ಮಂಗಳೂರು : ಬಿಲ್ಲವ ಹೆಣ್ಣು ಮಕ್ಕಳು ಮತ್ತು ಹಿಂದು ಸಂಘಟನೆ ಕಾರ್ಯಕರ್ತರ ಬಗ್ಗೆ ಅತ್ಯಂತ ಅಸಭ್ಯ ರೀತಿಯಲ್ಲಿ ನಿಂದನೆ ಮಾಡಿದ ಅರಣ್ಯ ಅಧಿಕಾರಿ ಸಂಜೀವ ಕಾಣಿಯೂರ ವಿರುದ್ದ, ದಿನಾಂಕ 21-10-2024 ಸೋಮವಾರ *ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರ ಕುದ್ರೋಳಿ,* ಮಂಗಳೂರು ಇಲ್ಲಿ ಆತನಿಗೆ ಕಠಿಣ ಶಿಕ್ಷೆ ನೀಡುವಂತೆ, ಕ್ಷೇತ್ರಕ್ಕೆ ಬಂದು ಕ್ಷಮೆ ಕೇಳುವಂತೆ ದೇವರು ಮತ್ತು ಗುರುಗಳ ಪಾದ ಕಮಲಗಳಲ್ಲಿ *ಸಾಮೂಹಿಕ ಪ್ರಾರ್ಥನೆ* ನೆರವೇರಿಸಲಾಯಿತು.
ಈ ಸಂದರ್ಭ ಹಿಂದು ಜಾಗರಣ ವೇದಿಕೆಯ ಜಿಲ್ಲಾ ಸಂಯೋಜಕರಾದ ಲಿಖಿತ್ ರಾಜ್ ಮೂಡುಶೆಡ್ಡೆ, ಸಹ ಸಂಯೋಜಕರುಗಳಾದ ಗಣೇಶ್ ಕೆದಿಲ, ನವೀನ್ ಮಂಗಳಾದೇವಿ, ಕಾರ್ಯಕಾರಣಿ ಸದಸ್ಯರುಗಳಾದ ಹರ್ಷಿತ್ ಶಕ್ತಿನಗರ, , ಸುಷಿತ್ ಬೋಳಾರ, ಹೇಮಂತೇಶ್ ಗೌಡ, ಸುವಿನ್ ಶೆಟ್ಟಿ , ಸುರತ್ಕಲ್ ನಗರ ಸಂಯೋಜಕರಾದ ಕಿರಣ್ ಜನತಾ ಕಾಲನಿ, ಶಕ್ತಿನಗರ ಮುಖಂಡರು ಮಣಿ ಶಕ್ತಿನಗರ, ಪ್ರಜ್ವಲ್ ಶಕ್ತಿನಗರ, ಪ್ರಕೇಶ್ ಶಕ್ತಿನಗರ, ಪ್ರವೀಣ್ ಮತ್ತು ಸಂಘ ಪರಿವಾರದ ಮುಖಂಡರು, ಭಜನಾ ಸಮಿತಿ, ವಿವಿಧ ಸಂಘಟನೆ ಕಾರ್ಯಕರ್ತರು ಉಪಸ್ಥಿತರಿದ್ದರು...