ವಾರಣಾಸಿ: ತಾನು ಭಕ್ತಿ ಭಾವದಿಂದ ಪೂಜಿಸುತ್ತಿದ್ದ ಕಾಳಿ ದೇವಿ ಪ್ರತ್ಯಕ್ಷವಾಗಲಿಲ್ಲ ಎಂಬ ಕಾರಣಕ್ಕೆ ಅರ್ಚಕನೊಬ್ಬ ಕತ್ತು ಸೀಳಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘನಘೋರ ದುರಂತ ವಾರಣಾಸಿಯಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಅರ್ಚಕನನ್ನು ಅಮಿತ್ ಶರ್ಮಾ ಎಂದು ಗುರುತಿಸಲಾಗಿದೆ.
24ಗಂಟೆ ಕಾಳಿದೇವಿಯನ್ನು ಪೂಜಿಸಿದ ಅರ್ಚಕ!
ಅರ್ಚಕ ಅಮಿತ್ ಶರ್ಮಾ ವಾರಣಾಸಿಯ ಗಾಯ್ ಘಟ್ ನಿವಾಸಿಯಾಗಿದ್ದು, ಕಾಳಿದೇವಿಯನ್ನು ಅತ್ಯಂತ ಶ್ರದ್ಧೆಯಿಂದ ಪೂಜಿಸುತ್ತಿದ್ದರು. ಅದರಂತೆ ಇತ್ತೀಚೆಗೆ ಮನೆಯ ಬಾಗಿಲು ಹಾಕಿ 24ಗಂಟೆಗಳ ಕಾಲ ಕಾಳಿದೇವಿಯನ್ನು ಪೂಜಿಸಿದ್ದಾನೆ. ಆದರೆ ದೇವಿ ಪ್ರತ್ಯಕ್ಷವಾಗದ ಕಾರಣ ಪೂಜಾ ರೂಮ್‌ನಲ್ಲೇ ಕತ್ತು ಸೀಳಿಕೊಂಡು ಅತ್ಮಹತ್ಯೆ ಮಾಡಿಕೊಂಡಿದ್ದಾನೆ.
ಪತ್ನಿಯಿದ್ದಾಗಲೇ ಆತ್ಮಹತ್ಯೆ!
24 ಗಂಟೆಗಳ ಕಾಲ ಕಾಳಿದೇವಿಯನ್ನು ಪೂಜೆ ಮಾಡಿದ ಅಮಿತ್ ಶರ್ಮ ದೇವಿ ಪ್ರತ್ಯಕ್ಷವಾಗದಿದ್ದನ್ನು ಕಂಡು ಬೇಸರದಿಂದ 'ತಾಯಿ ಕಾಳಿ ನೀನೆ ಗತಿ' ಎಂದು ಜೋರಾಗಿ ಕೂಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಡುಗೆ ಮಾಡುತ್ತಿದ್ದ ಪತ್ನಿ ಬಂದು ನೋಡಿದಾಗ ಪತಿ ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದರು.ಆಸ್ಪತ್ರೆಗೆ ಸೇರಿಸಿದ್ದರೂ ಕೂಡ ಚಿಕಿತ್ಸೆ ಫಲಕಾರಿಯಾಗದೆ ಅಮಿತ್ ಶರ್ಮಾ ಸಾವನಪ್ಪಿದ್ದಾರೆ.