ಕುಂಬ್ಳೆ: ಬಿಜೆಪಿ ಕುಂಬ್ಳೆ ಮಂಡಲ ಕಾರ್ಯದರ್ಶಿ ಹಾಗೂ ಯುವಮೋರ್ಚಾ ಕುಂಬ್ಳೆ ಮಂಡಲ ಪ್ರಭಾರಿ ಧನರಾಜ್ ಪ್ರತಾಪ್ ಅವರು ಭೀಕರ ವಾಹನ ಅಪಘಾತದಲ್ಲಿ ಅಕಾಲಿಕವಾಗಿ ಮೃತ ಪಟ್ಟಿದ್ದಾರೆ.
ಅವರು ಯುವಮೋರ್ಚಾ ಕಾರ್ಯಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಪಕ್ಷದ ಸಂಘಟನೆಗೆ ಅತ್ಯಂತ ಮಹತ್ವದ ಕೊಡುಗೆಯನ್ನು ನೀಡಿದವರಾಗಿದ್ದರು.
ಅವರ ಅಗಲಿಕೆಯಿಂದ ಕುಂಬ್ಳೆ ಬಿಜೆಪಿ ಕಾರ್ಯಕರ್ತರು ಶೋಕದಲ್ಲಿ ಮುಳುಗಿದ್ದು, ಹಲವು ಮಂದಿ ಸಾಮಾಜಿಕ ಮಾಧ್ಯಮಗಳ ಮೂಲಕ ತಮ್ಮ ಆಘಾತವನ್ನು ವ್ಯಕ್ತಪಡಿಸಿದ್ದಾರೆ.
*ಅಗಲಿದ ಅತ್ಮೀಯ ಮಿತ್ರನಿಗೆ ಭಾವಪೂರ್ಣ ಶ್ರದ್ಧಾಂಜಲಿ* ಎಂದು ಹಲವು ನಾಯಕರು ಮತ್ತು ಮಿತ್ರರು ಸಂತಾಪವನ್ನು ಸೂಚಿಸಿದ್ದಾರೆ.
ಧನರಾಜ್ ಅವರ ಅಕಾಲಿಕ ನಿಧನವು ಕುಟುಂಬ, ಸ್ನೇಹಿತರು ಮತ್ತು ಕಾರ್ಯಕರ್ತರಲ್ಲಿ ಅಪಾರ ಶೂನ್ಯತೆಯನ್ನ ಉಂಟುಮಾಡಿದೆ.