ಎಂಟು ತಿಂಗಳಲ್ಲಿ 300 ಯುವಕರ ಕಿಸೆ ಖಾಲಿ ಮಾಡಿದ ಖತರ್ನಾಕ್ ಲೇಡಿ!;ಸ್ಮಾರ್ಟ್ ಫೋನ್ ಬಳಸಿ ಈ 26ರ ಯುವತಿ ಮಾಡಿದ ಕೆಲಸ‌ ಕೇಳಿದ್ರೆ ನೀವು ಬೆಚ್ಚಿ ಬೀಳೋದು ಗ್ಯಾರಂಟಿ!

  • 12 Dec 2024 01:22:40 PM

ಸ್ಪೈನ್ : ದೇಶದಲ್ಲಿ ತಂತ್ರಜ್ಞಾನ ಅದೆಷ್ಟೋ ಮುಂದುವರಿದು ಬಿಟ್ಟಿದೆ. ಇತ್ತ ಕಡೆ ಸೈಬರ್ ಕ್ರೈಮ್ ಪ್ರಕರಣಗಳು ಕೂಡಾ ಹೆಚ್ಚಾಗಿ ಬಿಟ್ಟಿದೆ. ಕೇವಲ ಒಂದು ಮೊಬೈಲ್ ಸಿಕ್ಕರೆ ಸಾಕು. ಈ ಕಾಲದಲ್ಲಿ ಅದೇನು ಮಾಡಲೂ ಸಾಧ್ಯ. ಮೊಬೈಲ್ ಬಳಸಿ ಲಕ್ಷಾಂತರ ರೂ. ಹಣವನ್ನು ದೋಚುತ್ತಾರೆ. ಇದೀಗ ಇಲ್ಲೊಂದು ನಡೆದ ಘಟನೆ ನೋಡಿದ್ರಂತೂ ಶಾಕ್ ಆಗೋದು ಗ್ಯಾರಂಟಿ.

8 ತಿಂಗಳಲ್ಲಿ 300ಕ್ಕೂ ಹೆಚ್ಚು ಯುವಕರನ್ನು ಯಾಮಾರಿಸಿದ ಖತರ್ನಾಕ್ ಲೇಡಿ...!!

ಹೌದು.. ಸ್ಪೈನ್ ದೇಶದಲ್ಲಿ 26 ವರ್ಷದ ಯುವತಿಯೊಬ್ಬಳು ಕೇವಲ 8 ತಿಂಗಳಲ್ಲಿ 300ಕ್ಕೂ ಹೆಚ್ಚು ಯುವಕರನ್ನು ತನ್ನ ಬಲೆಗೆ ಬೀಳಿಸಿ ಹಣ ಪೀಕಿಸಿದ್ದಾಳೆ. ಬಲು ಕಿಲಾಡಿಯಾಗಿದ್ದ ಈಕೆ ಕೇವಲ ಸಾಮಾನ್ಯ ಸ್ಮಾರ್ಟ್ ಫೋನ್ ಗಳು ಬಳಸಿ ಯುವಕರನ್ನು ಪರಿಚಯಿಸಿಕೊಂಡು ಅವರನ್ನೇ ಯಾಮಾರಿಸುತ್ತ ವಂಚನೆ ಮಾಡುತ್ತಿದ್ದಳು. ಕೇವಲ ಎಂಟು ತಿಂಗಳಲ್ಲಿ 13500ಫೌಂಡ್ ಅಂದರೆ ಭಾರತದ 15 ಲಕ್ಷ ರೂ ಹಣವನ್ನು ವಂಚಿಸುವುದರ ಮೂಲಕ ಸಂಪಾದಿಸಿದ್ದಾಳೆ. 

ಯುವತಿ ಯಾಮಾರಿಸುತ್ತಿದ್ದದ್ದು ಹೇಗೆ ಗೊತ್ತಾ...? 

ಸ್ಪೇನ್ ದೇಶದ ಸ್ಯಾನ್ ಸೆಬಾಸ್ಟಿಯನ್ ನಗರದ ಅಜ್ಕೋಟಿಯಾ ಎಂಬಲ್ಲಿ ಯುವತಿಯನ್ನು ಅರೆಸ್ಟ್ ಮಾಡಲಾಗಿದೆ. ತನಿಖೆಯಲ್ಲಿ ಈಕೆ ಬಾಯ್ಬಿಟ್ಟ ಸತ್ಯ ಕೇಳಿ ಪೊಲೀಸರೇ ದಂಗಾಗಿದ್ದಾರೆ. ಇವಳಲ್ಲಿ ಸಾಮಾನ್ಯ ರೀತಿಯ ಮೊಬೈಲ್ ಗಳಿದ್ದು ಯುವಕರ ಫೋಟೋಗಳನ್ನು ಎಐ ತಂತ್ರಜ್ಞಾನದ ಮೂಲಕ ಇನ್ನಾರದ್ದೋ ಹುಡುಗಿಯರ ಜೊತೆಗಿರುವ ರೀತಿ ಕೊಲಾಜ್ ಮಾಡುತ್ತಿದ್ದಳು. ಆನಂತರ ಕ್ರಿಯೇಟ್ ಮಾಡಿದ ಆ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕುವುದಾಗಿ ಬೆದರಿಸುತ್ತಿದ್ದಳು. ಆ ಮೂಲಕ ಬೆದರಿಕೆ ಹಾಕಿ ಹಣ ಪೀಕಿಸಿಕೊಳ್ಳುತ್ತಿದ್ದಳು. ಪೊಲೀಸರು ಆಕೆಯ ಮೊಬೈಲ್ ನ್ನು ತಪಾಸಣೆ ಮಾಡಿದಾಗ 3500 ಜೊತೆಗೆ ಇದೇ ರೀತಿ ಮೋಸದ ಚಾಟಿಂಗ್ ಮಾಡಿರೋದಾಗಿ ತಿಳಿದುಬಂದಿದೆ. ಈ ಬಗ್ಗೆ ಪೊಲೀಸ್ ತನಿಖೆ ಕೂಡಾ ನಡೆಯುತ್ತಿದೆ.