ಬಿಜೆಪಿಯ ಭೀಷ್ಮ, ಹಿರಿಯ ನಾಯಕ ಎಲ್.ಕೆ ಅಡ್ವಾಣಿ ಆಸ್ಪತ್ರೆಗೆ ದಾಖಲು!;ಏನಾಯ್ತು ಗೊತ್ತಾ ಬಿಜೆಪಿಯ ಭಗೀರಥನಿಗೆ!

  • 15 Dec 2024 08:21:33 AM


ಹೆಹಲಿ: ಎಲ್.ಕೆ ಅಡ್ವಾಣಿ ಭಾರತದ ಒಬ್ಬ ಹಿರಿಯ ಅನುಭವಿ ರಾಜಕಾರಣಿ. ಇವರನ್ನು ಬಿಜೆಪಿಯ ಭೀಷ್ಮ ಎಂದೇ ಕರೆಯಲಾಗುತ್ತದೆ. ಇವರು ಸ್ವತಂತ್ರ್ಯ ಭಾರತದ ಏಳನೇ ಉಪ ಪ್ರಧಾನ ಮಂತ್ರಿಗಳಾಗಿ 2002ರಿಂದ 2008ರವರೆಗೆ ಸೇವೆ ಸಲ್ಲಿಸಿದ್ದಾರೆ. ಅಡ್ವಾಣಿರವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೂಲಕ ಭಾರತ ರಾಜಕೀಯಕ್ಕೆ ಧುಮುಕಿದರು. ಇದೀಗ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. 

 

ಎಲ್.ಕೆ ಅಡ್ವಾಣಿ ದೆಹಲಿಯ ಅಪೋಲೋ ಆಸ್ಪತ್ರೆಗೆ ದಾಖಲು..!

 

ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಹಿರಿಯ ಬಿಜೆಪಿ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅವರನ್ನು ನವದೆಹಲಿಯ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆ ಮೂಲಗಳ ಪ್ರಕಾರ ಎರಡು ದಿನಗಳ ಹಿಂದೆಯೇ ಅಡ್ವಾಣಿ ಅವರನ್ನು ದೆಹಲಿಯ ಅಪೋಲೋ ಆಸ್ಪತ್ರೆಗೆ ಸೇರಿಸಲಾಗಿದ್ದು ನರವಿಜ್ಞಾನ ವಿಭಾಗದ ಹಿರಿಯ ಸಲಹೆಗಾರ ಡಾ. ವಿನಿತ್ ಸೂರಿ ಅವರು ಚಿಕಿತ್ಸೆ ನೀಡುತ್ತಿದ್ದಾರೆ.

ಸದ್ಯ ಅವರ ಅರೋಗ್ಯ ಸಮತೋಲನವಾಗಿದೆ ಎಂದು ಹೇಳಲಾಗುತ್ತಿದ್ದು ಆಸ್ಪತ್ರೆಗೆ ದಾಖಲಾದ ನಿಖರ ಕಾರಣ ಮಾತ್ರ ಸದ್ಯಕ್ಕೆ ತಿಳಿದುಬಂದಿಲ್ಲ.

 

ಕಳೆದ ಅಗಸ್ಟ್ ನಲ್ಲೂ ಆಸ್ಪತ್ರೆಗೆ ದಾಖಲಾಗಿದ್ದ ಅಡ್ವಾಣಿ...!!

 

ಪಾದರಸದಂತೆ ಸದಾ ಕ್ರಿಯಾಶೀಲವಾಗಿರುತ್ತ ಚಲನವಲನದಲ್ಲಿದ್ದುಕೊಂಡು ಕೆಲಸ ಕಾರ್ಯಗಳನ್ನು ಮಾಡಿಕೊಂಡಿದ್ದ ಎಲ್.ಕೆ ಅಡ್ವಾಣಿ ಅವರಿಗೆ ತೊಂಭತ್ತಾರು ವರ್ಷ ವಯಸ್ಸಾಗಿದ್ದು ವಯೋಸಹಜ ಖಾಯಿಲೆಯಿಂದ ಆಗಾಗ ಆರೋಗ್ಯದಲ್ಲಿ ಏರುಪೇರಾಗುತ್ತಿರುತ್ತದೆ.

ಇವರು ಕಳೆದ ಆಗಸ್ಟ್ ನಲ್ಲಿ ಕೂಡ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಮೂತ್ರಶಾಸ್ತ್ರ ವಿಭಾಗದ ವೈದ್ಯರಿಂದ ಚಿಕಿತ್ಸೆಯನ್ನು ಪಡೆದುಕೊಂಡಿದ್ದರು. ಈ ಬಾರಿ ಕೂಡಾ ಆಸ್ಪತ್ರೆಗೆ ದಾಖಲಾಗಿದ್ದು ಅವರ ಆರೋಗ್ಯ ಸ್ಥಿರವಾಗಿದೆ ಎನ್ನಲಾಗುತ್ತಿದೆ.