ಬಂಟ್ವಾಳ : ಪುಣಚದಲ್ಲಿ ನಡೆಯುತಿದ್ದ ಆಕ್ರಮ ಗಣಿಗಾರಿಕೆಯ ವಿರುದ್ಧ ಅಧಿಕಾರಿಗಳಿಂದ ಧಾಳಿ; ಯಂತ್ರೋಪಕರಣಗಳು ವಶಕ್ಕೆ!

  • 08 Dec 2024 06:49:35 PM

ಬಂಟ್ವಾಳ: ಪುಣಚ ಗ್ರಾಮದ ಮೂಡಂಬೈಲು ಎಂಬಲ್ಲಿ ಶಾಲೆಯ ಹತ್ತಿರವಿದ್ದ ಸರಕಾರಿ ಜಾಗದಲ್ಲಿ ನಡೆಯುತ್ತಿದ್ದ ಅಕ್ರಮ ಕೆಂಪು ಕಲ್ಲಿನ ಗಣಿಗಾರಿಕೆ ಮೇಲೆ ಗಣಿ ಅಧಿಕಾರಿಗಳು ಡಿ.6ರಂದು ಸಂಜೆ ದಾಳಿ ನಡೆಸಿ ಅಕ್ರಮ ಚಟುವಟಿಕೆಗೆ ಫುಲ್ಸ್ಟಾಪ್ ಹಾಕಿದರು. ದಕ್ಷ ನ್ಯೂಸ್ ಮತ್ತು ತುಳುನಾಡ ವಾರ್ತೆ ಈ ಪ್ರಕರಣವನ್ನು ಬಹಿರಂಗಪಡಿಸಿದ ನಂತರ ಗಣಿ ಇಲಾಖೆ ತಕ್ಷಣ ಕಾರ್ಯಾಚರಣೆ ಕೈಗೊಂಡಿತು. 

 

ಜಾಗವನ್ನು ಸ್ವಂತ ಜಾಗದಂತೆ ಬಳಸಿ, ಯಂತ್ರೋಪಕರಣಗಳನ್ನು ಇಳಿಸಿ ಕಾರ್ತಿಕ್ ರೈ ಮತ್ತು ಜಯರಾಮ ರೈ ಎಂಬವರ ನೇತೃತ್ವದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿತ್ತು ಎಂದು ಯಂತ್ರೋಪಕರಣಗಳನ ಬಳಸಿಕೊಂಡು ಕಲ್ಲುಗಳನ್ನು ತೆಗೆದು ಸಾಗಾಟ ಮಾಡಲಾಗುತ್ತಿತ್ತು ಎಂಬ ದೂರಿನ ಪ್ರಕಾರ ಸ್ಥಳಕ್ಕೆ ದಾಳಿ ನಡೆಸಿದ ಗಣಿ ಅಧಿಕಾರಿಗಳು, ಅಕ್ರಮ ಗಣಿಗಾರಿಕೆಯಲ್ಲಿ ಬಳಸುತ್ತಿದ್ದ ಯಂತ್ರೋಪಕರಣಗಳನ್ನು ವಶಪಡಿಸಿಕೊಂಡು ಮುಂದಿನ ತನಿಖೆಯನ್ನು ಪ್ರಾರಂಭಿಸಿದ್ದಾರೆ.

 

ಅಕ್ರಮ ಗಣಿಗಾರಿಕೆಯಿಂದ ಪರಿಸರದ ಸಮತೋಲನ ಕುಸಿಯುವ ಆತಂಕ ಇದ್ದು, ಈ ಪ್ರದೇಶದಲ್ಲಿ ಭೂ ಕುಸಿತ ಮತ್ತು ಸಾರ್ವಜನಿಕ ಅಸುರಕ್ಷತೆಯ ಪರಿಸ್ಥಿತಿ ಉಂಟಾಗಿದೆ.ಅಂತಹದರಲ್ಲಿ ಪ್ರಕೃತಿ ರಕ್ಷಣೆಯ ಬದಲು ಊರಿನ ಪ್ರಮುಖ ವ್ಯಕ್ತಿಗಳು ಈ ತರ ಮಾಡುತ್ತಿರುವುದು ಗ್ರಾಮಸ್ಥರಲ್ಲಿ ಆಕ್ರೋಶವನ್ನುಂಟು ಮಾಡಿದೆ.

 

ಅಕ್ರಮ ಗಣಿಗಾರಿಕೆಗೆಯ ವಿರುದ್ಧ ತಕ್ಷಣ ಕ್ರಮ ತೆಗೆದುಕೊಂಡ ಗಣಿ ಇಲಾಖೆಯ ಕಾರ್ಯಚರಣೆಗೆ ಗ್ರಾಮಸ್ಥರು ಧನ್ಯವಾದವನ್ನು ತಿಳಿಸಿದ್ದಾರೆ. ಅಕ್ರಮ ಗಣಿಗಾರಿಕೆ ತಡೆಯಲು ತಕ್ಷಣವೇ ದಾಳಿ ನಡೆಸಿದ ಹಾಗೆ ಮುಂದಿನ ತನಿಖೆಯಲ್ಲಿ ಇದರ ಮಾಲೀಕರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.