ಪುತ್ತೂರು: ಆನೆ ಪ್ರತ್ಯಕ್ಷ; ಕಾವು ಪುವಂದೂರು ಗ್ರಾಮಸ್ಥರಲ್ಲಿ ಆತಂಕ

  • 15 Dec 2024 02:55:43 PM

ಪುತ್ತೂರು: ಮಾಡನೂರು ಗ್ರಾಮದ ಕಾವು ಪುವಂದೂರಿನಲ್ಲಿ ನಿನ್ನೆ ರಾತ್ರಿಯ ವೇಳೆ (14 ಡಿಸೆಂಬರ್) ಸ್ವಾತಿ ಕೃಷ್ಣ ಭಟ್ ಅವರ ತೋಟದಲ್ಲಿ ಆನೆ ಪ್ರತ್ಯಕ್ಷವಾಗಿದೆ.

 

ತೋಟಕ್ಕೆ ಬಂದ ಆನೆಯು ಮನೆಯ ಬಾಗಿಲಿನವರೆಗೂ ಬಂದಿತೆಂದು ಎರಡು ತೆಂಗಿನ ಮರದ ಜೊತೆಗೆ ಹಲವಾರು ಅಡಿಕೆ ಗಿಡಗಳಿಗೆ ಹಾನಿಯನ್ನು ಉಂಟುಮಾಡಿದೆ ಎಂದು ತಿಳಿದು ಬಂದಿದೆ.

 

ಈ ಪ್ರದೇಶದ ಸುತ್ತಮುತ್ತಲು ಹಲವಾರು ಮನೆಗಳು ಇರುವುದರಿಂದ ಗ್ರಾಮಸ್ಥರಲ್ಲಿ ಜೀವಭಯ ಮೂಡಿಸಿದೆ.

ಇದೆ ತರ ಕಳೆದ ವಾರ ಸಮೀಪದ ಚಾಕೋಟೆ ಗ್ರಾಮದಲ್ಲೂ ಆನೆ ದಾಂಡಲೆ ನಡೆಸಿದ್ದು, ಹಲವಾರು ತೋಟಗಳಿಗೆ ಹಾನಿ ಉಂಟುಮಾಡಿತ್ತು.

 

ಇದರ ಕುರಿತಾಗಿ ಅರಣ್ಯ ಇಲಾಖೆಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳದಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿರುತ್ತದೆ.

ಕಾವು ಭಾಗದಲ್ಲಿ ಜೀವ ಹಾನಿಯುಂಟಾಗುವ ಮೊದಲು ಸೂಕ್ತ ಕ್ರಮಗಳನ್ನು ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆಯು ಕೈಗೊಳ್ಳಬಹುದು ಎಂಬ

 

ನಿರೀಕ್ಷೆಯಲ್ಲಿದ್ದೇವೆ ಎಂದು ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಪುತ್ತಿಲ ಪರಿವಾರ ಕಾವು ಘಟಕ ತಿಳಿಸಿದ್ದಾರೆ.