ಮಹಾರಾಷ್ಟ್ರದ ಮಹಿಳೆಯರಿಗೆ ಭರ್ಜರಿ‌ ಗುಡ್ ನ್ಯೂಸ್ ಕೊಟ್ಟ ಫಡ್ನವಿಸ್!; ಮಹತ್ವದ ಘೋಷಣೆ ಮಾಡಿದ ಸರ್ಕಾರ!

  • 07 Dec 2024 09:01:17 PM

ಮಹಾರಾಷ್ಟ್ರ: ಕೇಂದ್ರದಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದ ಮೇಲೆ ಅದೆಷ್ಟೋ ಬದಲಾವಣೆಗಳು ನಡೆದಿದೆ. ಭಾರತವನ್ನು ವಿಶ್ವಕ್ಕೆ ಆದರ್ಶವನ್ನಾಗಿಸುವಲ್ಲಿ ಬಿಜೆಪಿಯ ಪ್ರಯತ್ನ ನಿಜಕ್ಕೂ ಶ್ಲಾಘನೀಯ. ಇದೀಗ ಮಹಾರಾಷ್ಟ್ರದ ರಾಜಕೀಯ ವ್ಯವಸ್ಥೆ ನೂತನವಾದ ತಿರುವನ್ನು ಪಡೆದುಕೊಳ್ಳುತ್ತಿದೆ. ಈ ಬಗ್ಗೆ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಅಚ್ಚರಿಕರ ಹೇಳಿಕೆಯೊಂದನ್ನು ನೀಡಿದ್ದಾರೆ. 

 

ಕರ್ನಾಟಕ ಗೃಹಲಕ್ಷ್ಮಿಯಂತೆ ಮಹಾರಾಷ್ಟ್ರದ ಮಹಿಳೆಯರಿಗೆ 2100 ರೂ....!!

 

ಕರ್ನಾಟಕದ ಗೃಹಲಕ್ಷ್ಮಿ ಯೋಜನೆಯಂತೆ ಲಡ್ಕಿ ಬಹಿನ್ ಯೋಜನೆ ಅನ್ವಯ ರಾಜ್ಯದ ಅರ್ಹ ಮಹಿಳೆಯರಿಗೆ ನೀಡುತ್ತಿರುವ ಹಣವನ್ನು 1500ರೂ.ಗಳಿಂದ 2100 ರೂ.‌ಏರಿಸುವುದಾಗಿ ಚುನಾವಣೆಗೂ ಮುನ್ನ ಬಿಜೆಪಿ ನೇತ್ರತ್ವದ ಮಹಾಯುತಿ ಕೂಟ ಭರವಸೆಯನ್ನು ನೀಡಿತ್ತು. ಇದೀಗ ಆ ಭರವಸೆಯನ್ನು ಯೋಜನಾತ್ಮಕವಾಗಿ ಅನುಷ್ಠಾನಕ್ಕೆ ತರಲು ಬದ್ಧರಾಗಿದ್ದೇವೆ ಎಂದು ಫಡ್ನವಿಸ್ ಹೇಳಿದ್ದಾರೆ. 

 

ದ್ವೇಷದ ರಾಜಕಾರಣ ಮಾಡೋದಿಲ್ಲ- ಸಿಎಂ ದೇವೇಂದ್ರ ಫಡ್ನವಿಸ್...!

 

ನಾವು ರಾಜಕಾರಣದಲ್ಲಿ ಅನೇಕ ಬದಲಾವಣೆಗಳನ್ನು ಮಾಡಿಕೊಳ್ಳಲಿದ್ದೇವೆ ಹೊರತು ದ್ವೇಷದ ರಾಜಕಾರಣ ಮಾಡೋದಿಲ್ಲ ಎಂದು ಫಡ್ನವಿಸ್ ಹೇಳಿದ್ದಾರೆ. ಪ್ರಮಾಣ ವಚನ ಸ್ವೀಕರಿಸಿ ಮೊದಲ ಸಂಪುಟ ಸಭೆಯ ಬಳಿಕ ಮಾತನಾಡಿದ ಅವರು ಈ ಬಾರಿ ಜನರು ನಮ್ಮ ಮೇಲಿಟ್ಟ ನಂಬಿಕೆ ಮತ್ತು ಪ್ರೀತಿಗೆ ನಾವು ಅಭಾರಿ. ಜನರ ವಿಶ್ವಾಸಕ್ಕೆ ನಾವು ಮೋಸ ಮಾಡುವುದಿಲ್ಲ. ಮುಂದಿನ ಐದು ವರ್ಷದ ಕಾಲ ರಾಜ್ಯದ ಜನತೆ ಸ್ಥಿರವಾದ ಸರ್ಕಾರವನ್ನು ಕಾಣಲಿದ್ದಾರೆ. ಯಾವ ಕ್ಷೇತ್ರಗಳಲ್ಲಿ ಮಹಾರಾಷ್ಟ್ರದ ಜನ ಹಿಂದಿದ್ದಾರೆ. ಯಾವೆಲ್ಲ ಮೂಲಭೂತ ಅವಶ್ಯಕತೆಗಳನ್ನು ಜನ ನಮ್ಮಿಂದ ನಿರೀಕ್ಷಿಸುತ್ತಿದ್ದಾರೆ ಎಂಬುದನ್ನು ಸೂಕ್ಷ್ಮವಾಗಿ ಅವಲೋಕಿಸಿಗೊಂಡು ಯೋಜನಾತ್ಮಕವಾಗಿ ಕೆಲಸ ನಿರ್ವಹಿಸಲಿದ್ದೇವೆ ಎಂದು ಫಡ್ನವಿಸ್ ಹೇಳಿದ್ದಾರೆ.