ಮನೆಗೆ ಬಂದು ಮಹಿಳೆಯ ಜೊತೆ ಅನುಚಿತವಾಗಿ ವರ್ತಿಸಿದ ಕಾಮುಕ ನಹೀಂ...!!

  • 07 Dec 2024 02:16:43 PM

ಮಂಗಳೂರು: ಇತ್ತೀಚೆಗೆ ಜಿಲ್ಲೆಯಲ್ಲಿ ಲವ್ ಜಿಹಾದ್ ನಂತಹ ಪ್ರಕರಣಗಳು ಹೆಚ್ಚಾಗುತ್ತಿದೆ. ಹಿಂದೂ ಯುವತಿಯರು ಅವರ ಆಮಿಷಗಳಿಗೆ ಬಲಿಯಾಗಿ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಅನ್ಯಕೋಮಿನ ತೆವಲು ಕ್ರಿಮಿಗಳಿಗಂತೂ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಕಾನೂನಿನ ಮೇಲೆಯೂ ಭಯವಿಲ್ಲದಂತಾಗಿದೆ. ಇದೀಗ ಮಂಗಳೂರು ನಗರದಲ್ಲಿ ಅಂತಹುದೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. 

 

ಮಹಿಳೆಯ ಮನೆಗೆ ನುಗ್ಗಿದ ಅನ್ಯಕೋಮಿನ ಯುವಕ...!!

 

ಮಹಿಳೆ ಹಾಗೂ ಆಕೆಯ ಸಹೋದರಿಯ ಮಗಳ ಜೊತೆ ಅನ್ಯಕೋಮಿನ ಯುವಕನೊಬ್ಬ ಅಸಭ್ಯವಾಗಿ ವರ್ತಿಸಿದ ಘಟನೆ ಮಂಗಳೂರಿನ ಕುಲಶೇಖರ ಎಂಬಲ್ಲಿ ನಡೆದಿದೆ. ಶಿವಮೊಗ್ಗದ ಸಯ್ಯದ್ ನಹೀಂ (೨೫) ಪ್ರಕರಣದ ಆರೋಪಿಯಾಗಿದ್ದು ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಈ ಘಟನೆಯ ಬಗ್ಗೆ ಹಿಂದೂ ಸಂಘಟನೆ ಕೂಡಾ ತೀವ್ರವಾಗಿ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

 

ವರ್ಷದ ಹಿಂದೆ ಮಹಿಳೆಯ ಪರಿಚಯ ಮಾಡಿಕೊಂಡಿದ್ದ ಯುವಕ...!!

 

ಶುಕ್ರವಾರ ಏಕಾಏಕಿ ಮಹಿಳೆಯ ಮನೆಗೆ ನುಗ್ಗಿದ ಆರೋಪಿ ನಹೀಂ ಮಹಿಳೆಯ ಜೊತೆ ಅಷ್ಟೇ ಅಲ್ಲದೆ ಅವರ ಸಹೋದರಿಯ ಮಗಳೊಂದಿಗೆ ಕೂಡಾ ಅಸಭ್ಯವಾಗಿ ವರ್ತಿಸಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ. ಈ ಗಲಾಟೆ ನಡೆದುದರ ಕಾರಣದ ಬಗ್ಗೆ ನಿಖರ ಮಾಹಿತಿಯಿಲ್ಲ. ಆರೋಪಿ ನಹೀಂಗೆ ಅದೆಷ್ಟೋ ವರ್ಷದ ಹಿಂದೆ ಈ ಮಹಿಳೆಯ ಪರಿಚಯವಾಗಿತ್ತು. ಈತ ಶಿವಮೊಗ್ಗದಿಂದ ಮಂಗಳೂರಿಗೆ ಆಗಮಿಸಿದ್ದಾಗ ಮಹಿಳೆಯ ಮನೆಗೆ ನುಗ್ಗಿದ್ದಾನೆ. ಮಹಿಳೆ ಹಾಗೂ ಯುವಕನ ಮಧ್ಯೆ ಗಲಾಟೆ ಅತಿರೇಕಕ್ಕೆ ಹೋದಾಗ ಸಾರ್ವಜನಿಕರು ಸ್ಥಳಕ್ಕೆ ಜಮಾಯಿಸಿದ್ದಾರೆ. ನಂತರ ಪೊಲೀಸರು ಆತನನ್ನು ವಿಚಾರಣೆಗೆ ಒಳಪಡಿಸಿ ತನಿಖೆ ನಡೆಸಿದ್ದಾರೆ.