ಈ ವರ್ಷ ಪಾಕಿಸ್ತಾನಿಯರು ಗೂಗಲ್ ನಲ್ಲಿ ಹೆಚ್ಚು ಸರ್ಚ್ ಮಾಡಿದ್ದು ಇದನ್ನೇ...!! ಭಾರತೀಯರಂತೂ ಫುಲ್ ಖುಷ್...!!

  • 17 Dec 2024 01:07:17 PM

ಗೂಗಲ್ ನಮಗೆ ಎಲ್ಲಾ ಮಾಹಿತಿಗಳನ್ನು ಒದಗಿಸುವಂತಹ ಡಿಜಿಟಲ್ ಮಾಧ್ಯಮ.‌ ಮನೆಯಲ್ಲೇ ಕೂತು ಬೆರಳ ತುದಿಯಲ್ಲಿ ಮಾಹಿತಿ ಪಡೆದುಕೊಳ್ಳೋದು ಅಂತೀವಲ್ಲ ಅದಕ್ಕೆ ಮೂಲ ಕಾರಣ ಇದೇ. Google ನಲ್ಲಿ ನಮಗೆ ಯಾವ ವಿಚಾರದ ಬಗ್ಗೆ ಬೇಕಾದರೂ ನಿಖರವಾದ ಮಾಹಿತಿ ಲಭ್ಯವಾಗುತ್ತದೆ. ಇದರಿಂದ ನಮ್ಮ ಜ್ಞಾನ ಕೂಡಾ ವೃದ್ಧಿಯಾಗುತ್ತದೆ. ಪ್ರತಿ ವರ್ಷದ ಅಂತ್ಯದಲ್ಲಿ ಗೂಗಲ್ ತನ್ನ ಪ್ಲಾಟ್‌ಫಾರಂನಲ್ಲಿ ನಡೆದ ಮಹತ್ವದ ವಿಷಯಗಳನ್ನು ಹಂಚಿಕೊಳ್ಳುತ್ತದೆ.

 

ಡಿಸೆಂಬರ್ 15ರಿಂದಲೇ ಗೂಗಲ್ ಡೇಟಾ ಹೊರ ಬರಲು ಆರಂಭವಾಗಿದೆ. ಜಗತ್ತಿನ ಅತಿದೊಡ್ಡ ಮತ್ತು ಜನಪ್ರಿಯ ಸರ್ಚ್ ಇಂಜಿನ್ ಆಗಿರುವ ಗೂಗಲ್ 2024ರ ಕೆಲವು ಪ್ರಮುಖ ಹುಡುಕಾಟಗಳನ್ನು ಬಹಿರಂಗಪಡಿಸಿದೆ. ಈ ವರದಿಯಲ್ಲಿ ಯಾವ ದೇಶ ಏನು ಹುಡುಕಾಟ ನಡೆಸಿದೆ ಎನ್ನುವ ಕುತೂಹಲಕಾರಿ ವಿಚಾರ ಗೊತ್ತಾಗುತ್ತದೆ. ಇದೀಗ ಪಾಕಿಸ್ತಾನದವರು ಈ ವರ್ಷ ಗೂಗಲ್ ನಲ್ಲಿ ಹೆಚ್ಚು ಹುಡುಕಿರುವ ವಿಷಯ ಯಾವುದು ಕೇಳಿದ್ರೆ ನೀವು ಶಾಕ್ ಆಗೋದು ಗ್ಯಾರಂಟಿ..!

 

ಪಾಕಿಸ್ತಾನಿಯರು ಗೂಗಲ್ ನಲ್ಲಿ ಹೆಚ್ಚು ಸರ್ಚ್ ಮಾಡಿದ್ದು ಏನು ಗೊತ್ತಾ..?

 

ಗೂಗಲ್ ಪಾಕಿಸ್ತಾನಿಯರ ಹುಡುಕಾಟವನ್ನು ಕ್ರಿಕೆಟ್, ಸಿನಿಮಾ, ಧಾರಾವಾಹಿ, ಏನು ಮಾಡಬೇಕು?, ಏನು ಮಾಡಬಾರದು?, ಅಡುಗೆ, ತಂತ್ರಜ್ಞಾನ ಮತ್ತು ಸಾರ್ವಜನಿಕ ಸಮಸ್ಯೆಗಳು ಎಂಬ ವಿಭಾಗಗಳನ್ನಾಗಿ ವಿಂಗಡಿಸಿದೆ. Pakistan ನವರು ಹೌ ಟು ಎಂಬ ಸೆಕ್ಷನ್‌ನಲ್ಲಿ ಮತದಾನ ಕೇಂದ್ರಗಳ ಬಗ್ಗೆ ಹೆಚ್ಚೆಚ್ಚು ಮಾಹಿತಿಯನ್ನು ಹುಡುಕಿದ್ದಾರೆ.

 

ಇದನ್ನು ಹೊರತುಪಡಿಸಿದ್ರೆ ಭಾರತ, ಭಾರತೀಯರ ಹೆಸರು, ಭಾರತೀಯರ ಕೆಲಸಗಳ ಬಗ್ಗೆ ಅತ್ಯಧಿಕವಾಗಿ ಸರ್ಚ್ ಮಾಡಿದ್ದಾರೆ. ಹಗಲು-ರಾತ್ರಿ ಭಾರತದ ಬಗ್ಗೆ ತಿಳಿದುಕೊಳ್ಳಲು ಪಾಕಿಸ್ತಾನಿಯರು ಪ್ರಯತ್ನ ನಡೆಸಿರುವ ಸತ್ಯ ಇದೀಗ ಬಯಲಾಗಿದೆ. 

 

ಕ್ರಿಕೆಟ್ ಹಾಗೂ ಭಾರತದ ಸಿನಿಮಾಗಳ ಮೇಲೆ ಹೆಚ್ಚು ಒಲವು..!

 

T20 ವಿಶ್ವಕಪ್ ಸರಣಿಗೆ ಭಾರತದ ಕ್ರಿಕೆಟ್ ತಂಡದ ಮಾಹಿತಿಯನ್ನು ಪಾಕಿಸ್ತಾನಿಯರು ಗೂಗಲ್ ಮೂಲಕ ತಿಳಿದುಕೊಂಡಿದ್ದಾರೆ. ಅಷ್ಟೇ ಅಲ್ಲದೆ ಭಾರತ ವರ್ಸಸ್ ಪಾಕಿಸ್ತಾನ, ಭಾರತ ವರ್ಸಸ್ ಆಸ್ಟ್ರೇಲಿಯಾ, ಭಾರತ ವರ್ಸಸ್ ಇಂಗ್ಲೆಂಡ್ ಮತ್ತು ಭಾರತ ವರ್ಸಸ್ ಸೌಥ್ ಆಫ್ರಿಕಾ ಪಂದ್ಯಗಳ ಬಗ್ಗೆ ಹೆಚ್ಚು ಹುಡುಕಾಟ ನಡೆಸಲಾಗಿದೆ. ಇನ್ನು ಇವರು ಭಾರತದಲ್ಲಿ ಬಿಡುಗಡೆಯಾಗುವ ಸಿನಿಮಾಗಳ ಬಗ್ಗೆ ತಿಳಿದುಕೊಳ್ಳಲು ಹೆಚ್ಚು ಉತ್ಸುಕರಾಗಿದ್ದಾರೆ.

 

ಬಾಲಿವುಡ್‌ ಸಿನಿಮಾಗಳಾದ ಅನಿಮಲ್, ಸ್ಟ್ರೀ 2, ಭೂಲ್ ಭುಲೈಯಾ 3 ಮತ್ತು ಡಂಕಿ ಬಗ್ಗೆಯೂ ಗೂಗಲ್ ನಲ್ಲಿ ಮಾಹಿತಿ ಕಲೆ ಹಾಕಿದ್ದಾರೆ. ಹೀರಾಮಂಡಿ, 12th ಫೇಲ್, ಮಿರ್ಜಾಪುರ ಸೀಸನ್ 3 ಮತ್ತು ಬಿಗ್ ಬಾಸ್ 17 ವಿಷಯಗಳು ಸರ್ಚ್ ಪಟ್ಟಿಯಲ್ಲಿವೆ. ಭಾರತದ ಓಟಿಟಿ ಪ್ಲಾಟ್‌ಫಾರಂಗಳಾದ ಸೋನಿ, ಅಮೆಜಾನ್ ಪ್ರೈಮ್, ನೆಟ್‌ಫ್ಲಿಕ್ಸ್ ನಲ್ಲಿ ಯಾವ ಸಿನಿಮಾ ರಿಲೀಸ್ ಆಗಿದೆ ಎಂಬುದರ ಬಗ್ಗೆ ಕೂಡಾ ಗೂಗಲ್ ಮುಖೇನ ತಿಳಿದುಕೊಂಡಿದ್ದಾರೆ.

 

ಇನ್ನೂ ಮುಖ್ಯವಾಗಿ ಭಾರತದ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ ಸೇರಿದಂತೆ ಶ್ರೀಮಂತ ಉದ್ಯಮಿಗಳ ಹೆಸರು ಮತ್ತು ಅವರ ಮಾಹಿತಿಯನ್ನು ಕೂಡಾ ಶೋಧನೆ ಮಾಡಿದ್ದಾರೆ. ಒಟ್ಟಿನಲ್ಲಿ ಪಾಕಿಸ್ತಾನಿಯರು ಭಾರತದ ಎಲ್ಲಾ ವಿಚಾರಗಳನ್ನು ತಿಳಿದುಕೊಳ್ಳಲು ಹೆಚ್ಚು ಆಸಕ್ತಿ ಹೊಂದಿದ್ದಾರೆ ಎಂದು ಗೂಗಲ್ ಬಿಡುಗಡೆ ಮಾಡಿದ ಸತ್ಯಾಂಶಗಳಿಂದ ತಿಳಿದುಬಂದಿದೆ.