ಬಂಟ್ವಾಳ: ಅಂಬೇಡ್ಕರ್ ಪುಣ್ಯತಿಥಿಯ ಅಂಗವಾಗಿ ಎಬಿವಿಪಿ ಯ ವತಿಯಿಂದ ಸಾಮಾಜಿಕ ಸಾಮರಸ್ಯ ದಿನ ಆಚರಣೆ!

  • 06 Dec 2024 10:40:27 PM

ಬಂಟ್ವಾಳ,ಡಿಸೆಂಬರ್6: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಬಂಟ್ವಾಳ ತಾಲೂಕು ಇದರ ವತಿಯಿಂದ ಇಂದು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪುಣ್ಯತಿಥಿ ಅಂಗವಾಗಿ ಸಾಮಾಜಿಕ ಸಾಮರಸ್ಯ ದಿನವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

 

ಬಂಟ್ವಾಳ ನಗರದಲ್ಲಿ ಎಬಿವಿಪಿ ತಂಡದ ಸದಸ್ಯರು ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಗೌರವವನ್ನು ಸಲ್ಲಿಸಿದರು. ಇದೇ ರೀತಿಯಾಗಿ ಸಿದ್ಧಕಟ್ಟೆ ನಗರದಲ್ಲಿಯೂ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಲಾಯಿತು.

ಈ ಕಾರ್ಯಕ್ರಮದಲ್ಲಿ ತಾಲೂಕು ಸಹ ಸಂಚಾಲಕ ಮಹೇಶ್, ಬಂಟ್ವಾಳ ನಗರ ಕಾರ್ಯದರ್ಶಿ ಗೌತಮ್, ಸಿದ್ಧಕಟ್ಟೆ ನಗರ ಕಾರ್ಯದರ್ಶಿ ರಂಜಿತ್ ಹಾಗೂ ಶ್ರೇಯಸ್, ಲಿಖಿತ್, ಅಕ್ಷಿತ್, ಗುರುರಾಜ್, ವಿಘ್ನೇಶ್, ಮನೀಶ್, ಹರ್ಷಿತ್, ಆದಿತ್ಯ ಮತ್ತಿತರರು ಉಪಸ್ಥಿತರಿದ್ದರು.