ಪೇಜಾವರ ಶ್ರೀಗಳ ಮೇಲೆ ಅವಹೇಳನಾಕಾರಿ ನಿಂದನೆ ಮತ್ತು ಬೆದರಿಕೆಯ ವಿರುದ್ಧ ಮತಿನ್ ಕುಮಾರ್ ಮೇಲೆ ಮೂಡರು ನಿವಾಸಿ ಹರೀಶ್ ದೂರು ದಾಖಲು..!

  • 14 Dec 2024 01:03:38 PM

ಉಡುಪಿ, ಡಿಸೆಂಬರ್13: ಪೇಜಾವರ ಶ್ರೀ ವಿಶ್ವ ಪ್ರಸನ್ನ ತೀರ್ಥರ ವಿರುದ್ಧ ಅವಹೇಳನಾತ್ಮಕ ನಿಂದನೆ ಹಾಗೂ ಜೀವ ಬೆದರಿಕೆಯ ಆರೋಪದ ಮೇಲೆ ಭೀಮ್ ಆರ್ಮಿ ಸಂಘಟನೆಯ ಸದಸ್ಯ ಮತಿನ್ ಕುಮಾರ್ ಬಿಜಾಪುರ ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ಕಾರ್ಕಳ ತಾಲೂಕು, ಮೂಡಾರು ನಿವಾಸಿ ಹರೀಶ್ ಅವರು ಈ ಕುರಿತು ಉಡುಪಿ ಪೋಲಿಸ್ ಠಾಣೆಗೆ ದೂರು ಸಲ್ಲಿಸಲಾಗಿದೆ.

 

ಹರೀಶ್ ಅವರ ದೂರಿನ ಪ್ರಕಾರ, 12 ಡಿಸೆಂಬರ್ 2024 ರಂದು ತಮ್ಮ ವಾಟ್ಸಾಪ್ ಗ್ರೂಪ್‌ನಲ್ಲಿ ಒಂದು ವಿಡಿಯೋ ಬಂದಿದ್ದು, ಅದರಲ್ಲಿ ಮತಿನ್ ಕುಮಾರ್ ಬಿಜಾಪುರ ಅವರು Pejavara shri ಗಳನ್ನು ಗಂಭೀರವಾಗಿ ಅವಹೇಳನ ಮಾಡುತ್ತಾ, *ಎರಡನೇ ಭೀಮ ಕೋರೆಗಾಂವ್ ಯುದ್ಧ ಉಡುಪಿ ಮಠದ ಮುಂದೆ ನಡೆಯುತ್ತದೆ* ಎಂದು ಬೆದರಿಕೆ ಹಾಕಿದ್ದಾರೆ.

 

ಈ ಘಟನೆಗೆ ಸಂಬಂಧಿಸಿದಂತೆ  Udupi ಪೊಲೀಸರು ಪ್ರಕರಣ ದಾಖಲಿಸಿ, ವಿಚಾರಣೆ ಪ್ರಾರಂಭಿಸಿದ್ದಾರೆ. ಭಕ್ತರು ಮತ್ತು ಹಿಂದೂ ಸಂಘಟನೆಗಳು ಈ ನಿಂದನೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆರೋಪಿಯ ವಿರುದ್ಧ ತಕ್ಷಣ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.