ವಿಡಿಯೋಗಾಗಿ ಬಾಂಬ್ ಬ್ಲಾಸ್ಟ್ ಮಾಡಿದ ಡ್ರೋನ್ ಪ್ರಥಾಪ್!; ವಿಡಿಯೋ ವೈರಲ್ ಆದ ಬೆನ್ನಲ್ಲೇ ಪ್ರಥಾಪ್ ಅಂದರ್! #Drone Prathap News

  • 13 Dec 2024 01:50:57 PM

ತುಮಕೂರು: ವರ್ಷಗಳ ಹಿಂದೆ ಡ್ರೋನ್ ಹೆಸರು ಹೇಳಿಕೊಂಡು ಇಡೀ ದೇಶಕ್ಕೆ ಟೋಪಿ ಹಾಕಿದ ವಂಚಕ ಡ್ರೋನ್ ಪ್ರಥಾಪ್ ಆ ಬಳಿಕ ಬಿಗ್ ಬಾಸ್ ಮನೆ ಪ್ರವೇಶಿಸಿ ಸಾಕಷ್ಟು ಜನಪ್ರಿಯತೆ ಗಳಿಸಿದ್ದ. ಇದೀಗ ಈತನ ಹುಚ್ಚಾಟ ಎಲ್ಲೇ ಮೀರಿದ್ದು, ಡ್ರೋನ್ ಬಿಟ್ಟು ವಿಜ್ಞಾನದ ಅಪಾಯಕಾರಿ ಪ್ರಯೋಗದಲ್ಲಿ ತೊಡಗಿದ್ದಾನೆ‌. ಸದ್ಯ, ಈತನ ವಿಡಿಯೋ‌ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಈತನ ಹುಚ್ಚಾಟ ಕಂಡು‌ ಪೊಲೀಸರು ಈತನನ್ನು ಬಂಧಿಸಿದ್ದಾರೆ.ಅಷ್ಟಕ್ಕೂ ಪ್ರಥಾಪ್ ಮಾಡಿದ್ದೇನು? ಇಲ್ಲಿದೆ ನೋಡಿ‌ ಮಾಹಿತಿ.

#Drone Prathap News

ಅನುಮತಿ‌ ಪಡೆಯದೆ ಬಾಂಬ್ ಬ್ಲಾಸ್ಟ್!

ಡ್ರೋನ್ ತಯಾರಿ ಬಿಟ್ಟಿರುವ ಡ್ರೋನ್ ಪ್ರಥಾಪ್ ಇದೀಗ ವಿಜ್ಞಾನದ ಕೆಲ ಪ್ರಯೋಗಗಳನ್ನು‌ ನಡೆಸುತ್ತಿದ್ದಾನೆ. ಇದಕ್ಕಾಗಿ ಈತ ತುಮಕೂರಿನ ಮಿಡಿಗೇಶಿ ಠಾಣಾ ವ್ಯಾಪ್ತಿಯಲ್ಲಿರುವ ಕೃಷಿ ಹೊಂಡದ ನೀರಿನಲ್ಲಿ ಸೋಡಿಯಂ ಬಳಸಿ ಸ್ಪೋಟ ನಡೆಸಿದ್ದಾನೆ. ಇದಿಷ್ಟೇ ಅಲ್ಲದೇ ಈ ಪ್ರಯೋಗವನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾನೆ.

#Bomb Blast News

ಜೈಲು ಸೇರಿದ ಡ್ರೋನ್ ಪ್ರಥಾಪ್!

ಕೃಷಿ ಹೊಂಡದಲ್ಲಿ ಸೋಡಿಯಂ ಬ್ಲಾಸ್ಟ್ ಮಾಡಿದ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಪ್ರಥಾಪ್ ವರ್ತನೆಗೆ ಕಿಡಿ ಕಾರಿದ್ದಾರೆ. ಈ ರೀತಿಯ ಸ್ಪೋಟದಿಂದ ನೀರು ವಿಷಕಾರಿಯಾಗುತ್ತದೆ. ಈ ನೀರು ಕುಡಿದರೆ ಜಲಚರಗಳು ಹಾಗೂ ಪ್ರಾಣಿ ಪಕ್ಷಿಗಳು ಸಾಯುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ, ತನ್ನ ಮಿತಿಮೀರಿದ ಹುಚ್ಚಾಟದಿಂದಾಗಿ ಡ್ರೋನ್ ಪ್ರಥಾಪ್ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 288 ಹಾಗೂ ಸ್ಪೋಟ ವಸ್ತುಗಳ ಕಾಯ್ದೆಯ ಸೆಕ್ಷನ್ 3ರ ಅಡಿ ಬಂಧಿಸಲ್ಪಟ್ಟಿದ್ದಾನೆ.

Viral News