ಭಾರತದ ಗಡಿಯಲ್ಲಿ ಪಾಕ್ ನಿಂದ ಹಾರಿ ಬಂತು ಬಲೂನ್...!! ಹೈ ಅಲರ್ಟ್ ನೀಡಿದ ಯೋಧ ಪಡೆ..!!

  • 10 Dec 2024 03:50:38 PM

ರಾಜಸ್ತಾನ: ಸಾಮಾನ್ಯವಾಗಿ ಭಾರತದ ಗಡಿ ಪ್ರದೇಶದಲ್ಲಿ ಯೋಧರು ಸದಾ ಕಾಲ ಕಣ್ಗಾವಲಾಗಿರುತ್ತಾರೆ. ದಿನದ ಇಪ್ಪತ್ನಾಲ್ಕು ಗಂಟೆಯೂ ಕೂಡಾ ಹದ್ದಿನ ಕಣ್ಣಿಟ್ಟಿರುತ್ತಾರೆ. ಭಾರತೀಯ ಪ್ರಜೆಗಳ ರಕ್ಷಣೆಗಾಗಿ ಸದಾ ಸನ್ನದ್ಧರಾಗಿರುತ್ತಾರೆ. ಆದರೆ ಒಂದಲ್ಲ ಒಂದು ಕಾರಣಕ್ಕೆ ಪಾಕಿಸ್ತಾನದ ಕುತಂತ್ರಿಗಳು ಭಾರತೀಯರನ್ನು ಕುಕ್ಕುತ್ತಿರುತ್ತಾರೆ. ಇದೀಗ ಮತ್ತೊಮ್ಮೆ ಪಾಕಿಸ್ತಾನ ತನ್ನ ಕುತಂತ್ರ ಬುದ್ಧಿಯನ್ನು ತೋರಿಸಿದೆ.‌ ಇದರಿಂದ ಭಾರತೀಯ ಯೋಧರು ಸೇರಿದಂತೆ ಜನರೂ ಕಂಗಾಲಾಗಿದ್ದಾರೆ. 

 

ಪಾಕ್ ನಿಂದ ಹಾರಿಬಂದ ಬಲೂನ್...!!

 

ವಿಮಾನ ಆಕೃತಿಯ ಬೆಲೂನ್ ಒಂದು ಇದ್ದಕಿದ್ದಂತೆ ಭಾರತದ ರಾಜಸ್ಥಾನದ ಬಿಕಾನೆರ್ ನ ಖಜುವಾಲ ಬಳಿ ಬಿದ್ದಿದೆ. ಕಳೆದ ಮೂವತ್ತೈದು ದಿನಗಳಲ್ಲಿ ಇದು ನಡೆದ ಮೂರನೇ ಘಟನೆಯಾಗಿದೆ. ಎರಡು ಅಡಿ ಉದ್ದದ ಬಲೂನ್ ಭಾರತದ ಗಡಿ ಪ್ರದೇಶದೊಳಗೆ ಬಿದ್ದಿರುವುದನ್ನು ಸ್ಥಳೀಯರು ಗಮನಿಸಿದ್ದಾರೆ. ಕೂಡಲೇ ಬಿಸಿಎಫ್ ಯೋಧರಿಗೆ ಮತ್ತು ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದರು. ಇದೀಗ ಬಲೂನ್ ವಶಕ್ಕೆ ಪಡೆದು ಪ್ರಾಥಮಿಕ ತನಿಖೆ ನಡೆಯುತ್ತಿದೆ.

 

ಬಲೂನ್ ನಲ್ಲಿ ಸಾಗಾಟ ಪ್ರಕ್ರಿಯೆ ನಡೆಯುತ್ತಿದೆಯೇ ಎಂಬುದರ ಬಗ್ಗೆ ಶಂಕೆ...!!

 

ಸದ್ಯಕ್ಕೆ ತನಿಖೆಯಲ್ಲಿ ಇದೊಂದು ಆಟಿಕೆ ಬಲೂನ್ ಎಂಬುವುದಾಗಿ ತಿಳಿದುಬಂದಿದೆ. ಬಲೂನ್ ನಲ್ಲಿ ಯಾವುದೇ ರೀತಿಯ ಸ್ಪೋಟಕ, ಮಾದಕ ವಸ್ತುಗಳಾಗಲಿ ಇರಲಿಲ್ಲ ಎಂಬುದಾಗಿ ಪೊಲೀಸರು ದೃಢಪಡಿಸಿದ್ದಾರೆ. ಪದೇ ಪದೇ ಈ ರೀತಿ ಬಲೂನ್ ಪತ್ತೆಯಾಗುತ್ತಿದ್ದು ಏನು ಸಾಗಾಟ ನಡೆಸಲಾಗುತ್ತಿದೆ ಎಂಬುದರ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಪಾಕಿಸ್ತಾನದಲ್ಲಿ ಮಾದಕ ವಸ್ತುಗಳನ್ನು ಬೆಳೆದು ಈ ರೀತಿ ಡ್ರೋನ್ ಗಳಲ್ಲಿ, ಬಲೂನ್ ಗಳಲ್ಲಿ ಸಾಗಿಸಲಾಗುತ್ತದೆ ಎಂದು ಹೇಳಲಾಗುತ್ತಿದ್ದು ಈ ಎಲ್ಲಾ ಕಾರಣದಿಂದ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.