ಶ್ರೀ ಮೂಡಲ ಬಾಗಿಲು ಆಂಜನೇಯ ಸ್ವಾಮಿಯ ಪುನರ್‌ ಪ್ರತಿಷ್ಠಾಪನೆ! ಶ್ರೀ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶ್ರೀರಾಮ ತಾರಕ ಹೋಮದೊಂದಿಗೆ ಮಾಲಾದಾರಣೆ ಮಹೋತ್ಸವ!

  • 07 Dec 2024 04:20:07 PM

ಶ್ರೀರಂಗಪಟ್ಟಣ: ಡಿಸೆಂಬರ್ 6 2024 ರಂದು ಶ್ರೀರಂಗಪಟ್ಟಣ ತಾಲ್ಲೂಕಿನ ಹಿಂದೂ ಜಾಗರಣ ವೇದಿಕೆಯ ಆಶ್ರಯದಲ್ಲಿ ಶ್ರೀ ಮೂಡಲ ಬಾಗಿಲು ಆಂಜನೇಯ ಸ್ವಾಮಿ ಮಂದಿರ ಪುನರ್‌ ಪ್ರತಿಷ್ಠಾಪನೆ ಸಂಕಲ್ಪ ಮಾಲೆಯನ್ನು ಅದ್ಧೂರಿಯಾಗಿ ನೆರವೇರಿಸಲಾಯಿತು. ಶ್ರೀ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶ್ರೀರಾಮ ತಾರಕ ಹೋಮದೊಂದಿಗೆ ಮಾಲಧಾರಣೆ ಮಹೋತ್ಸವವನ್ನು ಆಯೋಜಿಸಲಾಗಿತ್ತು. ಧಾರ್ಮಿಕ ವಿಧಿವಿಧಾನಗಳ ಮೂಲಕ ಸಂಕಲ್ಪ ಮಾಲೆಯನ್ನು ಮೆರವಣಿಗೆಯೊಂದಿಗೆ ಅರ್ಪಿಸಲಾಯಿತು.

 

ಪ್ರತಿಷ್ಠಾಪನಾ ಮಹೋತ್ಸವದ ಭಾಗವಾಗಿ, ಶ್ರೀ ಮೂಡಲ ಬಾಗಿಲು ಆಂಜನೇಯ ಸ್ವಾಮಿಯ ದರ್ಶನಕ್ಕಾಗಿ ಭಕ್ತರಿಗೆ ಅವಕಾಶ ಕಲ್ಪಿಸಲಾಯಿತು. ಈ ಕಾರ್ಯಕ್ರಮದಲ್ಲಿ ಸಾಂಪ್ರದಾಯಿಕ ಪೂಜೆ, ಭಜನೆ, ಹಾಗೂ ಧಾರ್ಮಿಕ ಸತ್ಸಂಗಗಳು ನಡೆದವು.

 

ಜೈ ಶ್ರೀರಾಮ್!