#Ballari News
ಬಳ್ಳಾರಿ: ರಾಜ್ಯದಲ್ಲಿ ನಡೆಯುತ್ತಿರುವ ಕೆಲವೊಂದು ಘಟನೆಗಳು ನಿಜಕ್ಕೂ ಆತಂಕಕ್ಕೀಡು ಮಾಡುತ್ತಿದೆ. ಎಲ್ಲೆಡೆ ಹಣದಾಹದಿಂದ ಆರೋಗ್ಯವೂ ವ್ಯಾಪಾರವಾಗಿ ಬಿಟ್ಟಿದೆ. ಇತ್ತೀಚೆಗೆ ಬಳ್ಳಾರಿಯಲ್ಲಿ ನಡೆದ ಬಾಣಂತಿಯರ ಸಾವು ಪ್ರಕರಣ ರಾಜ್ಯಾದ್ಯಂತ ದಿಗಿಲು ಹುಟ್ಟಿಸಿತ್ತು. ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಹೃದಯವಿದ್ರಾವಕ ಘಟನೆ ಜನರನ್ನು ಅಚ್ಚರಿಗೊಳಿಸಿದೆ.
#Heart breaking incident
#Infant dies from hunger in Ballari
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತವರು ಜಿಲ್ಲೆಯಲ್ಲಿ ಹಸಿಗೂಸು ದುರ್ಮರಣ...!!
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತವರು ಜಿಲ್ಲೆಯಲ್ಲಿಯೇ ಹಸಿವಿನಿಂದ ಮೂರು ದಿನದ ನವಜಾತ ಹೆಣ್ಣು ಶಿಶುವೊಂದು ಸಾವನ್ನಪ್ಪಿರುವ ಪ್ರಕರಣ ವರದಿಯಾಗಿದೆ. ಈ ಘಟನೆ ನಡೆದ ಬೆನ್ನಲ್ಲೇ ಬಾಣಂತಿ ಹಾಗೂ ಅತ್ತೆ ಇಬ್ಬರೂ ಪರಾರಿಯಾಗಿದ್ದಾರೆ. ಡಿಸೆಂಬರ್ 8 ರಂದು ಮಧ್ಯಾಹ್ನ 12ಕ್ಕೆ ಅತ್ತೆ ಜೊತೆಗೆ ಬಂದ ಗರ್ಭಿಣಿ ಮಹಿಳೆ ಆಸ್ಪತ್ರೆಗೆ ದಾಖಲಾಗಿದ್ದರು. ಅದೇ ದಿನ ರಾತ್ರಿ 9.30 ಕ್ಕೆ ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ಹೆರಿಗೆಯಾಗಿದೆ. ಹೆಣ್ಣು ಮಗು ಜನಿಸಿದೆ. ಅವಧಿ ಪೂರ್ವ ಹೆರಿಗೆ ಹಿನ್ನೆಲೆಯಲ್ಲಿ ಮಗು ಒಂದೂವರೆ ಕೆಜಿ ತೂಕ ಇತ್ತು. ತೂಕ ಕಡಿಮೆ ಆಗಿರುವ ಕಾರಣಕ್ಕೆ ವೈದ್ಯರು ಮಗುವನ್ನು ಎನ್‌ಐಸಿಯುಗೆ ದಾಖಲಿಸಿ ಚಿಕಿತ್ಸೆ ನೀಡುತ್ತಿದ್ದರು.
ಮಗುವಿನ ತಾಯಿ ಎಸ್ಕೇಪ್, ಹಸಿವಿನಿಂದ ಸಾವಿಗೀಡಾದ ಹಸಿಗೂಸು...!!
#Mother Escape
ಇಂಥಾ ಮಹಿಳೆಯರಿಗೆ ದೇವರು ಮಗುವನ್ನಾದ್ರೂ ಯಾಕೆ ನೀಡ್ತಾನೆ ಅನಿಸುತ್ತೆ ಕೆಲವೊಮ್ಮೆ. ಈ ಕಿಲಾಡಿ ಮಹಿಳೆ ಮಗು ಐಸಿಯು ಸೇರಿದ ಬಳಿಕ ಇದ್ದಕಿದ್ದಂತೆ ಎಸ್ಕೇಪ್ ಆಗಿದ್ದಾಳೆ. ಬಿಬಿಜಾನ್ ಸದ್ದಾಂ ಸಯ್ಯದ್ (28) ಎಂಬಾಕೆಗೆ ಸೇರಿದ್ದ ನವಜಾತ ಶಿಶು ತಾಯಿಯ ಮೊಲೆ ಹಾಲು ಸಿಗದೆ ಹಸಿವಿನಿಂದ ಮೃತಪಟ್ಟಿದೆ ಎಂದು ತಿಳಿದುಬಂದಿದೆ. ಮೊದಲೇ ಪ್ಲ್ಯಾನ್ ಮಾಡಿದ್ದ ಬಿಬಿಜಾನ್ ಸಯ್ಯದ್ ಎಂಬ ಮಹಿಳೆ ಆಸ್ಪತ್ರೆಗೆ ದಾಖಲಾಗುವ ವೇಳೆ ಸರಿಯಾದ ವಿಳಾಸ ಕೂಡಾ ನೀಡದೆ ಯಾಮಾರಿಸಿದ್ದಾಳೆ. ಸದ್ಯ ಬಾಣಂತಿ ವಿರುದ್ಧ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಆದರೆ ಮಹಿಳೆ ಯಾಕೆ ಹೀಗೆ ಮಾಡಿದ್ಳು, ಮಗು ಹೆತ್ತ ಕೂಡಲೇ ಆಕೆ ಆಸ್ಪತ್ರೆಯಿಂದ ಎಸ್ಕೇಪ್ ಆಗಲು ಕಾರಣವೇನು? ಅನ್ನೋದರ ಬಗ್ಗೆ ಕುತೂಹಲವಿದ್ದು ಈಗಾಗಲೇ ಪೊಲೀಸರು ಈ ಬಗ್ಗೆ ತನಿಖೆ ಪ್ರಾರಂಭಿಸಿದ್ದಾರೆ.
#Lakshmi hebbalkar home town issue