Viral News| ನಾಯಿಯ ಮೇಲೆ ಅತ್ಯಾಚಾರ ‌ಎಸಗಿದ‌ ಕಾಮುಕ!;ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ವಿಕೃತಕಾಮಿ ಅರೆಸ್ಟ್!

  • 17 Dec 2024 01:24:07 PM

ರಾಮನಗರ: ದಿನ ಬೆಳಗಾದರೆ ರಾಜ್ಯದಲ್ಲಿ ಮಹಿಳೆಯರು, ಯುವತಿಯರ ಮೇಲೆ ನಡೆಯುವ ಅತ್ಯಾಚಾರ, ಲೈಂಗಿಕ ಕಿರುಕುಳದಂತ ಸುದ್ದಿಗಳನ್ನು ಕೇಳುತ್ತಲೇ ಇರುತ್ತೇವೆ. ಆದರೆ ಇದೀಗ ವಿಕೃತ ಕಾಮಿಯೊಬ್ಬ ಮೂಕ ಪ್ರಾಣಿಯಾದ ನಾಯಿಯನ್ನೂ ಬಿಡದೆ ಅತ್ಯಾಚಾರ ಎಸಗಿದ್ದಾನೆ.‌

 

ಇಂತಹದ್ದೊಂದು ಅಮಾನವಿಯ ಘಟನೆ ನಡೆದಿದ್ದೆಲ್ಲಿ?, ಯಾರು ಈ ವಿಕೃತಕಾಮಿ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

 

ನಾಯಿಯ ಮೇಲೆರಗಿದ ಬಸವ!

 

ರಾಮನಗರ ಜಿಲ್ಲೆಯ ಚೆನ್ನಪಟ್ಟಣದ ಸಾತನೂರು ಎಂಬಲ್ಲಿ ಸ್ಥಳಿಯ ನಿವಾಸಿಯಾದ ಬಸವ ಎಂಬಾತ ನಾಯಿಯೊಂದನ್ನು ಹಗ್ಗದ ಸಮೇತ ನಿರ್ಜನ ಪ್ರದೇಶಕ್ಕೆ ಎಳೆದೊಯ್ದಿದ್ದ.

 

ಇದನ್ನು ಗಮನಿಸಿದ ಸ್ಥಳೀಯರು ಆತನನ್ನು ಹಿಂಬಾಲಿಸಿದಾಗ ಬಸವ ನಾಯಿಯೊಂದಿಗೆ ಅನೈಸರ್ಗಿಕ ಲೈಂಗಿಕ ಕ್ರೀಯೆಯಲ್ಲಿ ತೊಡಗಿರುವುದು ಕಂಡುಬಂದಿದೆ.

 

ಬಸವನ ಬೆಂಡೆತ್ತಿದ ಸ್ಥಳೀಯರು!

 

 ನಾಯಿಯೊಂದಿಗೆ ಅನೈಸರ್ಗಿಕ ಲೈಂಗಿಕ ಕ್ರಿಯೆಯಲ್ಲಿ ಬಸವ ತೊಡಗಿರುವುದನ್ನು ಗಮನಿಸಿದ ಸ್ಥಳೀಯರು ಕುಪಿತರಾಗಿ ಬಸವನ ಬೆಂಡೆತ್ತಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

 

ಸ್ಥಳಕ್ಕೆ ಆಗಮಿಸಿದ ಚೆನ್ನಪಟ್ಟಣ ಗ್ರಾಮಾಂತರ ಠಾಣಾ ಪೊಲೀಸರು ವಿಕೃತಕಾಮಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.‌ಒಟ್ಟಾರೆಯಾಗಿ ಇಂತಹ ಅಮಾನವೀಯ ಘಟನೆ ರಾಜ್ಯದಲ್ಲಿ ವರದಿಯಾಗುತ್ತಿರುವುದು ವಿಪರ್ಯಾಸವೇ ಸರಿ.