ಬದಿಯಡ್ಕ : ಸಚಿತಾ ರೈಯನ್ನು ತಕ್ಷಣ ಬಂಧಿಸಬೇಕೆಂದು ಕೇರಳ ಪೊಲೀಸ್ ಹತ್ತಿರ ದೂರದಾರರು ದೋಚಿದ ಹಣದಿಂದ ಎರ್ನಾಕುಲಂ ನಲ್ಲಿ ಫ್ಲಾಟ್ ಖರೀದಿ ಎಂದು ಸುದ್ದಿ ಹರಡುತ್ತಿದೆ ಬಂಧಿಸದಿದ್ದಲ್ಲಿ ಪೆರ್ಲದಲ್ಲಿ ಇರುವ ಮನೆ ಮುಂದೆ ಧರಣಿಗೆ ಹೆಜ್ಜೆ

  • 21 Oct 2024 09:07:10 PM

ಬದಿಯಡ್ಕ : ಗೋಸಾಡ ನಿವಾಸಿ ರಕ್ಷಿತಾ ಎಂಬ ಸಹೋದರಿಯನ್ನು ವಂಚಿಸಿದ DYFI ನೇತಾರೆ ಸಚಿತಾ ರೈ. CPCRI ಯಲ್ಲಿ ರಕ್ಷಿತಾಗೆ ಕೆಲಸ ಕೊಡಿಸುವುದಾಗಿ ಹೇಳಿ 5 ಲಕ್ಷ ರೂ ಪಡೆದು ವಂಚಿಸಿರುವುದಾಗಿ ತಿಳಿದು ಬಂದಿದೆ. ಈ ಬಗ್ಗೆ ರಕ್ಷಿತಾ ಅವರು ವಾರದ ಹಿಂದೆಯೇ ಬದಿಯಡ್ಕ ಪೊಲೀಸರಿಗೆ ದೂರು ನೀಡಿದರೂ ಪೊಲೀಸರು ಕೇಸು ದಾಖಲಿಸುವಲ್ಲಿ ನಿರಾಸಕ್ತಿ ವಹಿಸುತ್ತಿರುವುದಾಗಿ ದೂರುಂಟಾಗಿದೆ. ಈ ಹಿನ್ನೆಲೆಯಲ್ಲಿ ರಕ್ಷಿತಾ ಅವರು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಲು ಹಾಗೂ ನ್ಯಾಯಾಲಯದ ಮೆಟ್ಟಲೇರುವ ಬಗ್ಗೆ ಚಿಂತನೆ ನಡೆಸುತ್ತಿದ್ದಾರೆ. 

 

 

ಈಗಾಗಲೇ ಬದಿಯಡ್ಕ ಠಾಣೆಯಲ್ಲಿ 4, ಕುಂಬಳೆ ಠಾಣೆಯಲ್ಲಿ 2, ಕಾಸರಗೋಡು ನಗರ ಠಾಣೆಯಲ್ಲಿ ಒಂದು ಪ್ರಕರಣಗಳು ಸಚಿತಾ ರೈ ವಿರುದ್ದ ದಾಖಲಾಗಿವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ದೂರುಗಳು ದಾಖಲಾಗುವ ಸಾಧ್ಯತೆಯಿದೆ. 

   

 

 ಇದೇ ವೇಳೆ ಸಚಿತಾ ರೈ ಅವರನ್ನು ಬಂಧಿಸಲು ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಆಕೆ ರಕ್ಷಣೆಗೆ ಕೆಲವು ಸ್ವಪಕ್ಷ ನಾಯಕರ ಕಾಣದ ಕೈಗಳು ಕ್ರಿಯಾಶೀಲತೆಯ ಕೆಲಸ ಮಾಡುತ್ತಿದೆ ಎನ್ನಲಾಗಿದೆ....