ಪದೇ ಪದೆ ಕಾಣೆಯಾಗುತ್ತಿತ್ತು ಮಹಿಳೆಯರ ಒಳಡುಪುಗಳು!; ಕೊನೆಗೂ ಒಳುಡುಪು ಕದಿಯುತ್ತಿದ್ದ ಸೈಕೋ ಚೇತನ್ ಪೊಲೀಸ್ ವಶಕ್ಕೆ!

  • 13 Dec 2024 03:08:52 PM

ಹುಬ್ಬಳ್ಳಿ: ಕಳ್ಳರು ಮನೆಗೆ ನುಗ್ಗಿ ಚಿನ್ನಾಭರಣ,ದುಬಾರಿ ವಸ್ತುಗಳನ್ನು ಕದಿಯುವ ಸುದ್ದಿಗಳನ್ನು ನೀವು ಕೇಳಿರಬಹುದು.ಆದರೆ ಮಹಿಳೆಯರ ಒಳುಡುಪು ಕದಿಯುವ ಕಳ್ಳನ ಬಗ್ಗೆ ಕೇಳಿದ್ದೀರಾ?.ಕೇಳಲು ಆಶ್ಚರ್ಯವೆನಿಸಿದರೂ ಇದು ಸತ್ಯ. ಇಲ್ಲೊಬ್ಬ ಸೈಕೋ ರಾತ್ರೋರಾತ್ರಿ ಮನೆಗೆ ನುಗ್ಗಿ ಹಣದ ಜೊತೆಗೆ ಮಹಿಳೆಯರ ಒಳುಡುಪು ಕದಿಯುತ್ತಿದ್ದ. ಸದ್ಯ,ಈತ ಪೊಲೀಸರ ಅಥಿತಿಯಾಗಿದ್ದಾನೆ. ಈ ವಿಲಕ್ಷಣ ಘಟನೆಯ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ ನೋಡಿ.

 

ಘಟನೆಯ ವಿವರ!

 

#cctv footage 

ಹುಬ್ಬಳ್ಳಿ‌ಯ ನೇಕಾರ ನಗರದ ಮನೆಗಳಲ್ಲಿ ಪದೇ ಪದೆ ಒಣಗಲು ಹಾಕಿದ್ದ ಮಹಿಳೆಯರ ಒಳುಡುಪುಗಳು ಕಾಣೆಯಾಗುತ್ತಿದ್ದವು. ಇದರಿಂದ ರೋಸಿ ಹೋದ ಕೆಲ ಮನೆಯವರು ಸಿಸಿ ಕ್ಯಾಮರಾ ಅಳವಡಿಸಿದ್ದರು. ಆಗಲೇ ನೋಡಿ ಕಳ್ಳನ ಕರಾಮತ್ತು ಬೆಳಕಿಗೆ ಬಂದಿದ್ದು. ಚೇತನ್ ಅಡಕಿ ಎಂಬ ಯುವಕನೊಬ್ಬ ರಾತ್ರೋರಾತ್ರಿ ಮನೆಗೆ ನುಗ್ಗಿ ಮಹಿಳೆಯರ ಒಳುಡುಪು ಕದಿಯುತ್ತಿದ್ದ. ಸಿಸಿ ಕ್ಯಾಮಾರದಿಂದ ಈ ವಿಚಾರ ಬಯಲಾಗಿದ್ದು, ಸದ್ಯ ಈ ಸೈಕೋ ಪೊಲೀಸ್ ಬಲೆಗೆ ಬಿದ್ದಿದ್ದಾನೆ.

 

ಸ್ಥಳಿಯರಿಂದ ಕಳ್ಳನಿಗೆ ಧರ್ಮದೇಟು!

 

ಅದೊಂದು ದಿನ ಸೈಕೋ ಕಳ್ಳನ ಗ್ರಹಚಾರ ಕೆಟ್ಟಿತ್ತು. ತನ್ನ ಚಾಲಾಕಿತನ ತೋರಿಸಿ ಮತ್ತೆ ಒಳುಡುಪು ಕದಿಯಲು ಬಂದಿದ್ದ ಈತ ರೆಡ್ ಹ್ಯಾಂಡ್ ಆಗಿ ಸ್ಥಳಿಯರ ಕೈಗೆ ಸಿಕ್ಕಿಬಿದ್ದಿದ್ದ ಜೊತೆಗೆ ಬೇಕಾದಷ್ಟು ಧರ್ಮದೇಟು ಕೂಡ ಈತನಿಗೆ ಸಿಕ್ಕಿತ್ತು. ಅಂತಿಮವಾಗಿ ಒಳುಡುಪು ಕಳ್ಳ ಸೈಕೋ ಚೇನತ್ ಇದೀಗ ಕಂಬಿ ಎಣಿಸುತ್ತಿದ್ದಾನೆ.

#Hubballi News