ಹಿಂದೂ ಯುವತಿಗೆ ಅಮಲು‌ ಪದಾರ್ಥ ನೀಡಿ ಅತ್ಯಾಚಾರಗೈದ ಮೊಹಮ್ಮದ್ ಶಫೀನ್!;ಪ್ರಕರಣ ದಾಖಲಾಗುತ್ತಿದ್ದಂತೆ ವಿದೇಶಕ್ಕೆ ಪರಾರಿಯಾದ ಕಾಮುಕನ ವಿರುದ್ಧ ಲುಕ್ಔಟ್ ನೋಟಿಸ್ ಜಾರಿ!

  • 11 Dec 2024 04:23:54 PM

ಮಂಗಳೂರು: ಹಿಂದೂ ಯುವತಿಯೊಬ್ಬಳಿಗೆ ಸಹಾಯ ಮಾಡುವ ನೆಪದಲ್ಲಿ ಬಂದ ಅನ್ಯಕೋಮಿನ ಕಾಮುಕನೊಬ್ಬ ಬಳಿಕ ಆಕೆಗೆ ಅಮಲು‌ ಪದಾರ್ಥ ನೀಡಿ ಅತ್ಯಾಚಾರಗೈದ ಪ್ರಕರಣಕ್ಕೆ ತಿರುವು ಲಭಿಸಿದೆ‌. ಅತ್ಯಾಚಾರದ ಬಗ್ಗೆ ಯುವತಿ ಪೊಲೀಸ್ ದೂರು ನೀಡಿದ ಬಳಿಕ ಕಾಮುಕ ಮೊಹಮ್ಮದ್ ಶಫೀನ್ ವಿದೇಶಕ್ಕೆ ಪರಾರಿಯಾಗಿದ್ದು,ಇದೀಗ ಆರೋಪಿಯ ವಿರುದ್ಧ ಲುಕ್ಔಟ್ ನೋಟಿಸ್ ಜಾರಿಯಾಗಿದೆ. ಪ್ರಕರಣದ ಬಗ್ಗೆ ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ನೀಡಿದ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ‌.

ಘಟನೆಯ ಹಿನ್ನಲೆ!

ಜು.21ರಂದು ತನ್ನ‌ ಕೆಟ್ಟು ಹೋದ ಕಾರು ಸರಿಪಡಿಸುವಂತೆ ಯವತಿಯೊಬ್ಬಳು ಶಫೀನ್ ಸಹಾಯ ಕೇಳಿದ್ದಾಳೆ‌. ಸಹಾಯ ಮಾಡುವ ನೆಪದಲ್ಲಿ ಸ್ನೇಹ ಬೆಳೆಸಿದ ಕಾಮುಕ ಆಕೆಗೆ ಜ್ಯೂಸ್ ನಲ್ಲಿ ಅಮಲು ಪದಾರ್ಥ ನೀಡಿ ಆಕೆಯ ಅಪಾರ್ಟ್ಮೆಂಟ್ ನಲ್ಲಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಜೊತೆಗೆ ಅದನ್ನು ವಿಡಿಯೋ ಮಾಡಿದ್ದ. ದಿನ ಕಳೆದಂತೆ ವಿಡಿಯೋ ಹಿಡಿದುಕೊಂಡು ಯುವತಿಯ ಮೇಲೆ ಅತ್ಯಾಚಾರ ಮಾಡಿ, ಆಕೆಯಿಂದ ಹಣ ವಸೂಲಿ ಮಾಡಿದ್ದಾನೆ. ಆಕೆಯ ಕಾರನ್ನು ಕೂಡ ಹೊತ್ತೊಯ್ದಿದ್ದ. ಮೊಹಮ್ಮದ್ ಶಫೀನ್ ಮಾತ್ರವಲ್ಲದೆ ಆತನ ಸಹೋದರ ಮೊಹಮ್ಮದ್ ಸಿಯಾಬ್ ಕೂಡ ಯುವತಿಗೆ ಕಿರುಕುಳ ನೀಡಿದ್ದ.

ಅನುಪಮ್ ಅಗರ್ವಾಲ್ ಹೇಳಿದ್ದೇನು!

ಸದ್ಯ, ಯುವತಿಯು ಮೊಹಮ್ಮದ್ ಶಮೀನ್ ಹಾಗೂ ಆತನ ಸಹೋದರನ ವಿರುದ್ಧ ದೂರು ದಾಖಲಿಸಿದ್ದು, ಆರೋಪಿ ವಿದೇಶಕ್ಕೆ ಪರಾರಿಯಾಗಿದ್ದಾನೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪೊಲೀಸ್ ಆಯುಕ್ತ ಅನುಮಪ್ ಅಗರ್ವಾಲ್', 

ಯುವತಿ ತಡವಾಗಿ ಪ್ರಕರಣ ದಾಖಲಿಸಿದ್ದರೂ‌ ಕೂಡ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುತ್ತೇವೆ. ಸದ್ಯ, ಆರೋಪಿ ವಿದೇಶಕ್ಕೆ ಪರಾರಿಯಾಗಿದ್ದು, ಈ ಬಗ್ಗೆ ಲುಕ್ಔಟ್ ನೋಟಿಸ್ ಜಾರಿ ಮಾಡಲಾಗಿದೆ‌' ಎಂದಿದ್ದಾರೆ.