ಡಿ. 7ರಿಂದ 11ರವರೆಗೆ ದ.ಕ ಜಿಲ್ಲೆಯಲ್ಲಿ ಪ್ರವಾಸ ಮಾಡಲಿದ್ದಾರೆ ಆರ್ ಎಸ್ ಎಸ್ ಸರಸಂಘಚಾಲಕ ಮೋಹನ್ ಭಾಗವತ್...!!

  • 09 Dec 2024 12:57:49 PM

ದ.ಕ : ಆರ್ ಎಸ್ ಎಸ್ ಹಿರಿಯ ಮುಖಂಡ, ಸರಸಂಘಚಾಲಕ ಮೋಹನ್ ಭಾಗವತ್ ಅವರು ಒಬ್ಬ ನಿಷ್ಠಾವಂತ ಹಿಂದೂ ಪ್ರಖರ ನಾಯಕ.‌ ಧಾರ್ಮಿಕ ಚಿಂತನೆಗಳನ್ನು ಹಿಂದೂಗಳಲ್ಲಿ ಆಳವಾಗಿ ಬೇರೂರುವಂತೆ ಮಾಡಿ ಹಿಂದೂ ಸಮಾಜವನ್ನು ಜಾಗ್ರತರನ್ನಾಗಿಸುವ ಇವರ ಪ್ರಯತ್ನ ಶ್ಲಾಘನೀಯ. ಇದೀಗ ಇವರು ದ.ಕ ಜಿಲ್ಲೆಗೆ ಆಗಮಿಸಿದ್ದಾರೆ. ಐದು ದಿನದ ಪ್ರವಾಸವನ್ನು ಕೂಡಾ ಕೈಗೊಳ್ಳಲಿದ್ದಾರೆ. 

 

ಸಂಘನಿಕೇತನದಲ್ಲಿ ವಾಸ್ತವ್ಯ ಹೂಡಲಿರುವ ಭಾಗವತ್...!

ಕರ್ನಾಟಕ ಪ್ರಾಂತ ಪ್ರವಾಸವನ್ನು ಕೈಗೊಂಡಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಸಂಚಾಲಕ ಡಾ. ಮೋಹನ್ ಭಾಗವತ್ ಅವರು ಡಿ.7ರಿಂದ 11ರವರೆಗೆ ಕರಾವಳಿಯಾದ್ಯಂತ ಭೇಟಿ ನೀಡಲಿದ್ದಾರೆ. ಮಂಗಳೂರಿನ ಸಂಘನಿಕೇತನದಲ್ಲಿ ವಾಸ್ತವ್ಯ ಹೂಡಿರುವ ಇವರು ಅಲ್ಲಿಯ ನೂತನ ಕಟ್ಟಡವನ್ನು ಅಧಿಕೃತವಾಗಿ ಲೋಕಾರ್ಪಣೆಗೊಳಿಸಲಿದ್ದಾರೆ. ಈ ಬಳಿಕ ಪ್ರಾಂತ ಪ್ರಚಾರಕರ ಬೈಠಕ್, ಪ್ರಾಂತ ಕಾರ್ಯಕಾರಿಣಿ ಮಂಡಳಿ ಸಭೆಗಳಲ್ಲಿ ಭಾಗವಹಿಸಲಿದ್ದಾರೆ. ಮೊನ್ನೆ ನಡೆದ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಕ್ರೀಡೋತ್ಸವದಲ್ಲಿ ಕೂಡಾ ಇವರು ಪಾಲ್ಗೊಂಡಿದ್ದರು. 

 

ಭಾಗವಹಿಸಲಿರುವ ಕಾರ್ಯಕ್ರಮದ ವಿವರ:-

ಇಂದು ಬೆಳಿಗ್ಗೆ ಪ್ರಾಂತ ಪ್ರಚಾರಕರ ಬೈಠಕ್, ಡಿ.10ರಂದು ನಡೆಯಲಿರುವ ಪ್ರಾಂತ ಕಾರ್ಯಕಾರಿಣಿ ಸಭೆಯಲ್ಲಿ ಕೂಡಾ ಭಾಗಿಯಾಗಲಿದ್ದಾರೆ. ಸಂಘದ ಶತಾಬ್ಧಿ ಆಚರಣೆಗೆ ಸಂಬಂಧಿಸಿ ನಡೆಸಬೇಕಾದ ಕಾರ್ಯಕ್ರಮದ ವಿಸೃತ ಚರ್ಚೆ ಮತ್ತು ಶಾಖೆ ವಿಸ್ತರಣೆಯ ಬಗ್ಗೆ ಪೂರಕವಾದ ಮಾರ್ಗದರ್ಶನ ಮಾಡಲಿದ್ದಾರೆ.