ಮಂಗಳೂರು: ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ರಾಜಕೀಯ ಮುತ್ಸದ್ದಿ ಎಸ್ ಎಂ ಕೃಷ್ಣ ಅವರ ನಿಧನಕ್ಕೆ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ತಮ್ಮ ಆಳವಾದ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.
"ರಾಜ್ಯದ ಮತ್ತು ದೇಶದ ಅಭಿವೃದ್ಧಿಗೆ ಅಮೂಲ್ಯ ಕೊಡುಗೆಗಳನ್ನು ನೀಡಿದ ಎಸ್.ಎಂ. ಕೃಷ್ಣ ಅವರ ಅಗಲುವಿಕೆಯಿಂದ ಕರ್ನಾಟಕ ಒಬ್ಬ ಶ್ರೇಷ್ಠ ನಾಯಕನನ್ನು ಕಳೆದುಕೊಂಡಿದೆ. ಬೆಂಗಳೂರು ನಗರಕ್ಕೆ ಐಟಿ-ಬಿಟಿ ಕ್ಷೇತ್ರದಲ್ಲಿ ಜಾಗತಿಕ ಪ್ರತಿಷ್ಠೆ ತರುವಂತೆ ಮಾಡಿದ ದೂರದೃಷ್ಟಿಯ ಆಡಳಿತಗಾರರಾದ ಎಸ್ ಎಂ ಕೃಷ್ಣ ದೇಶದ ರಾಜಕೀಯದಲ್ಲಿ ತಮ್ಮದೇ ಆದ ಛಾಪು ಬೀರಿದವರು ಎಂದು ತಮ್ಮ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.
ಎಸ್ಎಂ ಕೃಷ್ಣ ಅವರ ರಾಜಕೀಯವಾಗಿ ನಡೆದು ಬಂದ ಆಡಳಿತದ ಶೈಲಿ, ಅನುಭವ ಮತ್ತು ಚಿಂತನೆಗಳು ಅವರ ವ್ಯಕ್ತಿತ್ವ ಮತ್ತು ವಾಕ್ಚಾತುರ್ಯ ನಿಜಕ್ಕೂ ಸ್ಪೂರ್ತಿದಾಯಕವಾದುದು . ಅವರ ನಿಧನದಿಂದ ಕರ್ನಾಟಕ ಮತ್ತು ದೇಶವು ಅಪರೂಪದ ಅನುಭವಿ ನಾಯಕರನ್ನು ಕಳೆದುಕೊಂಡಿದೆ ಎಂದು ಸಂಸದರು ಕಂಬನಿ ಮಿಡಿದಿದ್ದಾರೆ.
ಎಸ್ಎಂ ಕೃಷ್ಣ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸುತ್ತಾ ಅವರ ಕುಟುಂಬ, ಸ್ನೇಹಿತರು, ಮತ್ತು ಅವರ ನಂಬಿಗಸ್ತರಿಗೆ ಅವರ ಅಗಲಿಕೆಯಿಂದ ಉಂಟಾದ ದುಃಖವನ್ನು ಭರಿಸುವ ಶಕ್ತಿ ಆ ದೇವರು ಕರುಣಿಸಲಿ ಎಂದು ಆ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ, ಅವರ ಆತ್ಮಕ್ಕೆ ಶ್ರೇಷ್ಠ ಸದ್ಗತಿ ಲಭಿಸಲಿ" ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ.