ಸಿರಿಯಾ: ಸಿರಿಯಾದಲ್ಲಿ ಪರಿಸ್ಥಿತಿ ಸಂಪೂರ್ಣವಾಗಿ ಹದಗೆಟ್ಟಿದೆ. ಇಲ್ಲಿ ರಾಜಕೀಯ ಪ್ರಕ್ಷುಬ್ಧತೆ ಉಂಟಾಗಿದ್ದು, ಅಲ್ಲಿ ಯುದ್ಧ ಪರಿಸ್ಥಿತಿ ನಿರ್ಮಾಣವಾಗಿದೆ. ಈ ತಕ್ಷಣವೇ ಸಿರಿಯಾವನ್ನು ತೊರೆಯುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಇದರ ಜತೆಗೆ ಸಿರಿಯಾ ಟರ್ಕಿಯಿಂದ ಬೆಂಬಲಿತವಾಗಿರುವ ಬಂಡುಕೋರ ಗುಂಪುಗಳು ಮತ್ತು ಮಿಲಿಷಿಯಾಗಳಿಂದ ಸುತ್ತುವರಿದಿದೆ. ಯಾವುದೇ ಕಾರಣಕ್ಕೂ ಈ ಪರಿಸ್ಥಿತಿಯಲ್ಲಿ ಭಾರತೀಯ ಪ್ರಜೆಗಳು ಸಿರಿಯಾ ನಗರಗಳಲ್ಲಿ ಓಡಾಡದಂತೆ ಸೂಚನೆ ನೀಡಲಾಗಿದೆ. ಜಿಹಾದಿಗಳ ಆಕ್ರಮಣ ಕ್ರೌರ್ಯತೆಯನ್ನು ಪ್ರದರ್ಶಿಸುತ್ತಿದೆ. ಈ ಬಗ್ಗೆ ಭಾರತ ಸರ್ಕಾರ ಕಳವಳವನ್ನು ಕೂಡಾ ವ್ಯಕ್ತಪಡಿಸಿದೆ.
ಸಿರಿಯಾದ ಪ್ರಸ್ತುತ ಪರಿಸ್ಥಿತಿ ಹೇಗಿದೆ ಗೊತ್ತಾ..?
ಸಿರಿಯಾದಲ್ಲಿ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಓಡಾಡುವ ಬಿಕ್ಕಟ್ಟಿನ ಪರಿಸ್ಥಿತಿ ನಿರ್ಮಾಣವಾಗಿದೆ. ರಷ್ಯಾ ಮತ್ತು ಇರಾನ್ ಬೆಂಬಲಿತ ಬಶರ್ ಅಲ್-ಅಸ್ಸಾದ್ ಆಡಳಿತವು ಟರ್ಕಿಯಿಂದ ಬೆಂಬಲಿತವಾಗಿರುವ ಬಂಡುಕೋರ ಗುಂಪುಗಳು ಮತ್ತು ಮಿಲಿಷಿಯಾಗಳಿಂದ ಸುತ್ತುವರಿದಿದೆ. ಬಂಡಾಯ ಪಡೆಗಳು, ಕಳೆದ ವಾರ ಸಿರಿಯಾ ಅಧ್ಯಕ್ಷ ಬಶರ್ ಅಲ್-ಅಸ್ಸಾದ್ ಅನ್ನು ಪದಚ್ಯುತಗೊಳಿಸಲು ದಾಳಿಯನ್ನು ನಡೆಸಿತ್ತು. ದಾಳಿ ಗಲಭೆಯಾಗಿ ಪರಿವರ್ತನೆಯಾಗುತ್ತಿದೆ.
ತುರ್ತು ಸಹಾಯವಾಣಿ ನಂಬರನ್ನು ಹಂಚಿಕೊಂಡ ಭಾರತ ಸರ್ಕಾರ...!!!
ಸಿರಿಯಾದ ಅವಸ್ಥೆ ಕಂಡು ಅಲ್ಲಿ ವಾಸ್ತವ್ಯ ಹೂಡಿರುವ ಭಾರತೀಯರು ಅವಕ್ಕಾಗಿದ್ದಾರೆ. ಭಾರತ ಸರ್ಕಾರ ಕೂಡಾ ಈ ಬಗ್ಗೆ ಆತಂಕವನ್ನು ವ್ಯಕ್ತಪಡಿಸಿದೆ. ಸಿರಿಯಾದಲ್ಲಿರುವ ಭಾರತೀಯರನ್ನು ಎಚ್ಚರಿಕೆ ಹಾಗೂ ಜಾಗೃತೆಯಲ್ಲಿ ಇರುವಂತೆ ಭಾರತ ಹೇಳಿದೆ. ಇದೀಗ ಭಾರತ ಸರ್ಕಾರ ಎಲ್ಲಾ ಭಾರತೀಯ ಪ್ರಜೆಗಳಿಗೆ ಮುಂದಿನ ಸೂಚನೆ ಬರುವವರೆಗೆ ಪ್ರಯಾಣ ಮಾಡಬೇಡಿ ಎಂದು ಆದೇಶವನ್ನು ನೀಡಿದೆ. ಸಿರಿಯಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯುವ ಮೊಬೈಲ್ ಸಂಖ್ಯೆ +963 993385973 ಹಂಚಿಕೊಂಡಿದೆ. ಹಾಗೂ WhatsApp ಮತ್ತು hoc.damascus@mea.gov.in ಇಮೇಲ್ ಮೂಲಕವೂ ಸಂಪರ್ಕ ಸಾಧಿಸಬಹುದು ಎಂದು ಹೇಳಿದೆ.