ತೆಲಂಗಾಣ: ತೆಲಂಗಾಣ ರಾಜ್ಯದಿಂದ ಚುನಾಯಿತರಾಗಿರುವ ಸಂಸದ ಅಭಿಷೇಕ್ ಮನು ಸಿಂಘ್ವಿ ಅವರಿಗೆ ನಿಗದಿ ಪಡಿಸಲಾದ ಸದನದ ಸೀಟ್‌ನಡಿ ಕಂತೆ ಕಂತೆ 500ರ ನೋಟುಗಳು ಪತ್ತೆಯಾಗಿದ್ದು, ಸದನದಲ್ಲಿ ಕೋಲಾಹಲ ಉಂಟಾಗಿದೆ. ಈ ವಿಚಾರ ರಾಷ್ಟ್ರದಾದ್ಯಂತ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದು, ಈ ಬಗೆಗಿನ ವರದಿ ಇಲ್ಲಿದೆ.
ಪರಿಶೀಲನೆ ವೇಳೆ ಹಣ ಪತ್ತೆ!
ಸಾಮನ್ಯವಾಗಿ ಸದನದಲ್ಲಿ ವಿಧ್ವಂಸಕ ವಿರೋಧಿ ಪರಿಶೀಲನೆ ನಡೆಸಲಾಗುತ್ತದೆ.ಇದೇ ರೀತಿ ಶುಕ್ರವಾರ ಪರಿಶೀಲನೆ ನಡೆಸಲಾಗಿತ್ತು ಈ ವೇಳೆ ಹಿರಿಯ ವಕೀಲ ಹಾಗೂ ಕಾಂಗ್ರೆಸ್ ಸಂಸದ ಅಭಿಷೇಕ್ ಮನು ಸಿಂಘ್ವಿ ಅವರಿಗೆ ನೀಡಿದ್ದ ಸೀಟ್ ನಂಬರ್ 222ರ ಅಡಿ 500ರ ಕಂತೆ ಕಂತೆ ನೋಟುಗಳು ಪತ್ತೆಯಾಗಿದೆ. ಇದರಿಂದಾಗಿ ಸದನದಲ್ಲಿ ಕೋಲಾಹಲ ಉಂಟಾಗಿದ್ದು, ಪ್ರಕರಣವನ್ನು ತನಿಖೆಗೆ ಒಪ್ಪಿಸಲಾಗಿದೆ ಎಂದು ರಾಜ್ಯಸಭಾ ಸಭಾಪತಿ ಜಗದೀಪ್ ಧಂಖರ್ ಮಾಹಿತಿ ನೀಡಿದ್ದಾರೆ.
ಕಾಂಗ್ರೆಸ್ ಸಂಸದ ಹೇಳಿದ್ದೇನು?
ಈ ಬಗ್ಗೆ ಸಂಸದ ಅಭಿಷೇಕ್ ಮನು ಸಿಂಘ್ವಿ ಪ್ರತಿಕ್ರಿಯೆ ನೀಡಿದ್ದು, 'ನಾನು ಶುಕ್ರವಾರ ಕೇವಲ 3 ನಿಮಿಷಗಳ ಕಾಲ ಸದನದಲ್ಲಿದ್ದೆ ಆ ಬಳಿಕ ಕ್ಯಾಂಟಿನ್ ಗೆ ತೆರಳಿದ್ದೆ ಮರಳಿ ಬರುವಾಗ ಹಣ ಪತ್ತೆಯಾಗಿದೆ. ಯಾವುದೇ ಕಾರಣಕ್ಕೂ ನಾನು ಹಣ ಇಟ್ಟಿಲ್ಲ. ಇದು ಬಿಜೆಪಿ ಪಕ್ಷದ ಪಿತೂರಿ ಎಂದಿದ್ದಾರೆ. ಸದ್ಯ, ಪ್ರಕರಣವನ್ನು ತನಿಖೆಗೆ ಒಪ್ಪಿಸಲಾಗಿದ್ದು, ನಿಜಾಂಶ ಇನ್ನಷ್ಟೇ ಹೊರ ಬರಬೇಕಿದೆ.