ಉತ್ತರ ಪ್ರದೇಶ: ಭಾರತದಲ್ಲಿ ಸಾಕಷ್ಟು ಮಸೀದಿಗಳನ್ನು ದೇಗುಲಗಳ ಮೇಲೆ ಕಟ್ಟಿರುವುದಕ್ಕೆ ಈಗಾಗಲೇ ನೂರಾರು ಪುರಾವೆಗಳು ಲಭಿಸಿವೆ.
ಇದೀಗ 46 ವರ್ಷಗಳಿಂದ ಮುಚ್ಚಿ ಹೋಗಿದ್ದ ಶಿವ ದೇವಾಲಯವೊಂದು ಮುಸ್ಲಿಂ ಏರಿಯಾದಲ್ಲಿ ಏಕಾಏಕಿ ಪತ್ತೆಯಾಗಿದ್ದು, ಕಳ್ಳರನ್ನು ಹಿಡಿಯಲು ಹೋದ ಪೊಲೀಸರಿಗೆ ಅಚ್ಚರಿಯಾಗುವಂತೆ ಮಾಡಿದೆ. ಇಂತಹದ್ದೊಂದು ಘಟನೆ ನಡೆದಿದ್ದೆಲ್ಲಿ?,
ಈ ಘಟನೆಯ ಹಿಂದಿನ ಸ್ವಾರಸ್ಯಕರ ಕತೆಯೇನು? ಬನ್ನಿ ನೋಡೋಣ.
ಘಟನೆಯ ಹಿನ್ನಲೆ!
ಉತ್ತರ ಪ್ರದೇಶದ ಸಂಭಲ್ ಜಿಲ್ಲೆಯಲ್ಲಿರುವ ಖಗ್ಗ ಸಾರಾಯಿಯ ಎಂಬ ಪ್ರದೇಶದಲ್ಲಿ ಮುಸ್ಲಿಂ ಕುಟುಂಬಗಳು ಹೆಚ್ಚಿವೆ.ಇಲ್ಲಿ ನಿರಂತರವಾಗಿ ಕಳ್ಳತನ ನಡೆಯುತ್ತಿತ್ತು.
ಕಳ್ಳತನ ಗಂಭೀರ ಸ್ವರೂಪ ಪಡೆದುಕೊಂಡಾಗ ಕಳ್ಳರನ್ನು ಹಿಡಿಯಲು ಅಲ್ಲಿಗೆ ಪೊಲೀಸ್ ಪಡೆ ಎಂಟ್ರಿಯಾಗಿತ್ತು.
ಆದರೆ ಕಳ್ಳರನ್ನು ಹಿಡಿಯಲು ಹೋದ ಪೊಲೀಸರಿಗೆ ಸಿಕ್ಕಿದ್ದು ಮಾತ್ರ ಮುಸ್ಲಿಂ ಏರಿಯಾದಲ್ಲಿ ಕಳೆದ 45 ವರ್ಷಗಳ ಹಿಂದೆ ಮುಚ್ಚಿ ಹೋಗಿದ್ದ ಶಿವ ದೇಗುಲ.
ಮುಸಲ್ಮಾನ ಅಟ್ಟಹಾಸದಿಂದ ಮುಚ್ಚಿ ಹೋಗಿತ್ತು ಶಿವ ದೇಗುಲ!
ಸದ್ಯ, ಖಗ್ಗ ಸಾರಾಯಿಯಲ್ಲಿ ದೇಗುಲ ಕಂಡುಬಂದಿರುವ ವಿಚಾರ ಜಿಲ್ಲಾಧಿಕಾರಿಯ ವರೆಗೆ ಹೋಗಿದ್ದು, ದೇಗುಲವನ್ನು ಶುದ್ಧಿಗೊಳಿಸಲಾಗಿದೆ.
ಈ ದೇಗುಲದ ಬಗ್ಗೆ ಮಾಹಿತಿ ನೀಡಿರುವ ಹಿಂದೂ ಸಭಾದ ಧರ್ಮದರ್ಶಿ ವಿಷ್ಣು ಶರಣ ಮಾತನಾಡಿ,'ಖಗ್ಗ ಸಾರಾಯಿ ಹಿಂದೆ ಹಿಂದೂಗಳ ಪ್ರದೇಶವಾಗಿತ್ತು.
ಅದಕ್ಕಾಗಿಯೇ ಅಲ್ಲಿ ಹಿಂದೂ ದೇಗುಲವಿದೆ. ಆದರೆ 1974ರಲ್ಲಿ ಅಲ್ಲಿಗೆ ದಾಳಿ ಮಾಡಿದ ಕೆಲವು ಮುಸಲ್ಮಾನ್ ಕುಟುಂಬಗಳು ಹಿಂದೂಗಳ ಮೇಲೆ ದೌರ್ಜನ್ಯ ನಡೆಸಿ ಆ ಪ್ರದೇಶವನ್ನು ಕಸಿದುಕೊಂಡರು.
ಜೀವ ಭಯದಿಂದ ನಾವು ಅಲ್ಲಿಂದ ಪಲಾಯನ ಮಾಡಿದೆವು.ಆ ಬಳಿಕ ಅಲ್ಲಿನ ಶಿವನ ದೇಗುಲ ಮೂಲೆ ಗುಂಪಾಯಿತು.
ಇದೀಗ ಅಲ್ಲಿ ಅಕ್ರಮವಾಗಿ 20 ರಿಂದ 25 ಮುಸಲ್ಮಾನ್ ಕುಟುಂಬಗಳು ಇವೆ. ಇದರ ಬಗ್ಗೆ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು' ಎಂದಿದ್ದಾರೆ.