ದ.ಕ.ಜಿ.ಪಂ.ಹಿ ಪ್ರಾರ್ಥಮಿಕ ಶಾಲೆ ಸಾಲೆತೂರಿನಲ್ಲಿ ನಾಳೆ ಅಕ್ಷರದಿಂದ ಅರಿವಿಗೆ, ಪ್ರಜ್ವಲಿಸಲಿ ಶಿಕ್ಷಣದ ದೀವಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ

  • 13 Dec 2024 11:24:43 PM

ಬಂಟ್ವಾಳ, ದ.ಕ : ದ.ಕ.ಜಿ.ಪಂ.ಹಿ. ಪ್ರಾಥಮಿಕ ಶಾಲೆ ಸಾಲೆತ್ತೂರು, 14-12-2024 ಶನಿವಾರ, ವಿದ್ಯಾರ್ಥಿಗಳ ಪ್ರತಿಭೆ ಮತ್ತು ಸಾಂಸ್ಕೃತಿಕ ಕೌಶಲ್ಯಗಳನ್ನು ಹಿರಿಮೆಗೆ ತರುವಂತೆ ಒಂದು ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

 

ಈ ಕಾರ್ಯಕ್ರಮವು ಬೆಳಿಗ್ಗೆ 10:00 ರಿಂದ ಸಂಜೆ 6:00 ರ ತನಕ ನಡೆಯಲಿದೆ.

 

ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಸಾಧನೆಗಳನ್ನು ತಲುಪುವ ಪ್ರೋತ್ಸಾಹದ ಭಾಗವಾಗಿ, ಅವರ ಪ್ರತಿಭೆಯನ್ನು ಗೌರವಿಸಲು ನಾವು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. 

 

ಅಕ್ಷರದಿಂದ ಅರಿವಿಗೆ, ಪ್ರಜ್ವಲಿಸಲಿ ಶಿಕ್ಷಣದ ದೀವಿಗೆ ಎಂಬ ಪರಿಕಲ್ಪನೆಗೆ ಉತ್ಸಾಹ ತುಂಬುವ ಈ ಕಾರ್ಯಕ್ರಮಕ್ಕೆ ಎಲ್ಲಾ ಪಾಲಕರ, ಪೋಷಕರ, ಶಿಕ್ಷಕರ, ಹಳೆಯ ವಿದ್ಯಾರ್ಥಿಗಳ ಹಾಗೂ ವಿದ್ಯಾರ್ಥಿಗಳ ಹಾಜರಾತಿ ನಿಶ್ಚಯವಾಗಿರಲಿ ಎಂದು

ಸರ್ವರಿಗೂ ಕಾರ್ಯಕ್ರಮಕ್ಕೆ ಸ್ವಾಗತವನ್ನು ಬಯಸುವ, 

 

ಶ್ರೀಯುತ ಕೃಷ್ಣಪ್ಪ ಗೌಡ ಕೆ, ಎ.ಡಿ.ಎಂ. ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸರ್ವಸದಸ್ಯರು, ಶ್ರೀಯುತ ದಿಲೀಪ್ ಕುಮಾರ್ ರಜಪೂತ್, ಪ್ರಭಾರ ಮುಖ್ಯ ಶಿಕ್ಷಕರು ಮತ್ತು ಶಾಲೆಯ ಅಧ್ಯಾಪಕ ವೃಂದ, ಪೋಷಕರು, ಹಿರಿಯ ವಿದ್ಯಾರ್ಥಿಗಳು.