್ತಾನಂತೆ. ಅಷ್ಟೇ ಅಲ್ಲದೆ ವೈದ್ಯಕೀಯ ಕ್ಷೇತ್ರದಲ್ಲಿ ಕೂಡಾ ದೊಡ್ಡ ಬದಲಾವಣೆ ನಡೆಯಬಹುದು. ರಾಜಕೀಯ ವ್ಯವಸ್ಥೆ ಕೂಡಾ ಸಂಪೂರ್ಣ ಬದಲಾಗಬಹುದು ಎಂದು ಭವಿಷ್ಯವಾಣಿ ನುಡಿದಿದ್ದಾರೆ.