ಆಸ್ಟ್ರೇಲಿಯಾ : ಇತ್ತೀಚಿನ ತಲೆಮಾರಿನ ಜನರಿಗೆ ರಸ್ತೆ ಬದಿಯಲ್ಲಿ ಸಿಗುವ ಆಹಾರ ಎಂದರೆ ಬಲು ಇಷ್ಟ. ಅದರಲ್ಲೂ ಪಿಜ್ಜಾ, ಬರ್ಗರ್, ಮೊಮೊಸ್ ಕಂಡರಡ ಪಂಚಪ್ರಾಣ. ಆದರೆ ನಿಮಗೆ ಗೊತ್ತಾ ಈ ಮೇಲಿನ ಆಹಾರಗಳನ್ನು ಸೇವಿಸಿದರೆ ನೀವು ಕ್ಯಾನ್ಸರ್ ಗೆ ತುತ್ತಾಗಬಹುದು. ಇತ್ತೀಚಿನ ಸಂಶೋಧನೆಯೊಂದು ಈ ವಿಚಾರವನ್ನು ಬಯಲು ಮಾಡಿದೆ. ಈ ಬಗೆಗಿನ ಮಾಹಿತಿ ಇಲ್ಲಿದೆ ನೋಡಿ.
ಸಂಶೋಧನೆಯ ಶಾಕಿಂಗ್ ಸತ್ಯ!
ಇತ್ತೀಚೆಗಷ್ಟೇ ಆಸ್ಟ್ರೇಲಿಯಾದ ಪ್ಲಿಂಡರ್ಸ್ ವಿಶ್ವವಿದ್ಯಾಲಯ ಒಂದು ಸಂಶೋಧನೆಯನ್ನು ಕೈಗೊಂಡಿತ್ತು. ಈ ಸಂಶೋಧನೆಯಲ್ಲಿ ನಾವು ಬಾಯಿ ಚಪ್ಪರಿಸಿಕೊಂಡು ತಿನ್ನುವ ಪಿಜ್ಜಾ, ಬರ್ಗರ್,ಮೊನೊಸ್ ತಿನ್ನುವುದರಿಂದ ಕ್ಯಾನ್ಸರ್ ಬರುತ್ತದೆ ಎಂಬುದು ಬಯಲಾಗಿದೆ. ಇದರೊಂದಿಗೆ ಹೆಚ್ಚಿನ ಸಿಹಿಯಾದ ತಂಪು ಪಾನಿಯಾ, ಆಲ್ಕೋಹಾಲ್ ಸೇವನೆಯೂ ಕೂಡ ಕ್ಯಾನ್ಸರ್ ಕಾರಕ ಎಂಬುದು ತಿಳಿದು ಬಂದಿದೆ.
50ಕ್ಕಿಂತ ಕಡಿಮೆ ವಯಸ್ಸಿನವರೆ ಸಾಯುತ್ತಾರೆ!
ಹೌದು, ಆಸ್ಟ್ರೇಲಿಯಾದ ಪ್ರತಿಷ್ಠಿತ ವಿಶ್ವವಿದ್ಯಾಲಯದ ಈ ವರದಿಯಲ್ಲಿ ತ್ವರಿತವಾಗಿ ತಯಾರಿಸುವ ಆಹಾರಗಳ ಸೇವನೆಯಿಂದ ಕರುಳಿನ ಕ್ಯಾನ್ಸರ್ ಬರುತ್ತದೆ ಹಾಗೂ ಇದು 50ಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಹೆಚ್ಚಿರುತ್ತದೆ ಎಂಬುದು ಬಯಲಾಗಿದೆ.*ಆದ್ದರಿಂದ ಈ ರೀತಿಯ ಆಹಾರಗಳಿಂದ ಯುವಜನತೆ ದೂರವಿರಿ ಎಂಬುದು ಹಿಂದೂ ರಿಪಬ್ಲಿಕ್ ಕಳಕಳಿ*