ಅನ್ಯಮತೀಯನಿಂದ ನೆಲ್ಲಿಕಟ್ಟೆ ನಾಗನ ಬನಕ್ಕೆ ಹಾನಿ: ಸ್ಥಳೀಯರಿಂದ ಆರೋಪಿಯ ಬಂಧನ.?

  • 06 Dec 2024 02:28:54 PM

ಪುತ್ತೂರು : ನೆಲ್ಲಿಕಟ್ಟೆ ಖಾಸಗಿ ಬಸ್‌ ನಿಲ್ದಾಣದ ಹತ್ತಿರವಿರುವ ನಾಗನ ಕಟ್ಟೆಯ ಗೇಟ್‌ಗಳನ್ನು ಮುರಿದು ಹಾನಿ ಮಾಡಿರುವ ಘಟನೆಯೊಂದು ಡಿಸೆಂಬರ್ 4 ರಂದು ನಡೆದಿದೆ. ಹಾನಿ ಮಾಡಿದ ವ್ಯಕ್ತಿಯು ಜಿಡೆಕಲ್ಲು ನಿವಾಸಿ ಮಹಮ್ಮದ್ ಸಲಾಂ ಎಂದು ಗುರುತಿಸಿ, ಸ್ಥಳೀಯರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಹತ್ತಿರವಿರುವ ನೆಲ್ಲಿಕಟ್ಟೆಯ ನಾಗನಕಟ್ಟೆಗೆ ನಿನ್ನೆ ರಾತ್ರಿಯವೇಳೆಗೆ ಏಕಾಏಕಿಯಾಗಿ ನುಗ್ಗಿ ಸಲಾಂ ಗೇಟ್ ಹಾಗು ಇತರ ಸಾಮಾಗ್ರಿಗಳಿಗೆ ಹಾನಿಯನ್ನುಂಟು ಮಾಡಿದ್ದಾನೆ ಎಂದು ತಿಳಿದು ಬಂದಿದೆ.ಸ್ಥಳೀಯರು ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಕಿಡಿಕೇಡಿತನಕ್ಕೆ ಸರಿಯಾದ ಶಾಸ್ತಿಯಾಗಬೇಕೆಂದು ಸ್ಥಳೀಯರು ಪೊಲೀಸ್ ಅಧಿಕಾರಿಗಳಲ್ಲಿ ಹೇಳಿದ್ದಾರೆ.