ಭಾರತೀಯ ಕೋಸ್ಟ್ ಗಾರ್ಡ್ ನಲ್ಲಿ ಭರ್ಜರಿ ನೇಮಕಾತಿ!; ವೇತನ ಮತ್ತು ನೇಮಕಾತಿ ವಿವರ ಇಲ್ಲಿದೆ!

  • 09 Dec 2024 05:25:55 PM


ಭಾರತೀಯ ಕೋಸ್ಟ್ ಗಾರ್ಡ್ ವಿವಿಧ ಹುದ್ದೆಗಳಿಗೆ ನೇಮಕಾತಿ ಮಾಡಲು ಆರಂಭಿಸಿದ್ದು, ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಪರೀಕ್ಷೆಯ ಮೂಲಕ ಕೋಸ್ಟ್ ಗಾರ್ಡ್ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಆರಂಭವಾಗಿದ್ದು, ಈ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.

 

ಯಾವ ಹುದ್ದೆ ಖಾಲಿ?

 

ಕೋಸ್ಟ ಗಾರ್ಡ್ ಮೂಲಗಳ ಸದ್ಯದ ಮಾಹಿತಿಯ ಪ್ರಕಾರ ಒಟ್ಟಾರೆಯಾಗಿ,

•ಸಹಾಯಕ ಕಮಾಂಡ್ ಹುದ್ದೆಗಳು

•110 ಜನರಲ್ ಡ್ಯೂಟಿ ಹುದ್ದೆಗಳು

•30 ತಾಂತ್ರಿಕ‌ ಇಂಜಿನಿಯರ್ ಹುದ್ದೆಗಳು

ಖಾಲಿ ಇವೆ.

 

ವಯೋಮಿತಿ, ವಿದ್ಯಾರ್ಹತೆ?

 

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 21 ರಿಂದ‌ 25 ವರ್ಷದ ಒಳಗಿರಬೇಕು. ದ್ವಿತೀಯ ಪಿಯೂಸಿ‌ ಹಾಗೂ ಇಂಜಿನಿಯರಿಂಗ್ ಮತ್ತು ತಾಂತ್ರಿಕ ಶಾಖೆ ಕಲಿತಿರುವ ಅಭ್ಯರ್ಥಿಗಳು ಅರ್ಜಿ‌ ಸಲ್ಲಿಸಬಹುದಾಗಿದೆ.

 

ಅರ್ಜಿ ಶುಲ್ಕ ಮತ್ತು ಪ್ರಮುಖ ದಿನಾಂಕ

 

ಸದ್ಯ, ಕೋಸ್ಟ್ ಗಾರ್ಡ್ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಜನರಲ್, ಒಬಿಸಿಗೆ 300 ರೂ ಹಾಗೂ ಎಸ್ಸಿ,ಎಸ್ಟಿ ಹಾಗೂ ವಿಶೇಷ ಚೇತನರಿಗೆ ಶುಲ್ಕ ವಿನಾಯಿತಿ‌ ಇದೆ.

ಡಿಸೆಂಬರ್ 5, 2024 ರಿಂದ ಡಿಸೆಂಬರ್ 24ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಹೆಚ್ಚಿನ ಮಾಹಿತಿದೆ https://joinindiancoastguard.cdac.in/ ಈ ಲಿಂಕ್ ಬಳಸಿ.