ಪುತ್ತೂರು: ಪುತ್ತೂರಿನ ನೆಹರೂ ನಗರದಲ್ಲಿ ನವೆಂಬರ್ 6ರಂದು ನಡೆದ ಅಕ್ಷಯ್ ಕಲ್ಲೇಗ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, 1ನೇ ಮತ್ತು 2ನೇ ಆರೋಪಿಗಳಾದ ಚೇತನ್ ಅಲಿಯಾಸ್ ಪುಂಡಿ ಚೇತು ಮತ್ತು ಮನೀಷ್ ಅಲಿಯಾಸ್ ಬ್ರೋಕರ್ ಮನಿ ಅವರ ಜಾಮೀನು ಅರ್ಜಿಯನ್ನು ಪುತ್ತೂರು 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತಿರಸ್ಕರಿಸಿದೆ. ಸುದೀರ್ಘವಾದ ವಾದ ಪ್ರತಿವಾದಗಳ ಬಳಿಕ, ನ್ಯಾಯಾಲಯವು ಪ್ರಕರಣದ ಗಂಭೀರತೆ ಮತ್ತು ಆರೋಪಿಗಳ ದುಷ್ಕೃತ್ಯವನ್ನು ಗಮನಕ್ಕೆ ತೆಗೆದುಕೊಂಡು ಈ ತೀರ್ಪು ನೀಡಿದೆ.
#Akshay Kallega Murder , Accused Bail Denied by Court
ಈ ಪ್ರಕರಣದಲ್ಲಿ ವಿಶೇಷ ಸರ್ಕಾರಿ ಅಭಿಯೋಜಕರಾಗಿ ಖ್ಯಾತ ನ್ಯಾಯವಾದಿ ಮಹೇಶ್ ಕಜೆ ಅವರು ದೂರುದಾರರ ಪರವಾಗಿ ವಾದ ಮಂಡಿಸಿದರು. ಇವರು ಸಮರ್ಥ ವಾದ ಪ್ರತಿವಾದಗಳಿಂದ ಪ್ರಕರಣದ ಗಂಭೀರತೆಯನ್ನು ನ್ಯಾಯಾಲಯದ ಮುಂದೆ ದೃಢಪಡಿಸಿದರು.
#Puttur News
ಅವರ ವಾದದ ಬಲದಿಂದ ನ್ಯಾಯಾಲಯವು ಅಪರಾಧಿಗಳ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ ಎಂಬ ತೀರ್ಪನ್ನು ನೀಡಿತು.