ಪಶ್ಚಿಮ ಬಂಗಾಳ: ಭಾರತ ದೇಶ ವಿವಿಧತೆಯಲ್ಲಿ ಏಕತೆಯನ್ನು ಸಾರಿದ ದೇಶ ಎಂದು ಅದೆಷ್ಟೇ ಹೇಳಿದರೂ ಕೂಡಾ ಇಲ್ಲಿ ಹಿಂದೂ- ಮುಸ್ಲಿಂ ಗಲಾಟೆ, ವಾಗ್ವಾದಗಳು ನಡೆಯುತ್ತಲೇ ಇರುತ್ತದೆ. ಧಾರ್ಮಿಕ ಕೇಂದ್ರಗಳ ನಿರ್ಮಾಣ, ಪ್ರತಿರೋಧವಾಗಿ ಧ್ವಂಸ ಇವೆಲ್ಲಾ ಇಲ್ಲಿ ಹೊಸತೇನಲ್ಲ. ಇದೀಗ ಟಿಎಂಸಿ ನಾಯಕರೊಬ್ಬರ ವಿವಾದಾತ್ಮಕ ಹೇಳಿಕೆಯ ಬೆನ್ನಲ್ಲೇ ಬಿಜೆಪಿ ಖಡಕ್ ಎಚ್ಚರಿಕೆಯೊಂದನ್ನು ರವಾನಿಸಿದೆ.
ಟಿಎಂಸಿ ನಾಯಕನ ವಿವಾದಾತ್ಮಕ ಹೇಳಿಕೆಗೆ ಕೌಂಟರ್ ಕೊಟ್ಟ ಬಿಜೆಪಿ..!
ಬಾಬ್ರಿ ಮಸೀದಿ ಮಾದರಿಯಲ್ಲಿ ಪಶ್ಚಿಮ ಬಂಗಾಲದಲ್ಲಿ ನೂತನ ಮಸೀದಿ ನಿರ್ಮಿಸಲಾಗುವುದು, ಯಾರಿಂದ ಏನು ಮಾಡಲೂ ಸಾಧ್ಯವಿಲ್ಲ. ನಾವು ಮಸೀದಿ ನಿರ್ಮಿಸಿಯೇ ನಿರ್ಮಿಸುತ್ತೇವೆ ಎಂದು ಟಿಎಂಸಿ ನಾಯಕರೊಬ್ಬರು ಹೇಳಿಕೆ ನೀಡಿದ್ದರು. ಇದರಿಂದ ಬಿಜೆಪಿಗರು ಅದರಲ್ಲೂ ಹಿಂದೂಗಳು ಕೆಂಡಾಮಂಡಲವಾಗಿದ್ದರು. ಅದು ಸಾಧ್ಯವಿಲ್ಲವೆಂದು ಆಕ್ರೋಶವನ್ನು ಕೂಡಾ ವ್ಯಕ್ತಪಡಿಸಿದರು.
ನಾವು ರಾಮಮಂದಿರ ನಿರ್ಮಿಸುತ್ತೇವೆ- ಬಿಜೆಪಿ
ಟಿಎಂಸಿ ನಾಯಕನ ಹೇಳಿಕೆಯ ಬೆನ್ನಲ್ಲೇ, ಇದೀಗ ಅದೇ ಜಿಲ್ಲೆಯಲ್ಲಿ ರಾಮ ಮಂದಿರ ನಿರ್ಮಿಸುವುದಾಗಿ ಬಿಜೆಪಿ ಘೋಷಿಸಿದೆ. ಈ ಕುರಿತು ಹೇಳಿಕೆ ನೀಡಿರುವ ಮುರ್ಷಿದಾಬಾದ್ ಜಿಲ್ಲಾ ಬಿಜೆಪಿ ನಾಯಕರು, ಬೆಹ್ರಾಂಪುರದಲ್ಲಿ 2025ರ ಜ.22ರಂದು ಅಯೋಧ್ಯೆ ಮಂದಿರದ ವಿನ್ಯಾಸದಲ್ಲೇ ನಿರ್ಮಾಣ ಕಾರ್ಯ ಪ್ರಾರಂಭವಾಗಲಿದೆ ಎಂದಿದ್ದಾರೆ.
ನಾವು ಕೂಡಾ ರಾಮ ಮಂದಿರ ನಿರ್ಮಿಸಿಯೇ ಸಿದ್ಧ ಎಂದು ಪಣತೊಟ್ಟಿದ್ದಾರೆ. ಜಿಲ್ಲೆಯ ಬೆಲ್ಡಾಂಗಾದಲ್ಲಿ ಬಾಬ್ರಿ ಮಾದರಿ ಮಸೀದಿ ನಿರ್ಮಿಸುವುದಾಗಿ ಟಿಎಂಸಿ ಶಾಸಕ ಕಬೀರ್ ಮಂಗಳವಾರ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ವಿರುದ್ಧವಾಗಿ ಇದೀಗ ಬಿಜೆಪಿ ಖಡಕ್ ಆಗಿ ಉತ್ತರಿಸಿದೆ.