ಸುಳ್ಯ: ರಾಜಕೀಯ ಎಂದ ಮೇಲೆ ಪ್ರತಿಯೊಬ್ಬರಿಗೂ ಒಂದು ಪಕ್ಷ ಅಥವಾ ಯಾವುದಾದರೂ ಓರ್ವ ನಾಯಕನ ಮೇಲೆ ಹೆಚ್ಚಿನ ಅಭಿಮಾನವಿರೋದಂತೂ ಸಹಜ. ಅಂದ ಹಾಗೆ ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿಗೆ ಅಭಿಮಾನಿಗಳೇನು ಕಡಿಮೆಯೇ.
ಭಾರತವನ್ನು ವಿಶ್ವಗುರು ಮಾಡಲು ಹೊರಟ ಈ ಧೀಮಂತ ನಾಯಕನನ್ನು ದೇವರಂತೆ ಆರಾಧಿಸುವವರೂ ನಮ್ಮ ದೇಶದಲ್ಲಿದ್ದಾರೆ. ಇತರ ದೇಶದ ನಾಯಕರಿಗೂ ಇವರು ಮಾದರಿಯಾಗಿ ನಿಲ್ಲುತ್ತಾರೆ. ಅಂತಹ ಪ್ರಬುದ್ಧ ನಾಯಕನ ಪರ ವ್ಯಕ್ತಿಯೋರ್ವ ತನ್ನ ಆಮಂತ್ರಣ ಪತ್ರಿಕೆಯಲ್ಲಿ ಮತ ಯಾಚಿಸಿದ್ದ ಸುದ್ದಿ ಇದೀಗ ಸಖತ್ ವೈರಲ್ ಆಗ್ತಾ ಇದೆ.
ಕಳೆದ ಲೋಕಸಭಾ ಚುನಾವಣೆ ಸಂದರ್ಭ ವೈರಲ್ ಆಗಿದ್ದ ವಿವಾಹ ಪತ್ರಿಕೆ...!!
ಮೋದಿಗೆ ಮತ ನೀಡಿ ಎಂದು ಕಳೆದ ಲೋಕಸಭಾ ಚುನಾವಣೆಯ ಸಮಯದಲ್ಲಿ ಸುಳ್ಯ ಮೂಲದ ವ್ಯಕ್ತಿಯೊಬ್ಬ ತಮ್ಮ ವಿವಾಹ ಪತ್ರಿಕೆಯಲ್ಲಿ ಮುದ್ರಣ ಮಾಡಿದ್ದರು.
ಆ ಆಮಂತ್ರಣ ಪತ್ರಿಕೆಯಲ್ಲಿ ಮದುವೆ ಕಾರ್ಯಕ್ರಮದ ಬಗ್ಗೆ ಉಲ್ಲೇಖ ಮಾಡಿ ಕೊನೆಯಲ್ಲಿ `ಈ ಬಾರಿಯೂ ನರೇಂದ್ರ Modi ಯವರನ್ನು ಪ್ರಧಾನಿ ಮಾಡುವುದೇ ವಧೂವರರಿಗೆ ನೀಡುವ ಉಡುಗೊರೆ.
ಯಾಕೆಂದರೆ ನಮ್ಮ ಭವಿಷ್ಯ ಭಾರತ ಸುಭದ್ರವಾಗಿರಬೇಕು' ಎಂದು ಮುದ್ರಿಸಿದ್ದರು. ವಿವಾಹ ಪತ್ರಿಕೆಯಲ್ಲೂ ಮತ ಯಾಚನೆ ಮಾಡಿರುವುದರ ಬಗ್ಗೆ ಜನರಿಗೆ ಆಶ್ಚರ್ಯವಾಗಿತ್ತು. ಅಲ್ಲದೆ ಇದು ಚರ್ಚೆಗೂ ಕೂಡಾ ಗ್ರಾಸವಾಗಿತ್ತು.
ಪ್ರಕರಣ ರದ್ದುಗೊಳಿಸಿ ಆದೇಶ ಹೊರಡಿಸಿದ ಹೈಕೋರ್ಟ್..!!
ಕಡಬ ತಾಲೂಕಿನ ಆಲಂತಾಯ ನಿವಾಸಿ ಶಿವಪ್ರಸಾದ್ ತಮ್ಮ ವಿವಾಹ ಆಮಂತ್ರಣ ಪತ್ರಿಕೆಯಲ್ಲಿ ‘ಮೋದಿಗೆ ಮತ ಹಾಕಿದರೆ ನನಗೆ ಗಿಫ್ಟ್ ನೀಡಿದಂತೆ’ ಎಂದು ಮುದ್ರಣ ಮಾಡಿದ್ದರು.
ಇದು ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಮಾಡಿದಂತೆ ಎಂದು ಎಪ್ರಿಲ್ 17 ರಂದು ವರನ ವಿರುದ್ಧ ಚುನಾವಣಾ ನೋಡಲ್ ಅಧಿಕಾರಿಗಳಿಗೆ ದೂರು ಬಂದಿತ್ತು. ಬಳಿಕ ನ್ಯಾಯಾಲಯಕ್ಕೆ ಚುನಾವಣಾಧಿಕಾರಿಗಳು ವರದಿಯನ್ನು ಸಲ್ಲಿಸಿದ್ದು, ಮದುಮಗನ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿತ್ತು.
2024 ಮಾರ್ಚ್ 1 ರಂದು ಮದುವೆ ಆಹ್ವಾನ ಪತ್ರಿಕೆ ಮುದ್ರಣವಾಗಿದ್ದು, ಮಾರ್ಚ್ 16 ರಂದು ಜಾರಿಯಾಗಿದೆ. ಈ ಕಾರಣದಿಂದ ವರನ ವಕೀಲರು ಕೇಸು ರದ್ದು ಮಾಡಲು ಕೋರ್ಟ್‌ಗೆ ಮನವಿ ಮಾಡಿದ್ದರು. ಇದನ್ನು ಪರಿಗಣಿಸಿ High court ಏಕಸದಸ್ಯ ಪೀಠ, ಪ್ರಕರಣವನ್ನು ರದ್ದುಗೊಳಿಸಿದೆ. ಪ್ರಕರಣ ಕೂಡಾ ಅಂತ್ಯ ಕಂಡಿದೆ.