ಪಚ್ಚನಾಡಿ: ಪಚ್ಚನಾಡಿ ಗ್ರಾಮದ ಆಶ್ರಯ ಕಾಲೋನಿಯ ನಿವಾಸಿ ಮಮತಾ ದೇವರಾಜ್ ದಂಪತಿಗಳ ಮಗಳಾದ ದೀಪ್ತಿ ಲೂಪಸ್ 8 ನೇ ತರಗತಿ ವಿದ್ಯಾರ್ಥಿ ಅಸಮಾನ್ಯ ಬ್ಯಾಕ್ಟೀರಿಯ ಸೋಂಕಿಗೆ ಸಿಲುಕಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ.
ಚಿಕಿತ್ಸೆಯ ಸಹಾಯ ನೆರವಿಗಾಗಿ ಯತೀಶ್ ಶೆಟ್ಟಿ ಅವರನ್ನು ಕೇಳಿದಾಗ ಅವರು ಜ್ಯೋತಿ ಸೇವಾ ಬಳಗಕ್ಕೆ ಮಾಹಿತಿ ನೀಡಿ ಅವರು ಕೂಡಲೇ ಸಂಬಂಧಿಸಿ, ದಿವ್ಯ ಜ್ಯೋತಿ ಕ್ರಿಕೆಟರ್ಸ್ನ ಅಧ್ಯಕ್ಷರಾದ ಸುನಿಲ್ ಕೆ. ವಿ. ಮತ್ತು ಉಪಾಧ್ಯಕ್ಷರಾದ ಸತೀಶ್ ಪೂಜಾರಿ ಇವರ ನೇತೃತ್ವದಲ್ಲಿ, ಆ ಕುಟುಂಬಕ್ಕೆ ಧೈರ್ಯ ತುಂಬಿ ಧನ ಸಹಾಯವನ್ನು ಮಾಡಲಾಯಿತು.
ಸಂದರ್ಭದಲ್ಲಿ ದಿವ್ಯ ಜ್ಯೋತಿ ಆಶ್ರಮದಲ್ಲಿ ದೀಪ್ತಿಯ ಆರೋಗ್ಯಕ್ಕಾಗಿ ಪ್ರಾರ್ಥನೆ ಕಾರ್ಯಕ್ರಮವನ್ನು ನಡೆಸಲಾಯಿತು. ಇದರಲ್ಲಿ ಆಶೋಕ್ ಪೂಜಾರಿ, ಯತೀಶ್ ಶೆಟ್ಟಿ, ಪ್ರಮೋದ್ ಪೂಜಾರಿ ಮತ್ತಿತರರು ಭಾಗವಹಿಸಿದ್ದರು.
ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಷಷ್ಠಿಯ ದಿನದಂದು ಭವತಿ ಬಿಕ್ಷಾಂ ದೇಹಿ ನಿಧಿ ಎಂಬ ಸಂಗ್ರಹಣೆಯನ್ನು ನಡೆಸಲಾಯಿತು. ಇದರಿಂದ ಬಂದ ₹40,553.00 ರೂಪಾಯಿ ಕುಟುಂಬಕ್ಕೆ ಹಸ್ತಾಂತರಿಸಲಾಯಿತು. ಈ ಸಹಾಯವು ಕುಟುಂಬಕ್ಕೆ ಬಲವನ್ನು ನೀಡಿತು.