ಮಹಿಳೆಯರು ಸ್ವಾವಲಂಬಿಗಳಾಗಬೇಕು ಆ ಮೂಲಕ ಆರ್ಥಿಕವಾಗಿ ಸಬಲರಾಗಬೇಕು ಎನ್ನುವ ಉದ್ದೇಶದಿಂದ ಕೇಂದ್ರ ಸರ್ಕಾರ ಹತ್ತು ಹಲವು ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಸದ್ಯ, ಸರ್ಕಾರದ ವತಿಯಿಂದ ಮಹಿಳೆಯರಿಗೆಮಹಿಳೆಯರಿಗೆ ಸರ್ಕಾರದಿಂದ ಸಿಗಲಿದೆ ಉಚಿತ ಹೊಲಿಗೆ ಯಂತ್ರ!;ಇಲ್ಲಿದೆ ನೋಡಿ ಅರ್ಜಿ ಸಲ್ಲಿಕೆಯ ವಿಧಾನ! ಉಚಿತ ಹೊಲಿಗೆ ಯಂತ್ರ ಸಿಗುವ ಸ್ಕೀಮ್ ಆರಂಭಗೊಂಡಿದ್ದು,ಇದನ್ನು ಪಡೆಯಲು ಹೇಗೆ ಅರ್ಜಿ ಸಲ್ಲಿಸುವುದು? ಅನ್ನುವ ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲಿದೆ.
50 ಸಾವಿರ ಮಹಿಳೆಯರಿಗೆ ಹೊಲಿಗೆ ಯಂತ್ರ!
ಉಚಿತ ಹೊಲಿಗೆ ಯಂತ್ರವನ್ನು ಮಹಿಳೆಯರಿಗೆ ನೀಡುವುದು ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಯೋಜನೆಯಾಗಿದ್ದು, ಈ ಮೂಲಕ ಆರ್ಥಿಕವಾಗಿ ಹಿಂದುಳಿದ ಮಹಿಳೆಯರು ಟೈಲರಿಂಗ್ ಮೂಲಕ ಮನೆಯಿಂದಲೇ ಹಣ ಸಂಪಾದಿಸಲಿ ಎಂಬುದು ಅವರ ಉದ್ದೇಶ. ಕರ್ನಾಟಕ, ಗುಜರಾತ್, ಮಹಾರಾಷ್ಟ್ರ ಸೇರಿದಂತೆ ಅನೇಕ ರಾಜ್ಯಗಳ ಮಹಿಳೆಯರಿಗೆ ಈ ಯೋಜನೆ ಸಹಕಾರಿಯಾಗಲಿದೆ. ಒಟ್ಟಾರೆಯಾಗಿ 50 ಸಾವಿರ ಮಹಿಳೆಯರಿಗೆ ಈ ಬಾರಿ ಉಚಿತ ಹೊಲಿಗೆ ಯಂತ್ರ ಸಿಗಲಿದೆ.
ಅರ್ಹತೆಗಳು?
ಈ ಯೋಜನೆ ಅರ್ಜಿ ಸಲ್ಲಿಸುವ ಮಹಿಳೆಯರಿಗೆ ಕೆಲವೊಂದು ಅರ್ಹತೆಗಳನ್ನು ನಿಗದಿಪಡಿಸಲಾಗಿದೆ.
•ಅರ್ಜಿದಾರರು 18ರಿಂದ 45ವರ್ಷ ವಯಸ್ಸಿನವರಾಗಿರಬೇಕು.
•ಕುಟುಂಬದ ವಾರ್ಷಿಕ ಆದಾಯ 2.5 ಲಕ್ಷಕ್ಕಿಂತ ಕಡಿಮೆಯಿರಬೇಕು.
•ಸರ್ಕಾರಿ ನೌಕರಿಯಲ್ಲಿರಬಾರದು ಮತ್ತು ಭಾರತೀಯ ಪೌರತ್ವ ಹೊಂದಿರಬೇಕು.
ಅರ್ಜಿ ಸಲ್ಲಿಕೆಗೆ ಬೇಕಾದ ದಾಖಲೆಗಳು?
1.ಆಧಾರ್ ಕಾರ್ಡ್
2.ಆದಾಯ ಪ್ರಮಾಣ ಪತ್ರ
3.ಪಾಸ್ ಪೋರ್ಟ್ ಸೈಜ್ ಫೋಟೋ
4.ವಾಸ ಸ್ಥಳದ ದೃಢೀಕರಣ ಪತ್ರ
ಅರ್ಜಿ ಸಲ್ಲಿಸುವುದು ಹೇಗೆ?
•ಮೊದಲು ಯೋಜನೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು.
•ಅಲ್ಲಿ (Free Sewing machine Scheme-2024) ಅರ್ಜಿ ನಮೂನೆ ಡೌನ್‌ಲೋಡ್ ಮಾಡಿ
• ಬಳಿಕ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ನಮೂನೆಯನ್ನು ಭರ್ತಿಮಾಡಿ ಸಲ್ಲಿಸಿ.