ಬಂಡುಕೋರರ ದೌರ್ಜನ್ಯದಿಂದ ಕಂಗಾಲಾದ ಸಿರಿಯಾ!;75 ಭಾರತೀಯರು ಏನಾದ್ರು ಗೊತ್ತಾ?

  • 11 Dec 2024 05:17:03 PM

ಸಿರಿಯಾ: ಸಿರಿಯಾದ ಡಮಾಸ್ಕಸ್ ನಲ್ಲಿ ಬಂಡುಕೋರರ ಪ್ರಾಬಲ್ಯ ಹೆಚ್ಚಾಗಿ ಅಲ್ಲಿನ ಅಧ್ಯಕ್ಷ ಬಶರ್ ಅಲ್-ಅಸ್ಸಾದ್ ದೇಶ ಬಿಟ್ಟು ಪರಾರಿಯಾಗಿದ್ದಾನೆ. ಅಕ್ಷರಶಃ ಸಿರಿಯಾ ದೌರ್ಜನ್ಯದ ಜ್ವಾಲೆಯಿಂದ ಹೊತ್ತಿ ಉರಿಯುತ್ತಿದೆ‌. ಭಾರತೀಯ ಪ್ರಜೆಗಳೂ ಕೂಡ ಸಿರಿಯಾದಲ್ಲಿರುವ ಕಾರಣ ಅವರ ರಕ್ಷಣೆ ಭಾರತೀಯ ವಿದೇಶಾಂಗ ಸಚಿವಾಲಯಕ್ಕೆ ತಲೆನೋವಾಗಿದೆ‌. ಈ ನಡುವೆ 75 ಭಾರತೀಯರ ಕತೆ ಏನಾಗಿದೆ ಗೊತ್ತಾ?

ವಿದೇಶಾಂಗ ಸಚಿವಾಲಯ ಹೇಳಿದ್ದೇನು?

ಮದ್ದು ಗುಂಡುಗಳಿಂದ ನರಕದಂತಾಗಿರುವ ಸಿರಿಯಾದಲ್ಲಿ ಜನರು ಪ್ರಾಣ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ.ಈ ನಡುವೆ ಅಲ್ಲಿರುವ 75 ಭಾರತೀಯ ಪ್ರಜೆಗಳನ್ನು ಲೆಬನಾನ್ ಗೆ ಸ್ಥಳಾಂತರಗೊಳಿಸಲಾಗಿದೆ‌. ಬಳಿಕ ಅಲ್ಲಿಂದ ವಾಣಿಜ್ಯ ವಿಮಾನದ ಮೂಲಕ ಭಾರತಕ್ಕೆ ಕಳುಹಿಸಲಾಗುತ್ತದೆ' ಎಂದು ಭಾರತೀಯ ವಿದೇಶಾಂಗ ಸಚಿವಾಲಯ ತಿಳಿಸಿದೆ.

ಜಮ್ಮು-ಕಾಶ್ಮೀರದ 44 ಜನ!

ಸದ್ಯ, ಸಿರಿಯಾದಲ್ಲಿ ಸಿಲುಕಿರುವ 75 ಜನ ಭಾರತೀಯರಲ್ಲಿ 44 ಜನ ಜಮ್ಮು ಮತ್ತು ಕಾಶ್ಮೀರದ ಪ್ರಜೆಗಳು ಸಿರಿಯಾದ ಸೈದಾ ಜನರಿಬ್ ನಲ್ಲಿ‌ ಸಿಲುಕಿದ್ದು ಅವರನ್ನು ಕೂಡ ರಕ್ಷಿಸಲು ಭಾರತೀಯ ವಿದೇಶಾಂಗ ಸಚಿವಾಲಯ ಕಾರ್ಯಪ್ರವೃತ್ತವಾಗಿದೆ ಎಂದು ತಿಳಿದು ಬಂದಿದೆ.