ಉಡುಪಿ, 5 ಡಿಸೆಂಬರ್ 2024 – ಮಹಾಲಕ್ಷ್ಮಿ ಕೋ-ಆಪರೇಟಿವ್ ಬ್ಯಾಂಕ್, ಉಡುಪಿಯ ಮಲ್ಪೆ ಶಾಖೆಯಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಗ್ರಾಹಕರ ಹೆಸರಿನಲ್ಲಿ ಸಾಲ ಪಡೆಯುವಂತಹ ಅವ್ಯವಹಾರವು ನಡೆದಿದೆ. ಇದರ ವಿರುದ್ಧ ಶ್ರೀ ಪ್ರಸಾದ್ ಕುಲಾಲ್ ಮತ್ತು ಇತರ ಗ್ರಾಹಕರು, ಬ್ಯಾಂಕಿನ ಸಿಬ್ಬಂದಿಯ ಮೇಲೆ ತಮ್ಮ ಡಾಕುಮೆಂಟ್ಸ್ಗಳನ್ನು ಬಳಸಿ ನಕಲಿ ಸಹಿಯನ್ನು ಮಾಡಿ, ನಕಲಿ ದಾಖಲೆಗಳನ್ನು ಆಧಾರವಾಗಿಟ್ಟುಕೊಂಡು, ತಮ್ಮ ಹೆಸರಿನಲ್ಲಿ ಸಾಲ ಪಡೆದು ಅದನ್ನು ಸ್ವಂತಕ್ಕಾಗಿ ಬಳಸಿಕೊಂಡಿದ್ದಾರೆ ಎಂದು ದೂರು ನೀಡಿದ್ದಾರೆ.
ಈ ಪ್ರಕರಣದ ಕುರಿತು ಲೆಕ್ಕಪರಿಶೋಧನಾಧಿಕಾರಿಗಳಾದ ಕೆ.ಎನ್. ಜಗದೀಶ್ ಅವರು 10-07-2023 ರಂದು ಪರಿಶೀಲನೆ ಮಾಡಿ ವರದಿ ನೀಡಿದ್ದಾರೆ ಅದರ ಪ್ರಕಾರ 1,413 ಸದಸ್ಯರ ಹೆಸರಿನಲ್ಲಿ ₹28,26,00,000 ರಷ್ಟು ಸಾಲಗಳನ್ನು ನಕಲಿ ದಾಖಲೆಗಳು ಮೂಲಕ ಬೇನಾಮಿ ಹೆಸರಿನಲ್ಲಿ ಸ್ವಂತ ಪ್ರಯೋಜನಕ್ಕಾಗಿ ಬಳಸಿರುವುದಾಗಿ ಉಲ್ಲೇಖಿಸಲಾಗಿತ್ತು.
ಈ ಗಂಭೀರ ಸಮಸ್ಯೆಯನ್ನು ಪರಿಹರಿಸುವುದಕ್ಕಾಗಿ ರಘುಪತಿ ಭಟ್ ಅವರು ಕರ್ನಾಟಕ ಸಹಕಾರ ಸಂಘಗಳ ನಿಬಂಧಕರಿಗೆ ಪತ್ರ ಬರೆದಿದ್ದಾರೆ. *ಮಹಾಲಕ್ಷ್ಮಿ ಕೋ-ಆಪರೇಟಿವ್ ಬ್ಯಾಂಕ್ ಉಡುಪಿಯ ಮಲ್ಪೆ ಶಾಖೆಯಲ್ಲಿ ನಡೆದ ಅವ್ಯವಹಾರವನ್ನು ಶಾಸನ ಬದ್ಧವಾಗಿ ಕಲಂ 64 ರಡಿ ವಿಚಾರಣೆ ನಡೆಸಲು* ಮತ್ತು *ಗ್ರಾಹಕರಿಗೆ ನ್ಯಾಯ ಒದಗಿಸಲು* ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ವಿನಂತಿಸಿಕೊಂಡಿದ್ದಾರೆ.
ರಘುಪತಿ ಭಟ್ ಅವರು ತಮ್ಮ ಜೀವನದಲ್ಲಿ ಸದಾ ಇತರರ ಹಿತಕ್ಕಾಗಿ ಒಳಿತಿಗಾಗಿ ಪ್ರವರ್ತಿಸಿದವರು. ಸತ್ಯ ಮತ್ತು ನ್ಯಾಯಕ್ಕಾಗಿ ನಿರಂತರವಾಗಿ ಹೋರಾಡುವ ಪ್ರಜ್ಞಾವಂತ ವ್ಯಕ್ತಿ. ಇವರ ನಿರಂತರ ಪರಿಶ್ರಮ, ಧೈರ್ಯ ಮತ್ತು ನಿಷ್ಠೆಯಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇವರು ಎಂಎಲ್ಎ ಆಗಿದ್ದ ಸಮಯದಲ್ಲಿ ಜನರ ಸಮಸ್ಯೆಗೆ ತಕ್ಷಣ ಸ್ಪಂದಿಸುತ್ತಿದಂತಹ ಗುಣ ಮತ್ತು ಧೈರ್ಯವು ಅನೇಕ ಸಂತ್ರಸ್ತರಿಗೆ ಆಸರೆಯಾಗಿತ್ತು. ಈಗಲೂ ಸಹ ಕಷ್ಟ ಕೇಳಿಕೊಂಡು ಬಂದವರಿಗೆ ಸಹಾಯ ಹಸ್ತ ನೀಡುವ ನಮ್ಮ ನೆಚ್ಚಿನ ನಾಯಕ ಇವರು ಎಂದು ಜನರು ಹೇಳುತ್ತಾರೆ.