ಪುತ್ತೂರು: ನಿನ್ನೆ ರಾತ್ರಿ ಸುಮಾರು 11 ಗಂಟೆಗೆ ಪುತ್ತೂರಿನ ದರ್ಬೆ ಸರ್ಕಲ್ ಬಳಿ ಜಗದೀಶ್ ರೈ ಅವರ ಮೇಲೆ ದಾಳಿ ನಡೆದಿದೆ.
ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಜಗದೀಶ್ ರೈ ಅವರ ಹೇಳಿಕೆ ಹೀಗಿದೆ:
*ನಾನು ನನ್ನ ಜೀವನ ಸಾಗಿಸಲು ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ, ದರ್ಬೆ ಹತ್ತಿರ ಇರುವ ನನ್ನ ಕೆಲಸದ ಸ್ಥಳಕ್ಕೆ ಆಗಮಿಸಿ,
ಪುತ್ತೂರಿನ ರಾಜಾರಾಮ್ ಭಟ್ ಮತ್ತು ಅವರ ತಂಡದವರು ನನ್ನ ಮೇಲೆ ಏಕಾಏಕಿ ದಾಳಿ ನಡೆಸಿದ್ದಾರೆ.
ಅದಲ್ಲದೆ, ನನ್ನನ್ನು ಹಿಂಬಾಲಿಸುತ್ತಾ ದರ್ಬೆ ಸರ್ಕಲ್ ಹತ್ತಿರ ಬಂದು ಮಾರಣಾಂತಿಕ ದಾಳಿ ನಡೆಸಿದ್ದಾರೆ.
ಈ ದಾಳಿಯ ಉದ್ದೇಶ ನನ್ನನ್ನು ಕೊಲೆ ಮಾಡುವುದಕ್ಕಾಗಿದೆ ಎಂದೂ ಭಾಗ್ಯವಶಾತ್ ನಾನು ಜೀವಂತವಾಗಿದ್ದೇನೆ.
ದಾಳಿ ನಡೆಸಿದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನಾನು ತೀವ್ರವಾಗಿ ಆಗ್ರಹಿಸುತ್ತೇನೆ.* ಎಂದಾಗಿತ್ತು.
ಮಹಾವೀರ ಆಸ್ಪತ್ರೆಗೆ ದಾಖಲಾಗಿರುವ ಜಗದೀಶ್ ರೈ, ಪುತ್ತೂರು ನಗರ ಠಾಣೆಗೆ ಇಂಟಿಮೇಶನ್ ಕಳುಹಿಸಿ ಈ ಕುರಿತು ದೂರು ದಾಖಲಿಸಿದ್ದಾರೆ.
ಅದರೊಂದಿಗೆ ಅಮಲು ಪದಾರ್ಥ ಸೇವಿಸಿ ಗಲಾಟೆ ಮಾಡಲು ಬಂದಿದ್ದರೆಂದು ಜಗದೀಶ್ ರೈ ಅವರು ತೀವ್ರವಾಗಿ ಆರೋಪಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆಯನ್ನು ಪುತ್ತೂರು ನಗರ ಠಾಣೆ ಪೊಲೀಸರು ಮುಂದುವರಿಸಿದ್ದಾರೆ.