ಬೆಂಗಳೂರು: ಕನ್ನಡ ಚಿತ್ರರಂಗದ ನಟ Dharshan ಮತ್ತು ಸಹ ನಟಿ ಪವಿತ್ರಾ ಗೌಡ ಅವರು ತೀವ್ರ ವಿವಾದಕ್ಕೆ ಒಳಪಟ್ಟ ರೇಣುಕಸ್ವಾಮಿ ಕೊಲೆ ಪ್ರಕರಣಕ್ಕೆ ಕರ್ನಾಟಕ ಹೈಕೋರ್ಟ್ ಇಂದು ಪ್ರಮುಖ ತೀರ್ಪು ನೀಡಿದೆ. ಇಬ್ಬರಿಗೂ ನಿಯಮಿತ Bail ನೀಡಲು ನ್ಯಾಯಾಲಯವು ಆದೇಶಿಸಿದೆ.
ಬೆಂಗಳೂರು ಮೂಲದ ಉದ್ಯಮಿ ರೇಣುಕಸ್ವಾಮಿಯು ಇತ್ತೀಚೆಗೆ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದರು. ಈ ಪ್ರಕರಣದ ತನಿಖೆಯ ಸಮಯದಲ್ಲಿ ದರ್ಶನ್ ಮತ್ತು ಪವಿತ್ರಾ ಗೌಡರ ಹೆಸರು ಪ್ರಸ್ತಾಪಕ್ಕೆ ಬಂದಿತ್ತು. ಪ್ರಕರಣದಲ್ಲಿ ದರ್ಶನ್ ಅವರ ವಿವಾದಾತ್ಮಕ ಸಂಬಂಧಗಳು ಹಾಗೂ ಹಣಕಾಸಿನ ವಿಷಯಗಲ ಕುರಿತು ತನಿಖಾಧಿಕಾರಿಗಳ ಗಮನ ಸೆಳೆದಿದ್ದು ಅದರ ಹಿನ್ನೆಲೆಯಲ್ಲಿ ಅವರಿಬ್ಬರಿಗೂ ಕೊಲೆ ಸಂಚಿನ ಆರೋಪ ಕೇಳಿಬಂದಿತ್ತು.
ಇದೀಗ ಕರ್ನಾಟಕ ಹೈಕೋರ್ಟ್ ಹಲವು ವಾದ ವಿವಾದಗಳ ನಂತರ ದರ್ಶನ್ ಮತ್ತು ಪವಿತ್ರಾ ಗೌಡರಿಗೆ ನಿಯಮಿತ ಜಾಮೀನು ನೀಡಲು ಸಮ್ಮತಿಸಿದೆ. ಆದರೆ ನ್ಯಾಯಾಧೀಶರು ಆರೋಪಿಗಳಿಗೆ ಪ್ರತಿಯೊಂದು ವಿಚಾರಣಾ ದಿನಾಂಕಗಳಿಗೂ ಹಾಜರಾಗುವುದು ಹಾಗೂ ತನಿಖೆಯಲ್ಲಿ ಸಹಕರಿಸುವುದು ಕಡ್ಡಾಯವಾಗಿದೆ ಎಂದು ಇನ್ನು ಹಲವು ಷರತ್ತುಗಳನ ಮೇರೆಗೆ ಜಾಮೀನು ನೀಡಿದ್ದಾರೆ.
ಷರತ್ತುಗಳು:
*ಆರೋಪಿಗಳು ನ್ಯಾಯಾಲಯದ ಅನುಮತಿಯಿಲ್ಲದೆ ರಾಜ್ಯ ತ್ಯಜಿಸಬಾರದು* .
*ಪ್ರತಿಯೊಂದು ವಿಚಾರಣಾ ದಿನಕ್ಕೆ ನ್ಯಾಯಾಲಯಕ್ಕೆ ಹಾಜರಾಗಬೇಕು* .
*ಸಾಕ್ಷಿಗಳಿಗೆ ಅಥವಾ ಪ್ರಕ್ರಿಯೆಗೆ ಅಡ್ಡಿಪಡಿಸಬಾರದು.*
ಇಬ್ಬರಿಗೂ ಜಾಮೀನು ನೀಡಿರುವ ಹೈಕೋರ್ಟ್ ತೀರ್ಪು ದರ್ಶನ್ ಮತ್ತು ಪವಿತ್ರಾ ಗೌಡ ಅವರ ಅಭಿಮಾನಿಗಳಲ್ಲಿ ನಿರಾಳತೆ ಮೂಡಿಸಿದರೂ, ನ್ಯಾಯಾಂಗ ವಿಚಾರಣೆ ಇನ್ನೂ ನಡೆಯಲಿದೆ ಎಂದು ತಿಳಿದು ಬಂದಿದೆ.