ಮಂಡ್ಯ: ಪ್ರೇಮಪಾಶಕ್ಕೆ ಸಿಲುಕಿ ಹದಿಹರೆಯದ ವಯಸ್ಸಿನಲ್ಲಿ ಜೀವನವನ್ನೇ ಹಾಳು ಮಾಡಿಕೊಳ್ಳುವ ಯುವಜನರ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿದೆ. ಸದ್ಯ, ಮಂಡ್ಯದಲ್ಲಿ ನಡೆದಿರುವ ದುರಂತ ಪ್ರೇಮ ಪ್ರಸಂಗವೊಂದು ಬಾರೀ ಸುದ್ದಿಯಾಗುತ್ತಿದೆ.
ಮದುವೆಯಾಗಿದ್ದ ಗೃಹಿಣಿಯೊಬ್ಬಳು ತನ್ನ ಪ್ರಿಯಕರನಿಗಾಗಿ ನದಿಗೆ ಹಾರಿದರೆ, ಅತ್ತ ಗೆಳತಿಯ ಸಾವಿನ ಸುದ್ದಿ ಕೇಳಿ ಯುವಕನೂ ಕೂಡ ನೇಣಿಗೆ ಶರಣಾಗಿದ್ದಾನೆ. ಈ ಬಗೆಗಿನ ಸ್ಟೋರಿ ಇಲ್ಲಿದೆ ನೋಡಿ.
ಮದುವೆಯಾಗಿದ್ದರೂ, ಪ್ರೀತಿ ಮಾಡುತ್ತಿದ್ದರು!
ಇಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಯರಗನಹಳ್ಳಿ ಗ್ರಾಮದ ಸೃಷ್ಟಿ(20) ಹಾಗೂ ಬನ್ನಹಳ್ಳಿ ಗ್ರಾಮದ ಪ್ರಸನ್ನ (25) ಕಾಲೇಜು ದಿನಗಳಿಂದ ಪ್ರೀತಿಸುತ್ತಿದ್ದರು. ಆದರೆ ಪ್ರಸನ್ನ ಸೃಷ್ಣಿಯನ್ನು ಪ್ರೀತಿಸುತ್ತಲೇ ಪರಸಂಗ ಮಾಡಿದ್ದ ಕಾರಣ ಇಬ್ಬರ ನಡುವೆ ಬ್ರೇಕಪ್ ಆಗಿ ಬೇರೆ ಬೇರೆ ಮಾದುವೆಯಾಗಿದ್ದರು.
ಆದರೆ ಮದುವೆಯ ಬಳಿಕ ಮತ್ತೆ ಪ್ರಸನ್ನ ಹಾಗೂ ಸೃಷ್ಟಿ ಪ್ರೀತಿಸಲು ಆರಂಭಿಸಿದ್ದಾರೆ.ಇದೇ ನೋಡಿ ದುರಂತ ಅಂತ್ಯಕ್ಕೆ ಮುನ್ನುಡಿ ಬರೆದಿದ್ದು.
ತ್ರಿಕೋನ ಪ್ರೇಮಕತೆ, ದುರಂತ ಅಂತ್ಯ!
ಪ್ರಸನ್ನ ಹಾಗೂ ಸೃಷ್ಟಿ ನಡುವೆ ಬ್ರೇಕಪ್ ಆದ ಬಳಿಕ. ಪ್ರಸನ್ನ ಸೃಷ್ಟಿಯ ಕ್ಲಾಸ್ ಮೇಟ್ ಆಗಿದ್ದ ಸ್ಪಂದನಾ ಎಂಬ ಹುಡುಗಿಯನ್ನು ಪ್ರೀತಿಸಿ ಮದುವೆಯಾದ. ಸೃಷ್ಟಿ ದಿನೇಶ್ ಎಂಬಾತನನ್ನು ಮದುವೆಯಾದಳು. ಆದರೆ ಇಬ್ಬರೂ ಬೇರೆ ಬೇರೆ ಮದುವೆಯಾದ ಬಳಿಕ ಮತ್ತೊಮ್ಮೆ ಸೃಷ್ಟಿ ಹಾಗೂ ಪ್ರಸನ್ನ ನಡುವೆ ಎರಡನೇ ಬಾರಿಗೆ ಪ್ರೇಮಾಂಕುರವಾಗಿದೆ.
ಇದು ಸೃಷ್ಟಿಯ ಗಂಡನಿಗೆ ತಿಳಿದು ಗಲಾಟೆಯಾಯಿತು. ಅಂತಿಮವಾಗಿ ಮನೆಬಿಟ್ಟ ಸೃಷ್ಟಿ ನದಿಗೆ ಹಾರಿ ಪ್ರಾಣ ಬಿಟ್ಟಿದ್ದಾಳೆ. ಆಕೆಯ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಪ್ರಸನ್ನ ಕೂಡ ನೇಣಿಗೆ ಶರಣಾಗಿದ್ದಾನೆ. ಸದ್ಯ, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಈ ತ್ರಿಕೋನ ಪ್ರೇಮ ಪುರಾಣವನ್ನು ಜಾಲಾಡುತ್ತಿದ್ದಾರೆ.