ರಿಪಬ್ಲಿಕ್ ಹಿಂದೂ:- ಕಾಂಗ್ರೆಸ್ಸಿನ ಕೆಲವು ನಾಯಕರಿಗೆ ಹಿಂದೂ ಧರ್ಮವನ್ನು ಅವಹೇಳನ ಮಾಡುವುದು, ಇತಿಹಾಸ ಪ್ರಸಿದ್ಧ ಹಿಂದೂ ನಾಯಕರನ್ನು ಟೀಕೆ ಮಾಡೋದೇ ಕೆಲಸವಾಗಿ ಬಿಟ್ಟಿದೆ.
ಅದರಲ್ಲೂ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯಂತೂ ಹಿಂದೂಗಳ ಮೇಲೆ, ಬಿಜೆಪಿಗರ ಮೇಲೆ ಆಗಾಗ ಟೀಕಾಪ್ರಹಾರ ಮಾಡುತ್ತಿರುತ್ತಾರೆ ಎಂದು ಹಿಂದೂ ಕಾರ್ಯಕರ್ತರ ಆರೋಪ ...
ಇದೀಗ ಮತ್ತೊಮ್ಮೆ ಇವರು ನಾಲಗೆ ಹರುಬಿಟ್ಟಿದ್ದು ಕೋರ್ಟ್ ಸಮನ್ಸ್ ಕೂಡಾ ಜಾರಿ ಮಾಡಿದೆ.
ನಾಲಗೆ ಹರಿಬಿಟ್ಟು ತಾನು ಬೀಳಲು ತಾನೇ ಗುಂಡಿ ತೋಡಿಕೊಂಡ ಪಪ್ಪು..!!
ಸ್ವಾತಂತ್ರ್ಯ ಹೋರಾಟಗಾರ ಮತ್ತು ಹಿಂದೂಗಳ ಆದರ್ಶ ನಾಯಕ ವೀರ ಸಾವರ್ಕರ್ ಅವರ ಬಗ್ಗೆ ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ರಾಜಕೀಯ ಚರ್ಚೆಗಳು ಮತ್ತು ಕಾನೂನು ಪ್ರಕ್ರಿಯೆಗಳನ್ನು ಹುಟ್ಟುಹಾಕಿದ್ದಕ್ಕಾಗಿ 2025ರ ಜನವರಿ 10ರಂದು ವಿಚಾರಣೆಗೆ ಹಾಜರಾಗಬೇಕೆಂದು ರಾಹುಲ್ ಗಾಂಧಿಗೆ ಲಕ್ನೋ ನ್ಯಾಯಾಲಯವು ಸಮನ್ಸ್ ನೀಡಿದೆ.
2022ರ ನವೆಂಬರ್ 17ರಂದು ಮಹಾರಾಷ್ಟ್ರದ ಅಕೋಲಾದಲ್ಲಿ ಒಂದು ಪತ್ರಿಕಾಗೋಷ್ಠಿ ನಡೆದಿತ್ತು.
ಅದರಲ್ಲಿ ವೀರ ಸಾವರ್ಕರ್ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವಹೇಳನಕಾರಿ ಭಾಷೆ ಬಳಸಿದ್ದಾರೆ ಎಂದು ಆರೋಪಿಸಿ ವಕೀಲ ನೃಪೇಂದ್ರ ಪಾಂಡೆ ದೂರು ಸಲ್ಲಿಸಿದ್ದು ಈ ಹಿನ್ನೆಲೆ ಈ ಆದೇಶವನ್ನು ಹೊರಡಿಸಲಾಗಿದೆ.
ಇವರ ಹೇಳಿಕೆಯ ಬಗ್ಗೆ ಹಿಂದೂಗಳಂತೂ ಸಿಡಿದೆದ್ದಿದ್ದಾರೆ. ಪರಂಪರೆಯಲ್ಲಿ ಅಳಿಸಲಾಗದ ಹಿಂದೂಗಳ ಆದರ್ಶ ವ್ಯಕ್ತಿ ಎಂದೇ ಪರಿಗಣಿಸುವ ವೀರ ಸಾವರ್ಕರ್ ಬಗ್ಗೆ ಭಾರತೀಯನೇ ಅಲ್ಲದ ಈತನಿಗೇನು ಗೊತ್ತು ಎಂದು ವ್ಯಂಗ್ಯವಾಡಿದ್ದಾರೆ.
ರಾಹುಲ್ ಗಾಂಧಿ ಸಾವರ್ಕರ್ ಕುರಿತು ನೀಡಿದ ಹೇಳಿಕೆಯೇನು..?
ರಾಹುಲ್ ಗಾಂಧಿ ತಮ್ಮ ಭಾಷಣದಲ್ಲಿ ವೀರ ಸಾವರ್ಕರ್ ಅವರನ್ನು “ಇಂಗ್ಲಿಷ್ ಸೇವಕ” ಮತ್ತು “ಪಿಂಚಣಿದಾರ” ಎಂದು ಉಲ್ಲೇಖಿಸಿದ್ದರು.
ಅಷ್ಟೇ ಅಲ್ಲದೆ ವೀರ ಸಾವರ್ಕರ್ ವಸಾಹತುಶಾಹಿ ಅವಧಿಯಲ್ಲಿ ಬ್ರಿಟಿಷರೊಂದಿಗೆ ಸಹಕರಿಸಿದ್ದರು ಎಂದು ಹೇಳಿದ್ದರು. ಸಾವರ್ಕರ್ ಅವರು ಬ್ರಿಟಿಷರಿಗೆ ಪತ್ರಗಳನ್ನು ಬರೆದು,
ಅವರ ಪರವಾಗಿ ಉಳಿಯಲು ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿದ್ದರು. ಭಯದಿಂದ ಕ್ಷಮೆಯಾಚಿಸುವುದಾಗಿಯೂ ಹೇಳಿದ್ದರು.
ಈ ಮೂಲಕ ಸಾವರ್ಕರ್ ಮಹಾತ್ಮ ಗಾಂಧಿ ಮತ್ತು ಇತರ ಸ್ವಾತಂತ್ರ್ಯ ಹೋರಾಟಗಾರರಿಗೆ ದ್ರೋಹ ಮಾಡಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದರು.
ಇತಿಹಾಸವನ್ನೇ ತಿರುಚಿದ ರಾಹುಲ್ ಗಾಂಧಿ ಹೇಳಿಕೆಗೆ ಇಡೀ ಹಿಂದೂ ಸಮಾಜ ಕೆಂಡಾಮಂಡಲವಾಗಿದ್ದು ಲಕ್ನೋ ಕೋರ್ಟ್ ಇದೀಗ ಸಮನ್ಸ್ ಕೂಡಾ ಜಾರಿ ಮಾಡಿದೆ.