ತಬಲ ಮಾಂತ್ರಿಕ ಜಾಕೀರ್ ಹುಸೇನ್ ವಿಧಿವಶ! ಖಚಿತ ಪಡಿಸಿದ ಕುಟುಂಬ..

  • 16 Dec 2024 01:39:35 PM

ಸ್ಯಾನ್ ಫ್ರಾನ್ಸಿಸ್ಕೋ: ಜಾಗತಿಕ ಮಟ್ಟದಲ್ಲಿ ತಬಲಾ ಮಾಂತ್ರಿಕ ಎಂದು ಕ್ಯತಿಯಾದ ಜಾಕೀರ್ ಹುಸೇನ್ ಅವರು ಹೃದಯ ಸಂಬಂಧಿ

 

ತೊಂದರೆಗಳಿಂದ ಅಮೆರಿಕದ ಸ್ಯಾನ್‌ ಫ್ರಾನ್ಸಿಸ್ಕೋ ಆಸ್ಪತ್ರೆಯಲ್ಲಿ ನಿಧನರಾದರು ಎಂದು ಅವರ ಕುಟುಂಬ ಇಂದು (ಡಿ.16) ಬೆಳಗ್ಗೆ ಪ್ರಕಟಿಸಿದ್ದಾರೆ.

 

ಇವರು ಕಳೆದ ಎರಡು ವಾರಗಳಿಂದ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು.

 

ರವಿವಾರ ರಾತ್ರಿ ಅವರ ಆರೋಗ್ಯ ಹದಗೆಟ್ಟ ಕಾರಣ, ತಕ್ಷಣ ಅವರನ್ನು ಐಸಿಯುಗೆ ಸ್ಥಳಾಂತರಿಸಲಾಯಿತು.

 

 ಭಾನುವಾರ ರಾತ್ರಿ ಅವರ ಸಾವಿನ ಬಗ್ಗೆ ಸುಳ್ಳು ವರದಿಗಳು ಹರಡಿದ್ದವು. ಅದರ ಕುರಿತಾಗಿ ಕುಟುಂಬವು ಅದನ್ನು ತಕ್ಷಣವೆ ವದಂತಿ ಎಂದು ಅಲ್ಲಗೆಳೆಯಿತು.

 

ಅವರು ಜೀವಂತವಾಗಿದ್ದಾರೆ ಎಂದು ಖಚಿತಪಡಿಸಿದರು.

 

ಇಂದು ಬೆಳ್ಳಿಗೆ, ಕುಟುಂಬವು ಅಧಿಕೃತವಾಗಿ 73 ವರ್ಷದ ಜಾಕೀರ್ ಹುಸೇನ್ ಅವರು *ಇಡಿಯೋಪಥಿಕ್ ಪಲ್ಮನರಿ ಫೈಬ್ರೋಸಿಸ್* ನಿಂದ ನಿಧನರಾದರು ಎಂದು ತಿಳಿಸಿದ್ದಾರೆ.

 

ಪ್ರಸಿದ್ಧ ತಬಲಾ ವಾದಕ ಅಲ್ಲಾ ರಖಾ ಅವರ ಮಗನಾಗ ಜಾಕೀರ್ ಹುಸೇನ್ ಅವರು ತಬಲಾವನ್ನು ಜಾಗತಿಕ ಮಟ್ಟಕ್ಕೆ ಪರಿಚಯಿಸಿ ಅವರ ಪರಂಪರೆಯನ್ನು ಮುಂದುವರಿಸಿದರು. 

 

 

ಭಾರತದ ಶಾಸ್ತ್ರೀಯ ಸಂಗೀತ ಜಗತ್ತಿನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ಅವರು 1988ರಲ್ಲಿ ಪದ್ಮಶ್ರೀ,

 

2002ರಲ್ಲಿ ಪದ್ಮಭೂಷಣ ಮತ್ತು 2023ರಲ್ಲಿ ಪದ್ಮವಿಭೂಷಣ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ.

 

ಸಂಗೀತ ಲೋಕಕ್ಕೆ ಈ ನಷ್ಟವನ್ನು ಪೂರೈಸಲಾಗದು ಎಂದು ಜಗತ್ತಿನಾದ್ಯಂತ ಇರುವ ಅವರ ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.