ಅತ್ಯಾಚಾರ ಪ್ರಕರಣದಲ್ಲಿ ಜೈಲು‌ ಸೇರಿದ್ದ ಆರೋಪಿ!;ಜಾಮೀನನ‌ ಮೇಲೆ ಹೊರ‌ ಬಂದ ಕೂಡಲೇ ಬಾಲಕಿಯನ್ನು ಕಡಿದು ತುಂಡರಿಸಿದ ರಾಕ್ಷಸ!

  • 12 Dec 2024 11:03:30 AM

ಒಡಿಸ್ಸಾ: ವ್ಯಕ್ತಿಯೊಬ್ಬ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಜೈಲು ಸೇರಿದ್ದ. ಆದರೆ ಜಾಮೀನಿನ ಮೇಲೆ ಹೊರ ಬಂದ ಈತ ಆ ಬಾಲಕಿಯನ್ನು ಕೊಂದು ದೇಹವನ್ನು ತುಂಡರಿಸಿ ಕಂಡ ಕಂಡಲ್ಲಿ ಎಸೆದಿರುವ ಭಯಾನಕ ಘಟನೆ ಇದೀಗ ಬೆಳಕಿಗೆ ಬಂದಿದೆ.ಈ ಘನಘೋರ ದುರಂತ ಒಡಿಶಾದ ಸುಂದರ್‌ಗಢ್ ನಲ್ಲಿ ನಡೆದಿದ್ದು, ಪ್ರಕರಣದ ಆರೋಪಿಯನ್ನು ಕುನ್‌ ಕಿಸಾನ್ ಎಂದು ಗುರುತಿಸಲಾಗಿದೆ.

 

ಘಟನೆಯ ವಿವರ!

 

ಒಡಿಶಾಲದ ಸುಂದರ್‌ಗಢ್ ಮೂಲದ ಆರೋಪಿ ಕುನ್ ಕಿಸಾನ್ ಎಂಬಾತ ಬಾಲಕಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿ ಆಕೆಯ‌ ಮೇಲೆ ಅತ್ಯಾಚಾರ ನಡೆಸಿದ್ದ.ಪೋಕ್ಸೋ ಪ್ರಕರಣದಲ್ಲಿ ಜೈಲು ಸೇರಿದ್ದ ಕುನ್‌ ಕಿಸಾನ್ ಕೆಲ ಸಮಯದ ಬಳಿಕ ಜಾಮೀನಿನ‌ ಮೇಲೆ ಹೊರ ಬಂದಿದ್ದ. ಜೈಲು ಶಿಕ್ಷೆಯಿಂದ ಕೊತಕೊತ ಕುದಿಯುತ್ತಿದ್ದ ಆರೋಪಿ ಜೈಲಿನಿಂದ ಹೊರ ಬಂದ ಬಳಿಕ ಬಾಲಕಿನ್ನು ಕೊಲ್ಲಲು ಸಂಚು ರೂಪಿಸಿದ್ದ.

 

ಬಾಲಕಿಯನ್ನು ಕೊಂದು ತುಂಡರಿಸಿದ ರಾಕ್ಷಸ!

 

ಸಮಯ ಸಾಧಿಸಿ ಬಾಲಕಿಯನ್ನು ಅಪಹರಿಸಿದ ಕುನ್‌ ಕಿಸಾನ್ ರೂರ್ಕೆಲಾದಲ್ಲಿ ಆಕೆಯನ್ನು ಕೊಂದು ದೇಹವನ್ನು ತುಂಡು ಮಾಡಿದ್ದಾನೆ. ಬಳಿಕ ಎಲ್ಲೂ ಸುಳಿವು ಸಿಗಬಾರದು ಎಂದು ದೇಹದ ತುಂಡುಗಳನ್ನು ಬ್ರಹ್ಮಿಣಿ ನದಿಗೆ ಎಸೆದಿದ್ದಾನೆ. ಇದೇ ವೇಳೆ ಬಾಲಕಿ ಕಾಣೆಯಾದ ಬಗ್ಗೆ ಪ್ರಕರಣ ದಾಖಲಾಗಿತ್ತು.‌ತನಿಖೆ‌ ನಡೆಸಿದ ಪೊಲೀಸರು ಕುನ್ ಕಿಸಾನ್ ಕಾಲರ್ ಹಿಡಿದು ಬಾಯಿಗೆ ಲಾಠಿ ತುರುಕಿದಾಗ ಕೊಲೆಯ ರಹಸ್ಯ ಬಿಚ್ಚಿಟ್ಟಿದ್ದಾನೆ. ಜೊತೆಗೆ ಬಾಲಕಿ‌ ಪೊಲೀಸ್ ದೂರು ನೀಡಿದ್ದಕ್ಕಾಗಿ ಈ ಕೊಲೆ ಮಾಡಿದ್ದನ್ನು ಒಪ್ಪಿಕೊಂಡಿದ್ದಾನೆ.